Advertisement

ಗಂಗೆ ಧರೆಗಿಳಿಸಿದ ಮಹಾಪುರುಷ ಭಗೀರಥ

03:41 PM May 12, 2019 | Naveen |

ಕಲಬುರಗಿ: ಜಿಲ್ಲಾಡಳಿತದಿಂದ ಭಗೀರಥ ಮಹರ್ಷಿ ಜಯಂತಿಯನ್ನು ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಚಿಂಚೋಳಿ ವಿಧಾನಸಭಾ ಉಪ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

Advertisement

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಭಗೀರಥ ಮಹರ್ಷಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ ಹಾಗೂ ಅತಿಥಿ ಗಣ್ಯರು ಶ್ರೀ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಸಮಾಜದ ಮುಖಂಡರಾದ ಡಾ| ಬಿ.ಎಂ. ಕನ್ನಳಿ, ವಿ.ಸಿ ನೀರಡಗಿ, ಮಹಾದೇವಪ್ಪ ಉಪ್ಪಾರ, ಅಶೋಕ ಚೂರಿ, ಪ್ರೊ| ಜಯಶ್ರೀ ಗೋಗಿ, ಸಿದ್ದಲಿಂಗಪ್ಪ ಆನೂರು ಗೌಂಡಿ, ಗೋಪಣ್ಣ ದೊಡ್ಡಮನಿ, ಜಗನ್ನಾಥ ಕೊರಳ್ಳಿ, ಗುರುನಾಥ ಬೈನೂರು, ಶ್ರೀನಿವಾಸ ಮಸರಕಲ್, ಪ್ರಕಾಶ ಗಾಜರೆ, ರಂಗಣ್ಣ ಹಯ್ನಾಳ, ಪುರುಷೋತ್ತಮ ಗೋಗಿ, ಗೋಪಣ್ಣ ನೀರಡಗಿ, ಬಸವರಾಜ ಆಲದಾರ್ತಿ ಹಾಗೂ ಇನ್ನಿತರ ಸಮಾಜದ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next