ಕಲಬುರಗಿ: ಅದೊಂದು ಜಾತ್ರೆಯಂತೆ ಕಾಣುತ್ತಿತ್ತು. ಅಲ್ಲಿದ್ದ ಮಕ್ಕಳ ಮುಖದಲ್ಲಿ ಸಂತೋಷದ ಛಾಯೆ ಕಾಣುತ್ತಿತ್ತು. ಬಾಲಕಿಯರ ಡೊಳ್ಳು ಬಡಿತದ ನಾದ, ಹಳ್ಳಿಯ ಸೊಗಡಿನ ಶೈಲಿ ಒಂದೆಡೆಯಾದರೆ, ಆಧುನಿಕತೆ ಬದುಕಿನ ಶೈಲಿ ಇನ್ನೊಂದೆಡೆ. ಸಂಗೀತದ ಸ್ವರ ಮಾಧುರ್ಯದಲ್ಲಿ ಎಲ್ಲರ ಮನ ತೇಲುತ್ತಿತ್ತು. ಇದೆಲ್ಲ ಸಂಭ್ರಮ ಕಂಡು ಬಂದಿದ್ದು ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ.
ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪ ಆವರಣದಲ್ಲಿ ಎಂಬಿಎ, ಎಂಕಾಂ ವಿದ್ಯಾರ್ಥಿಗಳಿಂದ ಶನಿವಾರ “ಮಾರ್ಕೆಟಿಂಗ್ ವಾರಫೇರ್
-2020′ ಆಯೋಜಿಸಲಾಗಿತ್ತು. ಎಂಬಿಎ ವಿದ್ಯಾರ್ಥಿಗಳು ಒಟ್ಟು ಆರು ಮಳಿಗೆ ಸ್ಥಾಪಿಸಿದ್ದರು.
ಅಶ್ವಿನಿ ವಿ. ವಿಜಯಲಕ್ಷ್ಮೀ ತಂಡದಿಂದ ಚಾಟ್ ಆ್ಯಂಡ್ ಚಾಯ್ ಸ್ಪೆಷಲ್, ಉಪಹಾರ ಮಳಿಗೆ, ಮಲ್ಲಿಕಾ, ಅರ್ಜುನ ತಂಡದಿಂದ ವಿಲೇಜ್ ಪಾನ್ ಶಾಪ್ ಮಳಿಗೆ, ಮಹೇಶ ತಂಡದಿಂದ ಪ್ರೋಟೊಹೊಲಿಕ್ ಮಳಿಗೆ, ವೈಷ್ಣವಿ ಬಾವಗಿ ತಂಡದಿಂದ ಗೇಮ್ಸ್, ಅವಿನಾಶ ತಂಡದಿಂದ ಹಳ್ಳಿಮನೆ, ಕಿರಣ ತಂಡದಿಂದ ಕೆಎಂಎಫ್ ಮಳಿಗೆ ಹಾಕಲಾಗಿತ್ತು. ಒಟ್ಟು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎಂಕಾಂ ವಿದ್ಯಾರ್ಥಿಗಳು ಒಟ್ಟು ಐದು ಮಳಿಗೆ ಸ್ಥಾಪಿಸಿದ್ದರು. ಭಾಗ್ಯಶ್ರೀ ಎಂ. ತಂಡದಿಂದ ಚಾಟ್ ಛೊಟ್ರೆ ಮಳಿಗೆ, ಪಲ್ಲವಿ ತಂಡದಿಂದ ಕ್ರಿಸ್ಪಿ ಸ್ಟ್ಯಾಕ್ಸ್ ಮಳಿಗೆ, ಓಮಿಕಾ ಹಂಗ್ರಿ ಬಡ್ರ್ಸ್, ನಿಶಾ ತಂಡದಿಂದ ಮಿಸಲ್ಕಾ ಮೆಹೆಫಿಲ್, ಸಾಯಿನಾಥ ತಂಡದಿಂದ ