Advertisement

ಕಳಪೆ ಊಟ: ಕೋವಿಡ್ ಸೋಂಕಿತರ ಆರೋಪ

06:43 PM Jul 05, 2020 | Naveen |

ಕಲಬುರಗಿ: ಕೋವಿಡ್‌-19 ಕೇರ್‌ ಸೆಂಟರ್‌ನಲ್ಲಿ ಕಳಪೆ ಊಟ ನೀಡಲಾಗುತ್ತಿದ್ದು, ಮನುಷ್ಯರನ್ನು ಪ್ರಾಣಿಗಳಿಗಿಂತ ಕೀಳಾಗಿ ನೋಡಲಾಗುತ್ತಿದೆ ಎಂದು ಕೋವಿಡ್ ಸೋಂಕಿತರು ಆರೋಪಿಸಿದ್ದಾರೆ.

Advertisement

ನಗರ ಹೊರವಲಯದಲ್ಲಿರುವ ಕೆಸರಟಗಿ ಗ್ರಾಮದ ಕೇರ್‌ ಸೆಂಟರ್‌ನಲ್ಲಿ 38ಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಇದ್ದೇವೆ. ಮಹಿಳೆಯರು, ಮಕ್ಕಳು, ವೃದ್ಧರು ಇದ್ದಾರೆ. ಯಾರಿಗೂ ಸರಿಯಾದ ಊಟ ಕೊಡುತ್ತಿಲ್ಲ. ಬೆಳಗ್ಗೆ ಮಾಡಿಟ್ಟ ಊಟವನ್ನೇ ಮಧ್ಯಾಹ್ನ ಹಾಗೂ ರಾತ್ರಿ ಕೊಡಲಾಗುತ್ತಿದೆ. ಅನ್ನ ಅರ್ಧ ಕುದ್ದಿರುತ್ತೆ, ಇನ್ನರ್ಧ ಕುದ್ದಿರುವುದಿಲ್ಲ. ಸಾರು ಕಪಳೆಯಾಗಿರುತ್ತದೆ ಎಂದು ಸೋಂಕಿತರು ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಗುರುವಾರ ರಾತ್ರಿ ನೀಡಿದ ಅನ್ನದಲ್ಲಿ ದಪ್ಪ ಕಲ್ಲುಗಳು ಪತ್ತೆಯಾಗಿವೆ. ಈ ಹಿಂದೆಯೂ ಊಟದಲ್ಲಿ ಹುಳು, ಸಣ್ಣ ಕಲ್ಲುಗಳು ಪತ್ತೆಯಾಗಿದ್ದವು. ಈ ಬಗ್ಗೆ ಅಂದೇ ಮೊಬೈಲ್‌ ಮೂಲಕ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ ಉಪಹಾರ ಕೊಟ್ಟ ಮೇಲೆ ಮಧ್ಯಾಹ್ನದ ಊಟ 3:30 ಆದರೂ ಕೊಡುವುದಿಲ್ಲ. ನಮಗೆ ಪಾಸಿಟಿವ್‌ ಇದ್ದರೂ ಊಟ ಕಳಪೆ ನೀಡುತ್ತಿರುವುದರಿಂದ ಆರೋಗ್ಯ ಮತ್ತಷ್ಟು ಹದಗೆಡುತ್ತಿದೆ. ಆದ್ದರಿಂದ ಉತ್ತಮ ಆಹಾರ ಸರಬರಾಜು ಮಾಡಿ ಎಂದು ಡಿಎಚ್‌ಒ ಅವರಿಗೆ ಸೋಂಕಿತರು ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next