Advertisement

ಕಾಂಗ್ರೆಸ್‌-ಬಿಜೆಪಿಗೆ ಎಸ್‌ಯುಸಿಐ ಎದುರಾಳಿ: ಆರ್‌ಕೆ

02:37 PM Apr 06, 2019 | Naveen |

ವಾಡಿ: ಕಲಬುರಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಎಸ್‌ಯುಸಿಐ ಕಮ್ಯುನಿಸ್ಟ್‌ ಪಕ್ಷ ಪ್ರಬಲ
ಎದುರಾಳಿಯಾಗಿದೆ ಎಂದು ಸೋಷಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ ಯುಸಿಐ) ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಸಮಿತಿ
ಸದಸ್ಯ ಕಾಮ್ರೇಡ್‌ ವೀರಭದ್ರಪ್ಪ ಆರ್‌.ಕೆ. ಹೇಳಿದರು.

Advertisement

ಪಟ್ಟಣದ ಎಸ್‌ಯುಸಿಐ (ಸಿ) ಪಕ್ಷದ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು
ಮಾತನಾಡಿದರು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿಯ ಕೋಮುವಾದಿ ಆಡಳಿತಕ್ಕೆ ಕಾಂಗ್ರೆಸ್‌
ಪರ್ಯಾಯ ಎಂಬಂತೆ ಬಿಂಬಿಸಲಾಗುತ್ತಿದೆ. ದೇಶವನ್ನು ಆರು ದಶಕಗಳ ಕಾಲ ಆಳಿದ ಕಾಂಗ್ರೆಸ್‌ ಪಕ್ಷವೇ ಇಂದಿನ ಸಮಸ್ಯೆಗಳಿಗೆ
ಮೂಲ ಕಾರಣ ಎನ್ನುವ ಸತ್ಯವನ್ನು ವ್ಯವಸ್ಥಿತವಾಗಿ ಮರೆಮಾಚಲಾಗುತ್ತಿದೆ ಎಂದರು.

ಹಿಂದಿನ ಯುಪಿಎ ಆಡಳಿತದಲ್ಲಾದ ಭ್ರಷ್ಟಾಚಾರದ ಹಗರಣಗಳನ್ನು ಮರೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ ನೈಜವಾಗಿ
ಜನತಾಂತ್ರಿಕ-ಉದಾರವಾದಿ ಧೋರಣೆ ಪಕ್ಷವಲ್ಲ. ದೇಶದಲ್ಲಿ ತುರ್ತು ಪರಸ್ಥಿತಿ ಜಾರಿಗೊಳಿಸಿದ್ದು ಇದೇ ಕಾಂಗ್ರೆಸ್‌ ಪಕ್ಷ.
ಜನರ ಹಕ್ಕನ್ನು ದಮನಗೊಳಿಸುವ ಅನೇಕ ಕಾಯ್ದೆಗಳನ್ನು ಕಾಂಗ್ರೆಸ್‌ ಜಾರಿಗೆ ಎಂದಿದೆ ಎಂದು ದೂರಿದರು.

ಅಚ್ಚೇ ದಿನ್‌ ತರುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರಕಾರ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ವಾಗ್ಧಾನ ಮಾಡಿತ್ತು. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಿಂದಾಗಿ ಮಿಲಿಯಾಂತರ ಉದ್ಯೋಗಗಳು ನಾಶವಾಗಿವೆ. ಸಣ್ಣ ಉದ್ಯಮಗಳು ದಿವಾಳಿಯಾಗಿವೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾನೂ ತಿನ್ನಲ್ಲ, ತಿನ್ನೋದಕ್ಕೂ ಬಿಡಲ್ಲ ಎಂದ ಮೋದಿ ಪಕ್ಷ ಅಧಿಕಾರದಲ್ಲಿ ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ದೊಡ್ಡ ಅವ್ಯವಹಾರ ನಡೆಸಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ
ತೆರಿಗೆಯಿಂದ ಲಕ್ಷಾಂತರ ಕೋಟಿ ರೂ. ಲೂಟಿ ಹೊಡೆದಿದೆ. ಇಂತಹ ಭ್ರಷ್ಟ ಪಕ್ಷಗಳು ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಬೇಕು ಎಂದು ಹೇಳಿದರು.

ಎಸ್‌ಯುಸಿಐ (ಕಮ್ಯುನಿಸ್ಟ್‌) ಪಕ್ಷದ ಮುಖಂಡರಾದ ಮಲ್ಲಿನಾಥ ಹುಂಡೇಕಲ್‌, ರಾಘವೇಂದ್ರ ಅಲ್ಲಿಪುರ, ಶರಣು ವಿ.ಕೆ, ಗೌತಮ ಪರತೂರಕರ, ಶರಣು ಹೇರೂರ, ಗುಂಡಣ್ಣ ಎಂ.ಕೆ, ವಿಠ್ಠಲ ರಾಠೊಡ, ಮಲ್ಲಣ್ಣ ದಂಡಬಾ, ಯೇಶಪ್ಪ ಕೇದಾರ, ಶ್ರೀಶರಣ
ಹೊಸಮನಿ, ರಾಜು ಒಡೆಯರಾಜ, ನಂದೀಶ ಪೋದ್ದಾರ, ಅರುಣಕುಮಾರ ಹಿರೆಬೆಣ್ಣೂರ, ಅವಿನಾಶ ಒಡೆರಾಜ, ವೆಂಕಟೇಶ ಮತ್ತಿತರರು ಪಾಲ್ಗೊಂಡಿದ್ದರು.

Advertisement

ರಾಜ್ಯ ಸೇರಿದಂತೆ ದೇಶದ ಒಟ್ಟು 20 ರಾಜ್ಯಗಳ 119 ಸ್ಥಾನಗಳಲ್ಲಿ
ಎಸ್‌ಯುಸಿಐ ಪಕ್ಷದ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಲಬುರಗಿಯಿಂದ ಸ್ಪರ್ಧಿಸಿರುವ ನಮ್ಮ ಅಭ್ಯರ್ಥಿ ಎಸ್‌.ಎಂ.
ಶರ್ಮಾ ಗೆಲುವಿಗಾಗಿ ಕಾರ್ಯರ್ತರು ಪ್ರಚಾರ ಕಣಕ್ಕೆ ನುಗ್ಗಬೇಕು.
ಎಸ್‌ಯುಸಿಐ ಪಕ್ಷ ಜಿಲ್ಲೆಯಾದ್ಯಂತ ಕಟ್ಟಿರುವ ಜನಪರ ಹೋರಾಟಗಳನ್ನು ಜನತೆಗೆ ಮನವರಿಕೆ ಮಾಡಬೇಕು. .ವೀರಭದ್ರಪ್ಪ ಆರ್‌.ಕೆ.,
ಎಸ್‌ಯುಸಿಐ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next