Advertisement

ಗುರುಮಠಕಲ್‌ಗೆ ಮೊದಲ ಆದ್ಯತೆ: ಜಾಧವ

03:02 PM Apr 12, 2019 | Team Udayavani |

ಗುರುಮಠಕಲ್‌: ಕಲಬುರಗಿ ಲೋಕಸಭಾ ಕ್ಷೇತ್ರದಿಂದ ನನ್ನನು ಆಯ್ಕೆ ಮಾಡಿದರೆ ಅಭಿವೃದ್ಧಿಯಲ್ಲಿ ಗುರುಮಠಕಲ್ಲಗೆ ಪ್ರಥಮ ಆದ್ಯತೆ ನೀಡಲಾಗುವುದು. ಇಲ್ಲಿನ ನಿರುದ್ಯೋಗ ಸಮಸ್ಯೆ ಬಗೆಹರಿಸುತ್ತೇನೆ ಎಂದು
ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಹೇಳಿದರು.

Advertisement

ಗುರುಮಠಕಲ್‌ ಮತಕ್ಷೇತ್ರದ ಚಂಡರಕಿ, ಕೊಂಕಲ್‌, ಕಂದಕೂರ, ಗುರುಮಠಕಲ್‌ ಹೋಬಳಿಗಳಲ್ಲಿ ಏರ್ಪಡಿಸಲಾಗಿದ್ದ ಪಕ್ಷದ ಕಾರ್ಯಕರ್ತರ
ಸಮಾವೇಶದಲ್ಲಿ ಅವರು ಮಾತನಾಡಿದರು. ಕಲಬುರಗಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಖರ್ಗೆ ಅವರು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ. ಅದರ ಹೊರತಾಗಿ ತಮ್ಮದೇ ಶಿಕ್ಷಣ ಸಂಸ್ಥೆ ಸ್ಥಾಪಿಸಿಕೊಂಡು ಬಡವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಗುರುಮಠಕಲ್‌ ಮತಕ್ಷೇತ್ರದ ಜನರ ಮತ ಪಡೆದುಕೊಂಡು ತಂದೆ-ಮಗ ಇಬ್ಬರು ಅಧಿಕಾರ ಅನುಭವಿಸುತ್ತಿದ್ದಾರೆ. ಚುನಾವಣೆಯಲ್ಲಿ ತಂದೆ-ಮಗನಿಗೆ ಕ್ಷೇತ್ರದ ಜನರು ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು.

ಇಷ್ಟು ದಿನ ಮತ ನೀಡಿ ಮೋಸ ಹೋಗಿರೋದು. ಸಾಕು ಇನ್ನು ಮುಂದೆ ಮೋಸ ಹೋಗೋದು ಬೇಡ. ಇದೀಗ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಲಚಕ್ರದ ಬದಲಾವಣೆಗೆ ಯುದ್ದ ನಡೆದಿದೆ. ಇದರಲ್ಲಿ ಬದಲಾವಣೆಗಾಗಿ ಮತದಾರರು ತಮನ್ನು ಬೆಂಬಲಿಸಿ ಮತ ನೀಡಿದರೆ ಗುರುಮಠಕಲ್‌ಗೆ ಮೊದಲ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.

ಗುರುಮಠಕಲ್‌ ಮತಕ್ಷೇತ್ರದ ಮಾಜಿ ಶಾಸಕ ಬಾಬುರಾವ ಚಿಂಚನಸೂರ ಮಾತನಾಡಿ, ನಾನು ಮತ್ತು ಮಾಲೀಕಯ್ಯ ಗುತ್ತೇದಾರ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಜೋಡೆತ್ತುಗಳು ಇದ್ದಂತೆ. ನಾವುಬ್ಬರು ಸೇರಿ ಖರ್ಗೆ ಅವರಿಗೆ ತಕ್ಕಪಾಠ ಕಲಿಸಲ್ಲಿದ್ದೇವೆ ಎಂದು ಹೇಳಿದರು. ನಮ್ಮನು ಬಳಸಿಕೊಂಡು ಗೆದ್ದ ಬಳಿಕ ತುಳಿಯಲು ಪ್ರಯತ್ನಿಸಿದ ಖರ್ಗೆ ಅವರಿಗೆ ಈ ಚುನಾವಣೆಯಲ್ಲಿ ಮತದಾರರು ಉತ್ತರಿಸಿಲಿದ್ದಾರೆ. ಇದರಿಂದ ನಮ್ಮ ಶಕ್ತಿ ಏನು ಎಂಬುದು ತಿಳಿಯಲಿದೆ ಎಂದು ಹೇಳಿದರು.

