ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮುಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಬಿಜೆಪಿ ಮುಖಂಡರು, ಕಾರ್ಯಕರ್ತರು ನಗರ ಸೇರಿದಂತೆ ಜಿಲ್ಲಾದ್ಯಂತ ಸಂಭ್ರಮಾಚರಿಸಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸದೆ ಪತನಗೊಂಡಿದ್ದು, ರಾಜ್ಯದಲ್ಲಿ ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೆ ಬಂದಿದೆ. ಯಡಿಯೂರಪ್ಪ ಅವರು ನೂತನ ಮುಖ್ಯಮಂತ್ರಿಯಾಗಿ ಶುಕ್ರವಾರ ಸಂಜೆ ಪ್ರಮಾಣವಚನ ಸ್ವೀಕಾರ ಮಾಡಿದ್ದರಿಂದ ಜಿಲ್ಲೆಯಲ್ಲೂ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.
ಬಿಎಸ್‌ವೈ ಅಧಿಕಾರ ಸ್ವೀಕರಿಸುತ್ತಿದ್ದಂತೆ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬಿಜೆಪಿಯ ಹಿರಿಯ ಮುಖಂಡರ ಸಮ್ಮುಖದಲ್ಲಿ ಸೇರಿದ್ದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಬಿಜೆಪಿಗೆ ಜಯವಾಗಲಿ, ಯಡಿಯೂರಪ್ಪನವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿ ಕುಣಿದು ಕುಪ್ಪಳಿಸಿ ಸಂಭ್ರಮಾಚಿಸಿದರು.
ನಾಲ್ಕನೇ ಬಾರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರೈತರು, ಜನಪರ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ಮುಂದೆ ಕೂಡ ಯಡಿಯೂರಪ್ಪನವರು ಉತ್ತಮ ಕೆಲಸಗಳನ್ನು ಮಾಡಲಿದ್ದಾರೆ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಎಂಎಲ್ಸಿಗಳಾದ ಶಶೀಲ್ ನಮೋಶಿ, ಅಮರನಾಥ ಪಾಟೀಲ, ದಕ್ಷಿಣ ಬ್ಲಾಕ್ ಅಧ್ಯಕ್ಷ ಸಂಗಮೇಶ ರಾಜೋಳ್ಳಿ, ಮುಖಂಡರಾದ ದಯಾಘನ ಧಾರವಾಡಕಾರ, ರಾಜು ನೀಲಂಗೆ, ಶಿವಶರಣಪ್ಪ, ನಿಗ್ಗುಡಗಿ, ಇಂದಿರಾ ಶಕ್ತಿ, ವಿದ್ಯಾಸಾಗರ ಕುಲಕರ್ಣಿ, ವಿಜಯಕುಮಾರ ಸೇವಾಲಾನಿ, ಸಂತೋಷ ಹಾದಿಮನಿ, ವಿಶಾಲ ದರ್ಗಿ, ಸಂಗಣ್ಣ ಇಜೇರಿ, ಲಿಂಗರಾಜ ಬಿರಾದಾರ, ಬಾಬುರಾವ ಹಾಗರಗುಂಡಗಿ, ರಾಘವೇಂದ್ರ ಚಿಂಚನಸೂರ, ಚೆನ್ನಪ್ಪ ಸುರಪುರ, ವಿಜಯ ಲಕ್ಷ್ಮೀ ಗೊಬ್ಬೂರ, ರಾಜುಗೌಡ ನಾಗನಹಳ್ಳಿ, ರಾಣೋಜಿ, ದೊಡ್ಡಮನಿ, ರವೀಂದ್ರ ಬಂಟನಹಳ್ಳಿ, ಅಂಬಾರಾಯ ಚಲಗೇರಾ, ಲಕ್ಷ್ಮಿಕಾಂತ ಕುಲಕರ್ಣಿ, ಶರಣಗೌಡ, ಚಂದ್ರಶೇಖರ ತಳ್ಳಳ್ಳಿ, ಶಿವಯೋಗಿ ನಾಗನಹಳ್ಳಿ, ಹನುಮಂತ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಬಸವರಾಜ ಪಾಟೀಲ ಹಾಗೂ ಮತ್ತಿತರರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಸೂಪರ್ ಮಾರ್ಕೆಟ್‌ನಲ್ಲಿರುವ ಚೌಕ್ ಸರ್ಕಲ್ನಲ್ಲೂ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಬಿಜೆಪಿ ಉತ್ತರ ಕ್ಷೇತ್ರದ ಅಧ್ಯಕ್ಷ ಚನ್ನವೀರ ಲಿಂಗನವಾಡಿ ನೇತೃತ್ವದಲ್ಲಿ ಸಿದ್ಧು ಸಂಗೊಳ್ಳಗಿ, ಮಂಜುನಾಥ ಕಳಸ್ಕರ, ಡಿ.ಎನ್.ಜೋಶಿ, ಶರಣಗೌಡ ಪಾಟೀಲ, ಸಾಹೇಬಗೌಡ ಪಾಟೀಲ, ಚನ್ನಪ್ಪ ದಿಗ್ಗಾವಿ, ರಮೇಶ ರಂಗದಾಳ, ಕೃಷ್ಣ ನಾಯಕ, ವಿಜು ಮನೊಳ್ಳಿ, ಸಂತೋಷ ಪಾಂವುರೆ ಬಿಜೆಪಿ ಬಾವುಟ ಹಿಡಿದು ಬಿ.ಎಸ್.ಯಡಿಯೂರಪ್ಪನವರ ಪರ ಘೋಷಣೆ ಕೂಗಿದರು.
ಗ್ರಾಮೀಣ ಮತ ಕ್ಷೇತ್ರದ ಬಸವರಾಜ ಮತ್ತಿಮಡು ಅವರ ಕಚೇರಿ ಮುಂದೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಗೋರಕನಾಥ ಶಾಕಾಪೂರೆ, ರಾಜಶೇಖರ್ ಬಾವಿಮನಿ, ಪ್ರವೀಣ ಮುಚ್ಚಟಿ, ಶರಣು ರೋಟಿ, ಲೋಕೇಶ ರೆಡ್ಡಿ, ಕೀರ್ತಿ ಗೋರ್ಪಡೆ, ಪ್ರಶಾಂತ ವಾಗ್ಮೋರೆ, ಉದಯಕುಮಾರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.