ಕಲಬುರಗಿ: ಮಕ್ಕಳಿಗೆ ಅಕ್ಷರ ಅಭ್ಯಾಸದ ಜೊತೆಗೆ ಮಾನವೀಯ ಮೌಲ್ಯಗಳು ಹಾಗೂ ದೇಶಾಭಿಮಾನದ ಪಾಠ ಹೇಳಿ ದೇಶಭಕ್ತರನ್ನು ಮಾಡುವುದು ಅವಶ್ಯಕ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.
ತಾಲೂಕಿನ ಉಪಳಾಂವ ಗ್ರಾಮದಲ್ಲಿರುವ ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪಾಲಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು ತಮ್ಮ ಮಕ್ಕಳು ಹೆಚ್ಚು ಅಂಕ ಪಡೆದು ಡಾಕ್ಟರ್, ಇಂಜಿನಿಯರ್ ಆಗಬೇಕು ಎನ್ನುವ ಆಸೆಯಿಂದ ಅವರ ಮೇಲೆ ಮಾನಸಿಕ ಒತ್ತಡ ಹೇರುತ್ತಿದ್ದಾರೆ. ತಮ್ಮ ಮಗು ಉತ್ತಮ ಗುಣಗಳನ್ನು ಹೊಂದಿದ ರಾಷ್ಟ್ರದ ಪ್ರಜೆಯಾಗಿ ಸಮೃದ್ಧ ರಾಷ್ಟ್ರ ಕಟ್ಟಬೇಕು ಎಂದು ಪಾಲಕರ ಮನಸ್ಸಿನಲ್ಲಿ ಬರದಿರುವುದು ವಿಷಾದನೀಯ ಸಂಗತಿ ಎಂದರು. ಇಂದಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರಿಕರಣವಾಗದೇ ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡುವುದು ಶಿಕ್ಷಣ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು, ರೋಟರಿ ಕ್ಲಬ್ ಮಿಡ್‌ಟೌನ್‌ನ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಉದ್ಯಮಿ ಗೋಪಾಲ ಆರ್. ಪಾಲಾದಿ, ತಾ.ಪಂ. ಮಾಜಿ ಅಧ್ಯಕ್ಷ ವಿಜಯಕುಮಾರ ಬಿರಾದಾರ ಮುಂತಾದವರಿದ್ದರು. ಸಂಸ್ಥೆ ಅಧ್ಯಕ್ಷ ಗೌಡೇಶ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಗೋವಾದಲ್ಲಿ ಕನ್ನಡ ಸಂಘದಿಂದ ಕರುನಾಡ ಪದ್ಮಶ್ರೀ ಪ್ರಶಸ್ತಿ ಪಡೆದ ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರನ್ನು ಸಂಸ್ಥೆ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಲಾವಣ್ಯ ನಾಗೂರ, ಭಾಗ್ಯಶ್ರೀ ಪೊಲೀಸ್ ಪಾಟೀಲ, ಕಾಂಚನಾ ಮಾಡ್ಯಾಳ, ರಂಜಿತಾ ಕುಂಬಾರ, ಗುರುಪಾದಪ್ಪ ಜಮಾದಾರ, ಹಣಮಂತರಾಯ ಮೂಲಗೆ, ಶಿವಕುಮಾರ ಹತಗುಂದಿ ಅವರಿಗೆ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.
ಸಂಗೀತ ಕಲಾವಿದರಾದ ಸಂಗಮೇಶ ಶಾಸ್ತ್ರೀ ಮಾಶಾಳ, ಶ್ರವಣಕುಮಾರ ಮಠ, ಕಲ್ಯಾಣಕುಮಾರ ಬಂಟನಳ್ಳಿ, ನಿಜಲಿಂಗ ಶೆಳ್ಳಗಿ, ಸುರೇಶ ನಿಡಗುಂದಾ, ಶರಣಕುಮಾರ ಶಿರೊಳ್ಳಿ, ಕಾಶಿನಾಥ ಭಂಡಾರಿ, ರಾಜು ಹೆಬ್ಟಾಳ ಹಾಗೂ ಪಂಡಿತ ಪುಟ್ಟರಾಜ ಗವಾಯಿಗಳ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕುಮಾರ ಮಲ್ಲಿಕಾರ್ಜುನ ಕಲಬುರಗಿ ಸಂಗೀತ ಸೇವೆ ಸಲ್ಲಿಸಿದರು.
ಶಿಕ್ಷಕರಾದ ಜ್ಯೋತಿ ಪಾಟೀಲ, ಸಂಗೀತಾ ಪಾಟೀಲ, ಶಿವಲೀಲಾ ಇಟಗಿ, ಸುಧಾ ಔರಾದ, ರತ್ನಾ, ಓಂದೇವಿ ಬಿರಾದಾರ, ಭಾರತಿ ಗೌಡಗಾಂವ, ಸಂಗೀತಾ ಉಪಳಾಂವ, ಮಲಕಾರಿ ಪೂಜಾರಿ, ನಾಗೇಶ ಢಗೆ, ಶರಣು ಜೆ. ಪಾಟೀಲ, ರವಿ ಮೂಲಗೆ, ನಾಗರಾಜ, ದತ್ತು ಪೂಜಾರಿ, ಶಿವಕುಮಾರ ಗಣಜಲಖೇಡ, ನೀಲಾಂಬಿಕ ಚೌಕಿಮಠ, ರಮೇಶ ನಿಂಬಾಳ, ಸಿದ್ಧಪ್ಪಾ ನಿಂಬಾಳ ಸೇರಿದಂತೆ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಶಿಕ್ಷಕಿ ಶ್ವೇತಾ ರೆಡ್ಡಿ ಸ್ವಾಗತಿಸಿದರು, ಮಧುರಾಣಿ ಬೇನೂರ ನಿರೂಪಿಸಿದರು, ಶ್ರೀದೇವಿ ಪಟವಾದಿ ವಂದಿಸಿದರು.