Advertisement

ಖರ್ಗೆ ಕ್ಷೇತ್ರದ ಅಭಿವೃದ್ಧಿ ಮರೆತ್ತಿದ್ದಾರೆ. ನಾನು ಶಾಸಕನಾಗಿ ಕ್ಷೇತ್ರದ 89 ಕೆರೆಗಳಿಗೆ ನೀರಾವರಿ ಮಾಡಲು ಕೆರೆ ತುಂಬಿಸುವ ಯೋಜನೆಗೆ ಅನುದಾನ ತಂದಿದ್ದೇನೆ. ಸಾಯಿಬಣ್ಣ ಹೋರಾಟ ಮತ್ತು ನನ್ನ ಹಾರಾಟದ ಫಲವಾಗಿ ಕ್ಷೇತ್ರದಲ್ಲಿ ಈಗ ನೀರಾವರಿಯಾಗಲಿದೆ. ಮುಂಬರುವ ದಿನಗಳಲ್ಲಿ ನೀರಾವರಿ ಕ್ರಾಂತಿ ಮಾಡಿ ಅಭಿವೃದ್ಧಿ ಪಥದತ್ತ ಸಾಗಲಿದೆ. ಡಾ| ಉಮೇಶ ಜಾಧವ ಗೆದ್ದರೆ
ಮಂತ್ರಿಯಾಗಲ್ಲಿದ್ದಾರೆ. ಕ್ಷೇತ್ರಕ್ಕೆ ಕೈಗಾರಿಕೆಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡ ಸಾಯಿಬಣ್ಣ ಬೋರಬಂಡಾ ಮಾತನಾಡಿ, ದೇಶದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಗುಳೆ ಹೋಗುವವರು ಗುರುಮಠಕಲ್ಲ ಕ್ಷೇತ್ರದಲ್ಲಿದ್ದಾರೆ. ಗುಳೆ ತಪ್ಪಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಟೀಕಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ, ರಾಜ್ಯ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ಮಾತನಾಡಿದರು.

ಬ್ಲಾಕ್‌ ಅಧ್ಯಕ್ಷ ನರಸಿಂಹಲು ನಿರೇಟಿ, ವಿಕ್ರಮಂ ಪಾಟೀಲ, ಮಹೇಂದ್ರರೆಡ್ಡಿ ಕಂದಕೂರ, ರಾಜ್ಯ ಕಾರ್ಯದರ್ಶಿ ರವೀಂದ್ರರೆಡ್ಡಿ, ವಿಜಯಕುಮಾರ ಚಿಂಚನಸೂರ,ಜನಾರ್ದನ ರಾಠೊಡ, ರಾಜೇಂದ್ರ ಕಲಾಲ, ಜಿಪಂ ಮಾಜಿ ಸದಸ್ಯರಾದ ದೇವರಾಜ ನಾಯಕ ಉಳೆಸೂಗುರು, ಚಂದ್ರಶೇಖರ, ಶರಣಗೌಡ
ಬಾಡಿಯಾಲ್‌, ಗಂಗಪ್ಪ, ಕೆ. ಚಂದುಲಾಲ್‌ ಚೌದ್ರಿ, ವೆಂಕಟಪ್ಪ ಅವಾಂಗಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next