Advertisement

ವರ್ಣ ವ್ಯವಸ್ಥೆ ವಿರುದ್ಧ ಹೋರಾಡಿದ ಬಸವಣ್ಣ

02:47 PM May 10, 2019 | Naveen |

ಕಲಬುರಗಿ: ವರ್ಣವ್ಯವಸ್ಥೆ ವಿರುದ್ಧ ದೇಶದಲ್ಲಿ ಹೋರಾಡಿದವರು ಬುದ್ಧ ಮತ್ತು ಬಸವಣ್ಣ ಎಂದು ಉದಗೀರ ಬಸವ ಪರಿಷತ್‌ ಪ್ರದೇಶ ಅಧ್ಯಕ್ಷ ಶಿವಾನಂದ ಹೈಬತಪುರ ಹೇಳಿದರು.

Advertisement

ನಗರದ ಬಸವೇಶ್ವರ ವೃತ್ತದ ಬಳಿ ಇರುವ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಡೆದ ಬಸವ ಜಯಂತ್ಯುತ್ಸವದಲ್ಲಿ ಲಿಂಗಾಯತ ಧರ್ಮದ ಅಸ್ಮಿತೆ ಕುರಿತು ಅವರು ಉಪನ್ಯಾಸ ನೀಡಿದರು.

ಲಿಂಗಾಯತ ಧರ್ಮದ ವಿರೋಧಿ ವೈದಿಕ ಪದ್ಧತಿ. ಸಮಾಜದಲ್ಲಿ ಎರಡು ವರ್ಗಗಳಿದ್ದು, ಒಂದು ಜನರನ್ನು ಮೂರ್ಖರನ್ನಾಗಿಸುವುದು, ಮತ್ತೂಂದು ಜನರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವ ವರ್ಗ ಎಂದ ಅವರು, ಲಿಂಗಾಯತರು ಒಗ್ಗಟ್ಟಾಗಿ ಇರೋದನ್ನು ಕೆಲವರು ಸಹಿಸುತ್ತಿಲ್ಲ. ಹೀಗಾಗಿ ಲಿಂಗಾಯತರು ಮಾನಸಿಕ ಗುಲಾಮಗಿರಿಯಿಂದ ಹೊರ ಬರಬೇಕೆಂದು ಕರೆ ನೀಡಿದರು.

ಬಸವಣ್ಣನವರ ವಿರೋಧಿಗಳು ಪಂಚಾಚಾರ್ಯರು ವೈದಿಕರಲ್ಲ. ನಮ್ಮಲ್ಲಿನ ಸ್ವಾಮೀಜಿಗಳು ಹಾಗೂ ಕೆಲವು ಪೀಠಗಳು ಬಸವ ಜಯಂತಿಯಂದು ಶೋಭಾಯಾತ್ರೆ ನಡೆಸದೇ ವಿಚಾರಯಾತ್ರೆ ನಡೆಸಬೇಕು ಎಂದು ಶಿವಾನಂದ ಹೈಬತಪುರೆ ಹೇಳಿದರು.

ಬೀದರ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಸಾನ್ನಿಧ್ಯ ವಹಿಸಿ, ಬಸವಣ್ಣನವರು ಮಾತನಾಡುವ ಅಭಿವ್ಯಕ್ತಿ ಸ್ವಾತಂತ್ರ್ಯ ಕಲಿಸಿದರು. ದೇಹವನ್ನು ದೇವಾಲಯ ಮಾಡಿದ ಕೀರ್ತಿ ಸಲ್ಲುತ್ತದೆ. ದೇವರ ಬಗೆಗಿನ ಭಯ ನಿವಾರಿಸಿದರು ಎಂದು ಹೇಳಿದರು. ಧುತ್ತರಗಾಂವ ವಿರಕ್ತ ಮಠದ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಅಧ್ಯಕ್ಷತೆ ವಹಿಸಿದ್ದರು.

Advertisement

ಹಿರಿಯ ನ್ಯಾಯವಾದಿ ಸುಭಾಶ್ಚಂದ್ರ ಕೋಣಿನ್‌, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಅಪ್ಪಾರಾವ ಅತನೂರ, ಹೂಗಾರ ಸಮಾಜದ ಅಧ್ಯಕ್ಷ ಅಶೋಕ ಹೂಗಾರ, ಹೀರಾಬಾಯಿ ಬಳಗಾನುರ, ಕೆ.ಎಸ್‌. ವಾಲಿ, ರವೀಂದ್ರ ಶಾಬಾದಿ, ಆರ್‌.ಜಿ. ಶೆಟಗಾರ ಮುಂತಾದವರಿದ್ದರು. ಸಂತೋಷ ಹೂಗಾರ ನಿರೂಪಿಸಿದರು, ಅಶೋಕ ಘೂಳಿ ಸ್ವಾಗತಿಸಿದರು, ವೀರಣ್ಣ ಲೊಡ್ಡನ್‌ ವಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next