ಆವರಣದಲ್ಲಿ ಅ. 11, 12 ಮತ್ತು 13ರಂದು 18ನೇ ಕಲ್ಯಾಣ ಪರ್ವ ಉತ್ಸವ ನಡೆಯಲಿದೆ ಎಂದು ಕಲ್ಯಾಣ ಪರ್ವ ಉತ್ಸವ ಸಮಿತಿ ಪ್ರಧಾನ ಸಂಘಟಕ ಬಸವ ಪ್ರಭು ಸ್ವಾಮೀಜಿ ತಿಳಿಸಿದರು.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಕಲ್ಯಾಣವು 12ನೇ ಶತಮಾನದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಧಾರ್ಮಿಕತೆಗೆ ಹೆಚ್ಚು ಮಹತ್ವ ಪಡೆದುಕೊಂಡಿತ್ತು. ವಿಶ್ವಕ್ಕೆ ವಚನ ಸಾಹಿತ್ಯದ ಸಂದೇಶ ಸಾರಲು ಹಾಗೂ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆದುಕೊಳ್ಳಲು ಕಳೆದ 18 ವರ್ಷಗಳಿಂದ ಪ್ರತಿ ವರ್ಷವೂ ಕಲ್ಯಾಣ ಪರ್ವವನ್ನು ಆಯೋಜಿಸಲಾಗುತ್ತಿದೆ ಎಂದರು.
ಅ.11ರಂದು ಸಚಿವ ಪ್ರಭು ಚವ್ಹಾಣ 18ನೇ ಕಲ್ಯಾಣ ಪರ್ವದ ಉದ್ಘಾಟನೆ ನೆರವೇರಿಸುವರು. ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಅಧ್ಯಕ್ಷತೆ ವಹಿಸುವರು. ಮಾತಾಜಿ ರಚಿಸಿದ ‘ದೇವರ ಮಕ್ಕಳು’, “ಶರಣ ವಂದನೆ’ ಪುಸ್ತಕಗಳನ್ನು ಕಲಬುರಗಿ ಸಂಸದ ಡಾ| ಉಮೇಶ ಜಾಧವ ಬಿಡುಗಡೆ ಮಾಡುವರು. ಹಿರಿಯ ಸಾಹಿತಿ ರಂಜಾನ ದರ್ಗಾ ಅವರಿಂದ ವಿಶೇಷ ಅನುಭಾವ ನಡೆಯಲಿದೆ ಎಂದು ತಿಳಿಸಿದರು. ಮಾತೆ ಗಂಗಾದೇವಿ, ಮುಂಡರಗಿಯ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ಹೇಳಿದರು. ಅ.12ರಂದು ಬೆಳಗ್ಗೆ ಶರಣ ವಂದನೆ-ಶರಣರಿಗೆ ಶರಣು ಶರಣಾರ್ಥಿ ಮತ್ತು ಸಿದ್ದರಾಮೇಶ್ವರ ಸ್ವಾಮೀಜಿ ಅವರಿಂದ ಶೂನ್ಯ ಪೀಠಾರೋಹಣ ವಿಶೇಷ ಕಾರ್ಯಕ್ರಮ ನಡೆಯಲಿದೆ. 11 ಗಂಟೆಗೆ ಧರ್ಮ ಚಿಂತನ ಗೋಷ್ಠಿ ನಡೆಯಲಿದ್ದು, ಶಾಸಕ ಎಂ.ಬಿ. ಪಾಟೀಲ ಉದ್ಘಾಟಿಸುವರು. ಬೀದರ ಸಂಸದ ಭಗವಂತ ಖೂಬಾ ಧ್ವಜಾರೋಹಣ ನೆರವೇರಿಸುವರು.
Related Articles
Advertisement