Advertisement
ಜಯನಗರದ ಅನುಭವ ಮಂಟಪದಲ್ಲಿ ಬಸವ ಸಮಿತಿ ಸಂಸ್ಥಾಪಕ ಡಾ| ಬಸಪ್ಪ ದಾನಪ್ಪ ಜತ್ತಿ (ಬಿ.ಡಿ. ಜತ್ತಿ) ಅವರ 107ನೇ ಜನ್ಮ ದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
Related Articles
Advertisement
ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ| ವೀರಣ್ಣ ದಂಡೆ ಮಾತನಾಡಿ, ಬಸವಾದಿ ಶರಣ ಸ್ಮಾರಕಗಳು ಹಣ್ಣು-ಕಾಯಿ ಇಟ್ಟು ಪೂಜೆ ಮಾಡುವುದಕ್ಕಷೇr ಸೀಮಿತವಾಗಬಾರದು. ಅವು ವೈಚಾರಿಕ ಚಿಂತನೆಯನ್ನು ಜಗತ್ತಿಗೆ ತೋರಿಸಿದ ಸಾಕ್ಷಿಪ್ರಜ್ಞೆಯಾಗಿ ಬೆಳಗಬೇಕಾದವು. ಕಲ್ಯಾಣ ಕರ್ನಾಟಕ ಭಾಗದ ಪ್ರತಿಯೊಂದು ಹಳ್ಳಿಗಳಲ್ಲೂ ಶರಣರ ಹೆಜ್ಜೆಗುರುತುಗಳು ಇವೆ. ಒಂದೊಂದು ಊರೂ ಒಂದೊಂದು ಇತಿಹಾಸವನ್ನು ಒಡಲಲ್ಲಿ ಹುದುಗಿಸಿಕೊಂಡಿದೆ. ಅವುಗಳನ್ನು ಹೆಕ್ಕಿ ತೆಗೆಯುವ ತಾಳ್ಮೆ ಹಾಗೂ ಜಾಣ್ಮೆ ಬಹಳ ಮುಖ್ಯಎಂದರು.
ಡಾ| ವೀರಣ್ಣ ದಂಡೆ, ಡಾ| ಜಯಶ್ರೀ ದಂಡೆ ಅವರಿಗೆ ಡಾ| ಬಿ.ಡಿ. ಜತ್ತಿ ಸಂಶೋಧನಾ ಪ್ರಶಸ್ತಿ ಹಾಗೂ ಶಿವಮೊಗ್ಗದ ಜಯದೇವಪ್ಪ ಜೈನಕೇರಿ ಅವರಿಗೆ ಬಸವಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
’12ನೇ ಶತಮಾನದ ಶರಣ ಸ್ಮಾರಕಗಳು’ ಕುರಿತ ಮೂರು ಸಂಪುಟಗಳ ಲೋಕಾರ್ಪಣೆಯನ್ನು ಸಂಸದ ಡಾ| ಉಮೇಶ ಜಾಧವ ಮಾಡಿದರು. ಬಸವ ಸಮಿತಿ ಜಾಲತಾಣವನ್ನು ಮಾಜಿ ಸಚಿವ ಬಸವರಾಜ ಪಾಟೀಲ ಸೇಡಂ ಲೋಕಾರ್ಪಣೆ ಮಾಡಿದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠದ ಸಂಚಾಲಕ ಡಾ| ಸಿ.ಎಂ. ಕುಂದಗೋಳ ವಿಶೇಷ ಉಪನ್ಯಾಸ ನೀಡಿದರು.
ತಮಿಳುನಾಡಿನ ತೆಂಕನಕೋಟೆಯ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಕೇಂದ್ರ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹಾಗೂ ಜಿಲ್ಲಾ ಬಸವ ಸಮಿತಿ ಅಧ್ಯಕ್ಷೆ ಡಾ| ವಿಲಾಸವತಿ ಖೂಬಾ, ಎಚ್.ಕೆ. ಉದ್ದಂಡಯ್ಯ, ಎಸ್.ಐ. ಭಾವಿಕಟ್ಟಿ ಹಾಗೂ ಇತರರು ಇದ್ದರು.