Advertisement
ಪರಮಾನಂದ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ಲಿಂಗ ನೀರಿನಿಂದ ತೊಳೆದು ವಿಭೂತಿ, ಕುಂಕುಮ, ಪತ್ರೆ ಹಾಕಿ ಪೂಜೆ ಮಾಡುವ ಸಮಯದಲ್ಲಿ ಸಣ್ಣದಾದ ಹಾವು ಪೂಜೆ ಮಂತ್ರದ ನಡುವೆ ಆಗಮಿಸಿ ಲಿಂಗದ ಮೇಲೆ ಹಾದು ಹೋಯಿತು. ದೇವಸ್ಥಾನದಲ್ಲಿ ಅರ್ಚಕರು, ಕೆಲವು ಭಕ್ತರ ನಡುವೆ ಹಾವು ಆಗಮಿಸಿ ಲಿಂಗದ ಮೇಲೆ ಹಾದು ಹೋಗಿರುವುದು ನಾಗರಪಂಚಮಿ ಹಬ್ಬಕ್ಕೆ ಮತ್ತಷ್ಟು ಮೆರಗು ತಂದಿತು.
ಗುರುಮಿಠಕಲ್: ನಾಗರಪಂಚಮಿ ನಿಮಿತ್ತ ಸೋಮವಾರ ಬೆಟ್ಟಹತ್ತಿ ಕೊಂಡಮ್ಮ ದೇವಿ ದರ್ಶನ ಪಡೆದ ಸಾವಿರಾರು ಭಕ್ತರು, ಚೇಳುಗಳನ್ನೂ ಹಿಡಿದು ಸಂಭ್ರಮಿಸಿದರು. ಯಾದಗಿರಿ ಜಿಲ್ಲೆ ಗುರುಮಿಠ ಕಲ್ ತಾಲೂಕಿನ ಕಂದಕೂರು ಗ್ರಾಮದ ಕೊಂಡಮ್ಮ ದೇವಿಯ ಬೆಟ್ಟದ ಮೇಲೆ ಈ “ಚೇಳು ಜಾತ್ರೆ’ ನಡೆಯುತ್ತದೆ. ನಾಗರ ಪಂಚಮಿ ದಿನ ಮಾತ್ರ ಇಲ್ಲಿ ಚೇಳುಗಳು ಕಚ್ಚವುದಿಲ್ಲ. ಈ ಹಿನ್ನೆಲೆಯಲ್ಲಿ ಜನರು ಅದನ್ನು ಹಿಡಿದು ಮೈಮೇಲೆ ಹಾಕಿಕೊಂಡು ಸಂಭ್ರಮಿಸುತ್ತಾರೆ.