ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ 2019-24ನೇ ಸಾಲಿಗೆ ಸದಸ್ಯರ ಆಯ್ಕೆಗೆ ಗುರುವಾರ ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಕಾರ್ಯದರ್ಶಿ ಕೆ. ಈರಣ್ಣ ಗೌಡ, ಹಿಂದಿನ ಅಧ್ಯಕ್ಷ ಬಿ.ಎಸ್.ದೇಸಾಯಿ ಸೇರಿದಂತೆ ಹಲವರು ಚುನಾಯಿತರಾಗಿದ್ದಾರೆ.
ಜಿಲ್ಲಾ ಘಟಕವು ಒಟ್ಟು 50 ಇಲಾಖೆಗಳ 62 ಸದಸ್ಯರನ್ನು ಒಳಗೊಂಡಿದ್ದು, ಈಗಾಗಲೇ 24 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 38 ಸ್ಥಾನಗಳಿಗೆ ಚುನಾವಣೆಗೆ ಗುರುವಾರ ಮತದಾನ ನಡೆದು, ಸಂಜೆ ಫಲಿತಾಂಶ ಪ್ರಕಟಿ ಸಲಾಯಿತು. ನಿವೃತ್ತ ತಹಶೀಲ್ದಾರ್ ಎಂ.ಡಿ. ಶಾಸ್ತ್ರೀ ಚುನಾವಣಾಧಿಕಾರಿಯಾಗಿ, ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಕಂದಾಯ ಅಧಿಕಾರಿ ಚಂದ್ರಕಾಂತ ಚ್ಯಾಗಿ ಕಾರ್ಯ ನಿರ್ವಹಿಸಿದರು.
ಕೆ. ಈರಣ್ಣ ಗೌಡ, ಬಿ.ಎಸ್. ದೇಸಾಯಿ ಜಿಲ್ಲಾ ಘಟಕದ ಅಧ್ಯಕ್ಷ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಹಾಲಿ ಅಧ್ಯಕ್ಷ ರಾಜು ಲೇಂಗಟಿ (ಹಣಮಂತ) ಪ್ಯಾನಲ್ನೊಂದಿಗೆ ಎರಡನೇ ಬಾರಿಗೆ ಅಧ್ಯಕ್ಷರಾಗಲು ಚುನಾವಣಾ ಆಖಾಡಕ್ಕೆ ಧುಮಿಕ್ಕಿದ್ದಾರೆ.
ಅವಿರೋಧ ಆಯ್ಕೆ: ಪ್ರಕಾಶ ಶಿವಶರಣಪ್ಪ (ಯೋಜನಾ), ಸತೀಶ (ಕೈಗಾರಿಕೆ), ನಾಗೇಂದ್ರ ಪಾನಗಾಂವ, ವೀರಭದ್ರಯ್ಯ (ನ್ಯಾಯಾಂಗ), ಮಾನಸಿಂಗ್ (ಮುದ್ರಣಾಲಯ), ಉದಯಕುಮಾರ ಮೋದಿ (ಪಂಚಾಯಿತಿ ರಾಜ್), ಹಣಮಂತ ಲೇಂಗಟಿ (ಅಕ್ಷರ ದಾಸೋಹ), ಮಲ್ಲಿನಾಥ ಮಂಗಲಗಿ, ವಿಜಯಕುಮಾರ (ಲಿಪಿಕ ನೌಕರರು), ಪ್ರಕಾಶ ಅಯ್ಯಳಕರ (ಎಪಿಎಂಸಿ), ಸು»ಆಾಷಚಂದ್ರ ಫುಲಾರಿ (ಮೋಟಾರು ವಾಹನ), ಎಸ್.ಆರ್.ಪಲ್ಲೇದ (ರೇಷ್ಮೆ), ಗುರುಲಿಂಗಪ್ಪ ಪಾಟೀಲ (ಲೆಕ್ಕ ಪತ್ರ), ಶಿವಕುಮಾರ (ಜೈಲು), ಅಬ್ದುಲ್ ಅಜೀಮ (ವಾಣಿಜ್ಯ), ರವಿ ಮಿರಸ್ಕರ (ವಾರ್ತಾ, ಪ್ರವಾಸ, ಕನ್ನಡ-ಸಂಸ್ಕೃತಿ), ಡಾ| ಅನಿಲ ಕುಮಾರ ಹಾಲು (ಪದವಿ ಕಾಲೇಜು), ಕುಪೇಂದ್ರ ಮಾಲೀಪಾಟೀಲ (ಜಿಲ್ಲಾ ಪಂಚಾಯಿತಿ), ಡಾ| ರಿಯಾಜ್ ಸುಳ್ಳದ್ (ಆಯುಷ್, ಡ್ರಗ್ಸ್, ಇಎಸ್‌ಐ), ಬಾಬುರಾವ, ಕಿರಣಕುಮಾರ, ಎನ್.