Advertisement
ಪಟ್ಟಣದ ವಾಸವಿ ಕಲ್ಯಾಣ ಮಂಟಪದ ಎದುರುಗಡೆಯ ಸ್ಥಳದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿಗೆ ದೇಶದ ರೈತರ ಬಗ್ಗೆ ಚಿಂತೆಯಿಲ್ಲ. ಬದಲಿಗೆ ಅದಾನಿ, ಅಂಬಾನಿಯ 3 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಬಿಜೆಪಿಯ ಪ್ರಣಾಳಿಕೆ ಕೇವಲ ಮೋದಿ ಮುಖ ಸ್ತುತಿಯಾಗಿದೆ. ರೈತರು, ಯುವಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರ ಬಗ್ಗೆ ಯಾವುದೇ ಕೊಡುಗೆಯಿಲ್ಲ. ತಾವೊಬ್ಬರೇ ದೇಶಭಕ್ತರಂತೆ ವರ್ತಿಸುತ್ತಿದ್ದಾರೆ. ನಾವೇನು ದೇಶದ್ರೋಹಿಗಳಾ? 1947 ರಲ್ಲಿ ಕಾಂಗ್ರೆಸ್ ಹೋರಾಟದ ಫಲವಾಗಿ ಸ್ವಾತಂತ್ರ್ಯ ಸಿಕ್ಕಿತು. ಬಿಜೆಪಿಯನ್ನು ಆಡಿಸುತ್ತಿರುವ ಆರ್.ಎಸ್. ಎಸ್. ಸ್ವಾತಂತ್ರ್ಯ ಸಿಕ್ಕು 55 ವರ್ಷಗಳಾದ ನಂತರ ಅಂದರೆ2002 ರಲ್ಲಿ ತನ್ನ ಕೇಂದ್ರ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸಿದೆ.
ಇದ್ಯಾವ ದೇಶಪ್ರೇಮ ಎಂದು ಪ್ರಶ್ನಿಸಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬೇರೆ ದೇಶದ ಸ್ಯಾಟಲೈಟ್ ಉರುಳಿಸಿದ ಬಗ್ಗೆ ಬಿಜೆಪಿಯವರು ಸುದ್ದಿಗೋಷ್ಠಿ ಮಾಡ್ತಾರೆ. ಉದ್ಯೋಗ ಖಾತ್ರಿ ಯೋಜನೆಯ 3 ಸಾವಿರ ಕೋಟಿ ರೂ. ರಾಜ್ಯಕ್ಕೆ ಬಿಡುಗಡೆ ಮಾಡದ ಕೇಂದ್ರ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಡಾ| ಉಮೇಶ ಜಾಧವ ಸ್ಥಿತಿ ಈಗ ಐಪಿಎಲ್ ಕ್ರಿಕೆಟ್ ಮ್ಯಾಚ್ ನ ಆರ್.ಸಿ.ಬಿ ತಂಡದಂತಾಗಿದೆ. ಸೋತವರೆಲ್ಲರೂ ಸೇರಿ ಜಾಧವ ಅವರನ್ನು ಗೆಲ್ಲಿಸಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ವ್ಯಂಗವಾಡಿದರು. ಕುಟುಂಬ ರಾಜಕಾರಣದ ಆರೋಪ ಮಾಡುವ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ ಮೊದಲು ತಮ್ಮ ತಟ್ಟೆಯಲ್ಲಿನ ಬಿದ್ದಿರುವುದು ಹೆಗ್ಗಣಗಳ
ಬಗ್ಗೆ ಅರಿತುಕೊಳ್ಳಲಿ. ಬಿಜೆಪಿ ಶಾಸಕ ಅಪ್ಪುಗೌಡ, ಬಿ.ಜಿ. ಪಾಟೀಲ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಮಾಲೀಕಯ್ಯ ಗುತ್ತೇದಾರ ಒಳಗೊಂಡ ಅನೇಕರ ಉದಾಹರಣೆ ಮುಂದಿಟ್ಟು, ಈ ಎಲ್ಲರ ಕುಟುಂಬದಲ್ಲಿ
ಯಾರೂ ರಾಜಕಾರಣಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.
