Advertisement
ಮತ್ತೊಂದು ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ ಕಳ್ಳರ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಕಾರ್ಯ ನಿರ್ವಾಹಕ ಅಭಿಯಂತರ ಮಾರುತಿ ಗೋಖಲೆ ಅವರ ಮನೆಯಲ್ಲಿ 1.40 ಕೋಟಿ ರೂ. ಮೌಲ್ಯದ ಹಣ ಮತ್ತು ಚಿನ್ನಾಭರಣ ಕಳ್ಳತನವಾಗಿದೆ. ಇವರ ಎದುರಿನ ಮನೆಯಲ್ಲಿದ್ದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ರೇವಣಸಿದ್ದಪ್ಪ ಮನೆಯಲ್ಲಿ 10 ಲಕ್ಷ ರೂ. ಬಾಳುವ ಚಿನ್ನಾಭರಣ ದೋಚಲಾಗಿದೆ. ಹಿಂಬದಿ ಮನೆಯ ವೈದ್ಯರಾದ ಡಾ| ವೀಣಾ ಪಾಟೀಲ ಮನೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ.
ಖದೀಮರು ಮನೆಗಳಿಗೆ ನುಗ್ಗಿ ಕೈಗೆ ಸಿಕ್ಕಿದ್ದನ್ನು ದೋಚಿ ಪರಾರಿಯಾಗಿದ್ದಾರೆ. ಮಾರುತಿ ಗೋಖಲೆ ಜ.6ರಂದು ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಹೋಗಿದ್ದರು. ಇದೇ ಸಮಯ ಸಾಧಿಸಿ ಕಳ್ಳರು ಮನೆಯ ಬೀಗ ಮುರಿದು ಸುಮಾರು 1.40 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಕಳವಾದ ನಗದು ಮತ್ತು ಚಿನ್ನಾಭರಣದ
ಮೌಲ್ಯದ ಬಗ್ಗೆ ಮನೆಯವರಾಗಲಿ, ಪೊಲೀಸರಾಗಲಿ ಇನ್ನೂ ಖಚಿತ ಪಡಿಸಿಲ್ಲ. ನಿವೃತ್ತ ಬಿಇಒ ರೇವಣಸಿದ್ದಪ್ಪ ಅವರ ಮನೆಯ ಹಿಂದಿನ ಕಿಟಕಿಯ ಗ್ರಿಲ್ಸ್‌ಗಳನ್ನು ಮುರಿದು ಮನೆಯೊಳಗೆ ಖದೀಮರು ನುಗ್ಗಿದ್ದಾರೆ.
Related Articles
Advertisement
ಡಾ| ವೀಣಾ ಮನೆಯಲ್ಲಿ ದೃಶ್ಯ ಸೆರೆ: ಎರಡೂ ಮನೆಗಳಿಗೆ ನುಗ್ಗುವ ಮೊದಲು ಡಾ| ವೀಣಾ ಪಾಟೀಲ ಅವರ ಮನೆಗೆ ಕಳ್ಳರು ನುಗ್ಗಿದ್ದಾರೆ. ಓರ್ವ ಕಳ್ಳ ಮುಸುಕು ಹಾಕಿಕೊಂಡಿದ್ದರೆ,ಮತ್ತೂಬ್ಬ ಕಳ್ಳ ಹಾಗೆಯೇ ಬಂದಿದ್ದು, ಮನೆಯ ಒಳ ನುಗ್ಗಲು ಹಾದಿ ಹುಡುಕಾಟ ನಡೆಸುತ್ತಿರುವ ದೃಶ್ಯ ಡಾ| ವೀಣಾ ಪಾಟೀಲ ಮನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ, ಕಿಟಕಿ ಬಂದೋಬಸ್ತ್ ಇರೋದು ಖಾತ್ರಿಯಾಗಿ, ಮನೆಯ ಮೇಲಿನವರೆಗೂ ನೋಡಿಕೊಂಡು ಹೋಗುವುದು ಮತ್ತು ಮನೆಯೊಳಗೆ ಹೋಗಲು ಅವಕಾಶ ಸಿಗದೇ ಇದ್ದಾಗ ಗೋಡೆ ಹಾರಿ ಗೋಖಲೆ ಮನೆಯೊಳಗೆ ನುಗ್ಗಿದ್ದು ಸಿಸಿಟಿವಿಯಲ್ಲಿ ದಾಖಲಾಗಿದೆ. ನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ, ಉಪ ಆಯುಕ್ತ ಕಿಶೋರಬಾಬು ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಯಲ್ಲಿ ಯಾರೂ ಇಲ್ಲದೇ
ಇರುವಾಗ ಕಳ್ಳತನಗಳು ನಡೆದಿದೆ.
ಸಿಸಿಟಿವಿ ದೃಶ್ಯಗಳನ್ನು ಆಧರಿಸಿ
ಆರೋಪಿಗಳ ಬಂಧನಕ್ಕೆ ಜಾಲ
ಬೀಸಲಾಗಿದೆ. ಶೀಘ್ರವೇ ಆರೋಪಿಗಳನ್ನು
ಬಂಧಿಸಲಾಗುವುದು.
ಎಂ.ಎನ್. ನಾಗರಾಜ,
ನಗರ ಪೊಲೀಸ್ ಆಯುಕ್ತರು