ಎಂ. ಉಮಾಮಹೇಶ್ವರ (ಕಂದಾಯ), ವಿಶ್ವನಾಥ ಸಿಂಗ್ (ಸಹಕಾರ ಸಂಘ), ಅರುಣ ಕುಮಾರ ಪಾಟೀಲ (ಪಂಚಾಯಿತಿ ರಾಜ್ ಇಂಜಿನಿಯರಿಂಗ್) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೃಷಿ ಇಲಾಖೆ: ಸಿದ್ಧಾರೂಢ ಪಾಟೀಲ, ರವಿನಾಟಿಕಾರ, ಪಶು ಇಲಾಖೆ: ನಿಜಲಿಂಗಪ್ಪ ಕೆ. ಮಧುಗುಣಕಿ, ಆಹಾರ ನಾಗರಿಕ ಇಲಾಖೆ: ಕೃಷ್ಣಾಚಾರ್ಯ, ಆರ್ಥಿಕ ಮತ್ತು ಸಾಂಖ್ಯೀಕ ಇಲಾಖೆ: ನಾಸೀರಖಾನ್, ವಾಣಿಜ್ಯ ತೆರಿಗೆ ಇಲಾಖೆ: ಅಶೋಕ ಶಹಬಾದಿ, ಉಮಾದೇವಿ ಜಿತೇಂದ್ರ, ಸಹಕಾರ ಇಲಾಖೆ: ರಾಜಕುಮಾರ, ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ: ವಿಶ್ವನಾಥಸಿಂಗ್, ಮುಖ್ಯ ಇಂಜಿನಿಯರ್ ಲೋಕೋಪಯೋಗಿ ಇಲಾಖೆ: ಚವ್ಹಾಣ ಗೋವಿಂದ ರೇವೂ, ನೀರಾವರಿ ಇಲಾಖೆ: ಹಣಮಂತರಾಯ ಬಿ. ಗೋಳಕಾರ, ಅಬಕಾರಿ: ಕೆ. ಈರಣ್ಣಗೌಡ, ಬಿಸಿಎಂ: ಸಂಜೀವಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: ಮಲ್ಲಣ್ಣ ದೇಸಾಯಿ, ಎಸಿಬಿ ಲೋಕಾಯುಕ್ತ: ಗಣೇಶ ಕಮ್ಮಾರ, ಅರಣ್ಯ ಇಲಾಖೆ: ಮೊಹ್ಮದ ಜಮೀಲ್, ಆರೋಗ್ಯ ಇಲಾಖೆ: ಚಂದ್ರಕಾಂತ ಏರಿ, ಮಲ್ಲಿಕಾರ್ಜುನ, ಸಂತೋಷ, ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾಸ್ಪತ್ರೆ: ಬಿ.ಎಸ್. ದೇಸಾಯಿ, ಸತೀಶ, ತೋಟಗಾರಿಕೆ ಇಲಾಖೆ: ರಂಗನಾಥ ಪೂಜಾರಿ, ಸಾರ್ವಜನಿಕ ಗ್ರಂಥಾಲಯ: ದೀಪಕ್ ಕಮತರ, ವಿಮಾ ಇಲಾಖೆ: ಸಿದ್ಧಲಿಂಗಯ್ಯ, ಪ್ರೌಢಶಾಲೆ: ಶಿವಾನಂದ ಸ್ಥಾವರಮಠ, ಶಿಕ್ಷಣ ಅಧಿಕಾರಿಗಳ ಇಲಾಖೆ: ಚನ್ನಬಸಪ್ಪ ಮುಧೋಳ, ಪಿಯು ಇಲಾಖೆ: ಶಿವರಾವ ಮಾಲಿಪಾಟೀಲ, ತಾಂತ್ರಿಕ ಇಲಾಖೆ: ಮಡಿವಾಳಪ್ಪ ಪಾಟೀಲ, ಭೂ ವಿಜ್ಞಾನ: ಎಸ್. ನಾಗರಾಜ, ಪೊಲೀಸ್ ಇಲಾಖೆ: ಬಸಣ್ಣ, ಭೂ ಮಾಪನ: ವೆಂಕಟರಾವ್ ಇಟಗಿ, ನೋಂದಣಿ ಮತ್ತು ಮುದ್ರಣ: ಶಾಹೀನ ಬೇಗಂ, ಖಜಾನೆ ಇಲಾಖೆ: ಪವನಕುಮಾರ, ಕಾರ್ಮಿಕ ಇಲಾಖೆ: ರವೀಂದ್ರ ಕುಮಾರ, ಧಾರ್ಮಿಕ ದತ್ತಿ: ಎಂ. ಗಜೇಂದ್ರನಾಥ.