Advertisement
ಧನಯ್ಯ ಕವಠಗಿಮಠ ಅವರು ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಅಕ್ಕಲಕೋಟೆಯಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಮಂಗರೂಳೆ ಕನ್ನಡ ಪ್ರೌಢಶಾಲೆಯಲ್ಲಿ ಶಿಕ್ಷಕ. ಈಗ ದೇಶದ 22 ರಾಜ್ಯಗಳ ಸೆಟ್, ನೆಟ್, ಟಿಇಟಿ ಪರೀಕ್ಷೆಗಳನ್ನು ಬರೆಯುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ. ಅಲ್ಲದೇ ತಮ್ಮದೇ ವೆಬ್‌ಸೈಟ್ ರಚನೆ ಮಾಡಿ ಅದರಲ್ಲಿ ನೆಟ್, ಸೆಟ್ ಮತ್ತು ಟಿಇಟಿ ಬರೆಯುವುದು ಹೇಗೆ ಎಂದು ಐಡಿಯಾಗಳನ್ನು ನೀಡುತ್ತಿದ್ದಾರೆ.
ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರ, ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ, ಛತ್ತೀಸ್‌ಗಡ, ಗುಜರಾತ್, ರಾಜಸ್ಥಾನ, ಪ. ಬಂಗಾಲ, ಹಿ. ಪ್ರದೇಶ, ಉತ್ತರಾಖಂಡ, ಆಸ್ಸಾಂ, ಅರುಣಾಚಲ ಪ್ರದೇಶ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್. ತ್ರಿಪುರಾ, ಸಿಕ್ಕಿಂ, ಜಮ್ಮು ಕಾಶ್ಮೀರ ರಾಜ್ಯಗಳ ನೆಟ್, ಸೆಟ್ ಹಾಗೂ ಟಿಇಟಿ ಪರೀಕ್ಷೆಗಳನ್ನು ಬರೆದಿದ್ದು ಒಡಿಶಾ, ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಈ ಪರೀಕ್ಷೆಗಳು ಇಲ್ಲ. ಇದರಿಂದಾಗಿ ಆ ರಾಜ್ಯಗಳಿಗೆ ಹೋಗಿಲ್ಲ ಎನ್ನುತ್ತಾರೆ ಧನಯ್ಯ. ಧನಯ್ಯ ಅವರಿಗೆ ವರ್ಲ್ಡ್ ರೆಕಾರ್ಡ್ ಇಂಡಿಯಾ, ಇಂಡಿಯಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ವರ್ಲ್ಡ್ ರೆಕಾರ್ಡ್ ಆಫ್ ರಿಪಬ್ಲಿಕ್ ಸೇರಿದಂತೆ ಒಟ್ಟು 7 ವಿಶ್ವ ದಾಖಲೆಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಅಲ್ಲದೇ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದ್ದಾರೆ.
ಡಿವೋರ್ಸ್‌ನಿಂದ ಡೈವರ್ಟ್ ಆಗಿದ್ದರು!
ಧನಯ್ಯ ಕವಠಗಿಮಠ 2010ರಲ್ಲಿ ಮೊದಲ ಹೆಂಡತಿಯಿಂದ ಡಿವೋರ್ಸ್ ಪಡೆದರು. ಈಗ ಎರಡನೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ಡಿವೋರ್ಸ್‌ನಿಂದ ಆಘಾತಕ್ಕೊಳಗಾಗಿ ಮನಸ್ಸು ಹತೋಟಿಗೆ ಪಡೆಯಲು ಓದಿನೆಡೆಗೆ ಚಿತ್ತ ಹರಿಸಿದರು. ಪ್ರತಿ ರಾಜ್ಯದಲ್ಲಿನ ಆಯಾ ಭಾಷಾ ಪರೀಕ್ಷೆಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಲಾಗಿರುತ್ತಿತ್ತು. ಅವುಗಳನ್ನು ಬರೆಯುವ ಮೂಲಕ 22 ರಾಜ್ಯಗಳ 36 ಸೆಟ್, 36 ಟಿಇಟಿ, 4 ನೆಟ್ ಒಂದು ಪಿಎಚ್‌ಡಿ ಪರೀಕ್ಷೆಗಳನ್ನು ಬರೆದು ತೇರ್ಗಡೆಯಾಗಿದ್ದಾರೆ.
Related Articles
Advertisement