Advertisement

ಮತ ಜಾಗೃತಿಗೆ ಬೃಹತ್‌ ಕ್ಯಾಂಡಲ್‌ ಮಾರ್ಚ್‌

12:49 PM Apr 13, 2019 | Team Udayavani |

ಕಲಬುರಗಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್‌ ಸಮಿತಿಯಿಂದ ಶುಕ್ರವಾರ ಮತದಾನ ಜಾಗೃತಿಗಾಗಿ ನಗರದಲ್ಲಿ ಬೃಹತ್‌
ಕ್ಯಾಂಡಲ್‌ ಮಾರ್ಚ್‌ ನಡೆಸಲಾಯಿತು. ನಗರದ ಲಾಲ್‌ಗೇರಿ ಕ್ರಾಸ್‌, ಸರ್ದಾರ
ವಲ್ಲಭಭಾಯಿ ಪಟೇಲ್‌ ವೃತ್ತ, ಬಸವೇಶ್ವರ ಆಸ್ಪತ್ರೆ ಹಾಗೂ ನಗರೇಶ್ವರ ಹೀಗೆ ನಾಲ್ಕು ಭಾಗಗಳಿಂದ ಬಂದ ಕ್ಯಾಂಡಲ್‌ ಮಾರ್ಚ್‌ ಮೆರವಣಿಗೆ ನಗರದ ಜಗತ್‌ ವೃತ್ತಕ್ಕೆ ಬಂದು ಸಂಪನ್ನಗೊಂಡಿತು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಸ್ವೀಪ್‌
ಸಮಿತಿಯಿಂದ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಕ್ಯಾಂಡಲ್‌ ಮಾರ್ಚ್‌ಗೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ನಗರದ ಸರ್ದಾರ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಚಾಲನೆ ನೀಡಿದರು. ಮಾರ್ಗದುದ್ದಕ್ಕೂ ಎಲ್ಲ ಇಲಾಖೆ ಅಧಿಕಾರಿಗಳು ಮತದಾನ ಮಾಡುವ ಕುರಿತು ಘೋಷಣೆ ಕೂಗಿ ಜನರಿಗೆ ಅರಿವು ಮೂಡಿಸಿದರು.

ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಡಾ| ಪಿ. ರಾಜಾ, ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್‌, ಡಿಡಿಪಿಐ ಶಾಂತಗೌಡ ಪಾಟೀಲ, ಚುನಾವಣೆಗೆ ನಿಯೋಜಿಸಿದ ನೋಡಲ್‌ ಅಧಿಕಾರಿಗಳು ಪಾಲ್ಗೊಂಡಿದ್ದರು. ಆಶಾ ಕಾರ್ಯಕರ್ತೆಯರು, ಅಂಗಡಿನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ಹಾಗೂ ಎರಡು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಕ್ಯಾಂಡಲ್‌ ಮಾರ್ಚ್‌ ಮೂಲಕ ಜಗತ್‌ ವೃತ್ತದಲ್ಲಿ ಸೇರಿದ
ಎಲ್ಲರಿಗೂ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಚಿತ್ರಕಲಾ ಸ್ಪರ್ಧೆ ಮೂಲಕ ಮತದಾನ ಜಾಗೃತಿ: ಪ್ರಸಕ್ತ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್‌ ಸಮಿತಿಯಿಂದ ನಗರದ ಸರ್ಕಾರಿ
ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ)ಯಲ್ಲಿ ಚಿತ್ರಕಲಾ ಸ್ಪರ್ಧೆ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಡಾ| ಪಿ. ರಾಜಾ ಕುಂಚ ಹಿಡಿದು ಚಿತ್ರ ಬಿಡಿಸಿದರು. ಈ ವೇಳೆ ವಿದ್ಯಾರ್ಥಿಗಳು ‘ಮತದಾನ ನಮ್ಮೆಲ್ಲರ ಹಕ್ಕು, ಆಮಿಷಕ್ಕೆ ಒಳಗಾಗದಿರಿ. ನಿಮ್ಮ ಮತ ಅಮೂಲ್ಯ, ವೋಟ್‌ ಫಾರ್‌ ಕಲಬುರಗಿ, ವೋಟ್‌ ಫಾರ್‌ ಇಂಡಿಯಾ,
ಮತದಾನ ನಮ್ಮೆಲ್ಲರ ಹಕ್ಕು’ ಮುಂತಾದ ಘೋಷಣೆವುಳ್ಳ ಚಿತ್ರಗಳಿಗೆ ರಂಗು ತುಂಬಿದರು.

Advertisement

ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಹಣ, ಮದ್ಯ, ಸೀರೆ ಮುಂತಾದವುಗಳನ್ನು ಹಂಚಲಿದ್ದು, ಇಂತಹ ಆಮಿಷಗಳಿಗೆ ಮರುಳಾಗಬೇಡಿ. ಪ್ರತಿಯೊಬ್ಬರೂ ಮುಕ್ತ ಮತ್ತು ನಿರ್ಭಿತಿಯಿಂದ ಮತ ಚಲಾಯಿಸುವ
ಮೂಲಕ ಪ್ರಜಾಪ್ರಭುತ್ವ ಎತ್ತಿ ಹಿಡಿಯಬೇಕು ಎಂದು ವಿದ್ಯಾರ್ಥಿಗಳು ಜನತೆಗೆ ಸಂದೇಶ ಸಾರಿದರು. ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್‌, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ, ಪಾಲಿಕೆ ಪರಿಸರ
ಎಂಜಿನಿಯರ್‌ ಮುನಾಫ್‌ ಪಟೇಲ್‌, ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next