Advertisement
ಪ್ರಸಕ್ತ 2018-23 ರ ಅವಧಿಯಲ್ಲಿ ಕೆಕೆಆರ್ ಡಿಬಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಹುಮನಾಬಾದ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಪಾಟೀಲ್ ಹುಮನಾಬಾದ್ ಸೋಲುವ ಮೂಲಕ ಸೋಲಿನ ನಂಟು ನಿರೂಪಿಸಿದೆ.
Related Articles
Advertisement
ಅದಲ್ಲದೇ ಈ ಮುಂಚಿನ ಅಂದರೆ 2008-13ರ ಅವಧಿಯಲ್ಲಿ ಪ್ರಥಮ ಅವಧಿಗೆ ಆಗ ಪೌರಾಡಳಿತ ಸಚಿವರಾಗಿದ್ದ ಖಮರುಲ್ ಇಸ್ಲಾಂ ಕೆಕೆಆರ್ ಡಿಬಿ ಅಧ್ಯಕ್ಷರಾಗಿ, ತದನಂತರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹಾಗೂ ಕೊನೆ ಅವಧಿಯಲ್ಲಿ ಉನ್ನತ ಶಿಕ್ಷಣ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಖಮರುಲ್ 2018ರ ಚುನಾವಣೆ ಹೊತ್ತಿಗೆ ಕೊನೆಯುಸಿರೆಳೆದರೆ ಡಾ. ಶರಣಪ್ರಕಾಶ ಪಾಟೀಲ್ 2018ರ ಚುನಾವಣೆಯಲ್ಲಿ ಸೇಡಂ ಕ್ಷೇತ್ರದಲ್ಲಿ ಹಾಗೂ ಬಸವರಾಜ ರಾಯರೆಡ್ಡಿ ಯಲಬುರ್ಗಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. ಈಗ ಡಾ. ಶರಣಪ್ರಕಾಶ ಪಾಟೀಲ್ ಹಾಗೂ ಬಸವರಾಜ ರಾಯರೆಡ್ಡಿ ಗೆಲುವು ಸಾಧಿಸಿದ್ದಾರೆ.
ಕೆಕೆಆರ್ ಡಿಬಿ ಅಧ್ಯಕ್ಷರಾದವರಿಗೆ ನಂಟು ಎಂಬುದಾಗಿ ಉದಯವಾಣಿಯಲ್ಲಿ ಕಳೆದ ಮೇ 1ರಂದು ವಿಶೇಷ ವರದಿ ಪ್ರಕಟಿಸಲಾಗಿತ್ತು.ಈ ವಿಶೇಷ ವರದಿ ಭಾರಿ ಸದ್ದು ಮಾಡಿತ್ತು. ಹೀಗಾಗಿ ಕಳಂಕ ಮುಂದುವರೆಯುತ್ತದೆಯೋ ಇಲ್ಲವೇ ಮುರಿಯುತ್ತದೆ ಎಂಬುದರ ಕುರಿತು ತೀವ್ರ ಕುತೂಹಲ ಮೂಡಿಸಿತ್ತು.