Related Articles
ತಪ್ಪಿದರೂ ಅವರು ಪಕ್ಷ ಬಿಟ್ಟಿಲ್ಲ. ಆದರೆ ಡಾ| ಉಮೇಶ ಜಾಧವ ತಮ್ಮ ಅಸ್ತಿತ್ವ ಮಾರಿಕೊಂಡು ಬಿಜೆಪಿ ಸೇರಿದ್ದಾರೆ. ಪ್ರಧಾನಿ ಮೋದಿ ತಪ್ಪು ನೀತಿಯಿಂದ ತೊಗರಿ ಬೆಳೆಗಾರರಿಗೆ ನಷ್ಟವಾಗಿದೆ. ನಾನು ಗುತ್ತಿಗೆದಾರರಿಂದ ಪರ್ಸಂಟೇಜ್ (ಪ್ರತಿಶತ) ತೆಗೆದುಕೊಂಡಿದ್ದರೆ, ಸೇಡಂ ಇಷ್ಟರ ಮಟ್ಟಿಗೆ
ಅಭಿವೃದ್ಧಿ ಆಗುತ್ತಿರಲಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆ ಪ್ರಜಾಪ್ರಭುತ್ವದ ಅಳಿವು-ಉಳಿವಿನ ಚುನಾವಣೆಯಾಗಿದೆ. ಈ ಬಾರಿ ಖರ್ಗೆ ಗೆಲುವು ಸಾಧಿಸಿದರೆ ಮುಂದೆ ಪ್ರಧಾನಿಯಾಗುವ ಅವಕಾಶಗಳಿವೆ
ಎಂದರು.
Advertisement
ಮುಖಂಡ ಮುಕ್ರಂಖಾನ್, ಸತೀಶರೆಡ್ಡಿ ಪಾಟೀಲ ರಂಜೋಳ, ಜಿಪಂ ಸದಸ್ಯ ದಾಮೋದರರೆಡ್ಡಿ ಪಾಟೀಲ, ಧೂಳಪ್ಪ ದೊಡ್ಡಮನಿ, ವೆಂಕಟರಾಮರೆಡ್ಡಿಕಡತಾಲ, ಅಮೀನರೆಡ್ಡಿ, ರಾಮಯ್ಯ ಪೂಜಾರಿ, ಕಮಾಲುದ್ದಿನ್ ಚಿಸ್ತಿ, ವೀರಾರೆಡ್ಡಿ ಹೂವಿನಬಾವಿ, ಜೈಭೀಮ ಊಡಗಿ, ಭೀಮರಾವ ಅಳ್ಳೊಳ್ಳಿ, ಬಾಬಾ, ನಾಗೇಶ ಕಾಳಾ, ಅನಂತಯ್ಯ ಮುಸ್ತಾಜರ, ಜಗನ್ನಾಥ
ಚಿಂತಪಳ್ಳಿ, ಮಾರುತಿ ಕೊಡಂಗಲಕ್ ಇನ್ನಿತರರು ವೇದಿಕೆಯಲ್ಲಿದ್ದರು.ಇದೇ ವೇಳೆ ಮಾಜಿ ಪುರಸಭೆ ಸದಸ್ಯ ರಾಜು ಕಾಳಗಿ ಹಾಗೂ ಚೋಟಗಿರಣಿ, ಅರೆಬೊಮ್ನಳ್ಳಿ, ಬಟಗೇರಾ ಸೇರಿದಂತೆ ಅನೇಕ ಗ್ರಾಮಗಳ ಗ್ರಾಮಸ್ಥರು ಬಿಜೆಪಿ
ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ತನ್ನ ಎದೆ ಬಗೆದರೆ ಮಲ್ಲಿಕಾರ್ಜುನ ಖರ್ಗೆ ಕಾಣುತ್ತಾರೆ. ಮಲ್ಲಿಕಾರ್ಜುನ
ಖರ್ಗೆ ಎಂದರೆ ಎರಡನೇ ಅಂಬೇಡ್ಕರ್ ಇದ್ದಂತೆ ಎಂದು ಹೇಳುತ್ತಿದ್ದ ಮಾಜಿ ಸಚಿವ ಬಾಬುರಾವ ಚಿಂಚನಸೂರ ಎದೆಯಲ್ಲಿ ಈಗ ಫೋಟೊ ಚೇಂಜ್ ಆಗಿದೆ. ಈಗ ಎದೆ ಬಗೆದರೆ ಮೋದಿ, ಯಡಿಯೂರಪ್ಪ ಕಾಣಿಸುತ್ತಿದ್ದಾರೆ. ತಮ್ಮ ಸ್ಥಾನ ಗೆಲ್ಲಲಾಗದ ಬಾಬುರಾವ ಚಿಂಚನಸೂರ ಮತ್ತು ಮಾಲೀಕಯ್ಯ ಗುತ್ತೇದಾರ ಈಗ ಉಮೇಶ ಜಾಧವ ಅವರನ್ನು ಗೆಲ್ಲಿಸಲು ಮುಂದಾಗಿರುವುದು ಹಾಸ್ಯಾಸ್ಪದವಾಗಿದೆ.
ಪ್ರಿಯಾಂಕ್ ಖರ್ಗೆ,
ಜಿಲ್ಲಾ ಉಸ್ತುವಾರಿ ಸಚಿವ