Advertisement
ನಗರದ ನೂತನ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷೆ ಸುವರ್ಣ ಹಣಮಂತ ಮಲಾಜಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಜಿಪಂ 15ನೇ ಸಾಮಾನ್ಯ ಸಭೆಯಲ್ಲಿ ಅಂಗನವಾಡಿಗಳಲ್ಲಿ ಮೊಟ್ಟೆ ವಿತರಣೆಯಲ್ಲಿ ಅವ್ಯವಹಾರ ಮತ್ತು ಮಕ್ಕಳು ಹಾಗೂ ಗರ್ಭೀಣಿಯರಿಗೆ ವಿತರಿಸುವ ಕಳಪೆ ಆಹಾರ ಸಾಮಗ್ರಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
Related Articles
Advertisement
ಪೌಡರ್ ತನ್ನಿ…ಪೌಡರ್: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಮತ್ತು ಗರ್ಭಿಣಿಯರಿಗೆ ಬೆಲ್ಲ, ಬೇಳೆಕಾಳು ಮಿಶ್ರಿತ ಪೌಷ್ಟಿಕಾಂಶದ ಪೌಡರ್ ಸಹ ಕಳಪೆ ಗುಣಮಟ್ಟದಿಂದ ಕೂಡಿದೆ. ಇದನ್ನು ದನ-ಕರುಗಳು ತಿನ್ನುವುದಿಲ್ಲ. ಬೇಕಾದರೆ ಸಭೆಗೆ ಪೌಡರ್ ತರಿಸಿ ನೋಡಿ. ಅದರ ಗುಣಮಟ್ಟ ತಿಳಿಯಲು ಯಾವುದೇ ಲ್ಯಾಬ್‌ಗ ಹೋಗುವುದು ಬೇಡ ಎಂದು ಸದಸ್ಯರಾದ ಸಿದ್ದರಾಮ ಪ್ಯಾಟಿ ಮತ್ತು ಶರಣಗೌಡ ಆಗ್ರಹಿಸಿದರು.
ರಾಜ್ಯದ ಹಲವು ಜಿಲ್ಲೆಯಲ್ಲಿ ಬೇಳೆ ಕಾಳುಗಳನ್ನು ವಿತರಿಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲೂ ಪೌಡರ್ ಬದಲಿಗೆ ಬೇಳೆ ಕಾಳುಗಳನ್ನೇ ವಿತರಿಸಬೇಕೆಂದು ಪ್ರತಿಪಕ್ಷದ ನಾಯಕ ಶಿವಾನಂದ ಪಾಟೀಲ, ಸಂಜೀವನ್ ಯಾಕಾಪುರ ಇತರರು ಒತ್ತಾಯಿಸಿದರು. ಆಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ ಅವರು ಬೇರೆ ಜಿಲ್ಲೆಗಳಲ್ಲಿ ಬೇಳೆ ಕಾಳುಗಳನ್ನು ವಿತರಿಸಲಾಗುತ್ತಿದೆ ಎಂದರು.
ಇದಕ್ಕೆ ಸ್ಪಂದಿಸಿದ ಸಿಇಒ ಜಿಲ್ಲೆಯಲ್ಲೂ ಬೇಳೆ ಕಾಳು ಸರಬರಾಜು ಮಾಡುವ ವ್ಯವಸ್ಥೆ ಜಾರಿಗೆ ಕ್ರಮಕೈಗೊಳ್ಳಲಾಗುವುದು ಎಂದರು.ಬೋಗಸ್ ಬಿಲ್?: ರಸ್ತೆ ಮತ್ತಿತರ ಕಾಮಗಾರಿಗಅಳಲ್ಲಿ ಎಚ್ಕೆಆರ್‌ಡಿ ಹಾಗೂ ಇತರ ಅನುದಾನದಲ್ಲೂ ಬಿಲ್ ತೋರಿಸಲಾಗುತ್ತದೆ. ಅಧಿಕಾರಿಗಳು ಒಂದೇ ಕಾಮಗಾರಿಗೆ ಒಮ್ಮೆ ಎಚ್ಕೆಆರ್‌ಡಿ ಬಿಲ್, ಮತ್ತೂಮ್ಮೆ ಇನ್ನೊಂದರ ಬಿಲ್ ಹಾಕಿ ಬೋಗಲ್ ಬಿಲ್ ಸೃಷ್ಟಿಸುತ್ತಾರೆ ಎಂದು ಸದಸ್ಯರೊಬ್ಬರು ಆರೋಪಿಸಿದರು. ಆಗ ಸಿಇಒ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.