Advertisement

Kalaburagi: ಪ್ರತಿಷ್ಠಿತ ಗುಲ್ಬರ್ಗ ಕ್ಲಬ್‌ಗೆ ರವಿವಾರ ಚುನಾವಣೆ

10:48 PM Sep 02, 2023 | Team Udayavani |

ಕಲಬುರಗಿ: ಮಹಾ ನಗರದ ಸಾರ್ವಜನಿಕ ಉದ್ಯಾನವನ ದಲ್ಲಿರುವ ಪ್ರತಿಷ್ಠಿತ ಗುಲ್ಬರ್ಗ ಕ್ಲಬ್‌ಗೆ ಸೆ. 3 ರ ರವಿವಾರದಂದು ಚುನಾವಣೆ ನಡೆಯಲಿದೆ.

Advertisement

ರವಿವಾರ ಬೆಳಗ್ಗೆ9 ಗಂಟೆಯಿಂದ ಸಂಜೆ 4ರವರೆಗೆ ನಡೆದು, ತದನಂತರ ಮತ ಏಣಿಕೆ ನಡೆಯಲಿದೆ. ಒಂದು ವರ್ಷದ ೨೦೨೩-೨೦೨೪ನೇ ಸಾಲಿನ ಅವಧಿಗಾಗಿ ಪ್ರಮುಖ ಕಾರ್ಯದರ್ಶಿ, ಉಪಾಧ್ಯಕ್ಷ, ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿ ಮತ್ತು ಆಡಳಿತ ಮಂಡಳಿ ಸದಸ್ಯಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಜಿಲ್ಲಾಧಿಕಾರಿಗಳೇ ಈ ಕ್ಲಬ್‌ನ ಅಧ್ಯಕ್ಷರಾಗಿದ್ದು, ಕಾರ್ಯದರ್ಶಿ ಹುದ್ದೆಯೇ ಪ್ರಮುಖವಾಗಿದೆ.ಕಾರ್ಯದರ್ಶಿಯಾದವರೇ ಕ್ಲಬ್‌ನ್ನು ನಿರ್ವಹಿಸುತ್ತಾರೆ. ಪ್ರಸ್ತುತ ಕಾರ್ಯದರ್ಶಿ ಯಾಗಿರುವ ಚಂದ್ರಕಾಂತ ಸಂಗೋಳಗಿ ಪುನರಾಂಯ್ಕೆ ಬಯಸಿ ಪ್ರಮುಖವಾಗಿ ಕಣದಲ್ಲಿದ್ದಾರೆ. ಉಳಿದಂತೆ ಮಲ್ಲಿನಾಥ ಗುಡೇದ್ ಹಾಗೂ ಡಾ. ಪ್ರಕಾಶ ಬಬಲಾದಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಕಣದಲ್ಲಿರುವ ಇತರ ಅಭ್ಯರ್ಥಿಗಳು.

ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಡಾ. ಎಸ್.ಎನ್. ಪಾಟೀಲ್ ಸ್ಪರ್ಧಿಸಿದ್ದಾರೆ. ಉಳಿದಂತೆ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ರವಿ ಉದನೂರ, ರೇವಣಸಿದ್ದಪ್ಪ ನಾಗೂರೆ, ಖಜಾಂಚಿಯಾಗಿ ಸಾತಪ್ಪ ಪಟ್ಟಣಕರ್, ಶೇಖರ ಮೋದಿ ಸ್ಪರ್ಧಿಸಿದ್ದಾರೆ. ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ ಅನೀಲಕುಮಾರ ನಿಪ್ಪಾಣಿ, ಆಶೋಕಕುಮಾರ ಮಾಲಿ, ಚಂದ್ರಶೇಖರ ಕಮಲಾಪುರ, ಸಿ. ಬಸವರಾಜ, ಜಗದೀಶ ಅಲ್ಲದ, ನಿತೀನ
ಗಿಯಾ, ಪರಮೇಶ್ವರ ಸಂಗಾವಿ ಹಾಗೂ ವಿಶ್ವನಾಥ ಕಟ್ಟಿಮನಿ ಕಣದಲ್ಲಿದ್ದಾರೆ.

ಪ್ರಸ್ತುತ ಕಾರ್ಯದರ್ಶಿ ಯಾಗಿರುವ ಚಂದ್ರಕಾಂತ ಸಂಗೋಳಗಿ ಕಳೆದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಲ್ಲದೇ ಪ್ರಮುಖವಾಗಿ ಇಲ್ಲಿಯವರೆಗೆ ಆಗದ ವನ್ ಪ್ಲಸ್ ವನ್ ಮೆಂಬರ ಮಾಡಿರುವುದು ಚುನಾವಣೆಯಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ನಿವೃತ್ತ ಪ್ರಾಧ್ಯಾಪಕ ಪ್ರೊ. ನರೇಂದ್ರ ಬಡೆಶೇಷಿ ಚುನಾವಣಾಧಿಕಾರಿ ಗಳಾಗಿ ಕಾರ್ಯ ನಿರ್ವಹಿಸುವರು. ಕ್ಲಬ್‌ನ ಈ ಚುನಾವಣೆಯಲ್ಲಿ820 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

Advertisement

ಕಲಬುರಗಿ ಜಿಲ್ಲೆಯ ಖ್ಯಾತ ಉದ್ಯಮಿಗಳು, ವೈದ್ಯರು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕ್ಲಬ್‌ನ ಸದಸ್ಯರಾಗಿರುವುದು ವಿಶೇಷ. ಹೀಗಾಗಿ ಈ ಚುನಾವಣೆ ಪ್ರತಿಷ್ಠೆಯಾಗಿ ಗಮನ ಸೆಳೆಯುತ್ತದೆ. ರವಿವಾರ ರಾತ್ರಿ ಹೊತ್ತಿಗೆ ಚುನಾವಣ ಫಲಿತಾಂಶ ಹೊರ ಬೀಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next