ಕಲಬುರಗಿ: 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮಾರ್ಗ ನಿಗದಿಪಡಿಸಲಾಗಿದ್ದು, ಡಾ| ಎಸ್.ಎಂ. ಪಂಡಿತ ರಂಗಮಂದಿರದಿಂದ ಮೆರವಣಿಗೆ ಆರಂಭವಾಗಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ತಿಳಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ರವಿವಾರ ಜಿಲ್ಲಾಧಿಕಾರಿ ಶರತ್ ಬಿ., ನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಅವರೊಂದಿಗೆ ಶಾಸಕರು ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು. ಸಮ್ಮೇಳನಾಧ್ಯಕ್ಷರ ಮೆರವಣಿಗೆ ರಂಗಮಂದಿರದಿಂದ ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್ ಬಳಿ ಬಲಕ್ಕೆ ತಿರುಗಿ ರಿಂಗ್ ರಸ್ತೆ ಮೂಲಕ ಕುಸನೂರು ರಸ್ತೆ ಮಾರ್ಗವಾಗಿ ಸಮ್ಮೇಳನ ನಡೆಯುವ ಗುಲಬರ್ಗಾ ವಿಶ್ವವಿದ್ಯಾಲಯ ಆವರಣ ತಲುಪಲಿದೆ ಎಂದರು.
ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಮಾತನಾಡಿ, ಸಮ್ಮೇಳನದ ಮೊದಲ ದಿನ ನಗರದ ರಂಗಮಂದಿರದಿಂದ ಮೆರವಣಿಗೆ ಹೊರಡಲಿದೆ. ಆದರೆ, ವಿವಿ ಪ್ರಮುಖ ದ್ವಾರದ ಮಾರ್ಗವಾಗಿ ಬಂದರೆ, ಎಂಟೂವರೆ ಕಿಲೋ ಮೀಟರ್ ದೂರವಾಗುತ್ತದೆ. ಕುಸನೂರು ರಸ್ತೆ ಮಾರ್ಗವಾಗಿ ಮೆರವಣಿಗೆ ಹಾಯ್ದು ಬಂದರೆ, ಎರಡೂವರೆ ಕಿಲೋ ಮೀಟರ್ ಅಂತರ ಕಡಿಮೆಯಾಗಲಿದೆ.
ಗಣ್ಯರು ಮುಖ್ಯದ್ವಾರದ ಮೂಲಕ ಪ್ರವೇಶಿಸಲಿದ್ದು, ಇದಕ್ಕಾಗಿ 200 ಮೀಟರ್ ಮೆಟಲ್ ರಸ್ತೆ ನಿರ್ಮಿಸುವ ಅಗತ್ಯವಿದೆ ಎಂದರು. ಇದಕ್ಕೆ ಶಾಸಕರು ಹಾಗೂ ಜಿಲ್ಲಾಧಿಕಾರಿ ಸಮ್ಮತಿ ಸೂಚಿಸಿದರು.
ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ, ಸಾರ್ವಜನಿಕರು ಮತ್ತು ಪ್ರತಿನಿ ಧಿಗಳಿಗೆ ಪ್ರತ್ಯೇಕ ಊಟದ ವ್ಯವಸ್ಥೆಯಾಗಬೇಕು. ವೇದಿಕೆ ಒಂದೇ ಬದಿಯಲ್ಲಿ ಫುಡ್ ಕೌಂಟರ್ ಸ್ಥಾಪಿಸಬೇಕು. ಈ ಹಿನ್ನೆಲೆಯಲ್ಲಿ ಇಡೀ ಸ್ಥಳವನ್ನು ಅಳೆದು ಲಭ್ಯ ಜಾಗದ ಬಗ್ಗೆ ತುರ್ತಾಗಿ ನೀಲಿನಕ್ಷೆ ತಯಾರಿಸಿ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಕುಸನೂರು ರಸ್ತೆಯ ಪ್ರಸ್ ಕ್ಲಬ್ ಆಫ್ ಗುಲಬರ್ಗಾ ಸುತ್ತಮುತ್ತ ಪ್ರವೀಣ ಗಾರಂಪಳ್ಳಿ ಅವರಿಗೆ ಸೇರಿದ 32 ಎಕರೆ ಭೂಮಿ ಇದ್ದು, ಪಾರ್ಕಿಂಗ್ ಸೌಲಭ್ಯಕ್ಕೆ ನೀಡಲು ಒಪ್ಪಿದ್ದಾರೆ. ಕುಸನೂರು ರಸ್ತೆಯಿಂದ ವಾಹನಗಳು ಪ್ರವೇಶ ಪಡೆಯಲಿದ್ದು, ಶಹಾಬಾದ ರಸ್ತೆಯಿಂದ ಹೊರಕ್ಕೆ ಹೋಗಬಹುದಾಗಿದೆ. ಹೊರಕ್ಕೆ ಹೋಗುವುದಕ್ಕಾಗಿ 200 ಮೀಟರ್ ರಸ್ತೆ ನಿರ್ಮಿಸಬೇಕಾಗಿದೆ ಎಂದು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದರು. ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಅಮೀನ್ ಮುಖಾ¤ರ್ ಹಾಗೂ ಅ ಧಿಕಾರಿಗಳು ಹಾಜರಿದ್ದರು .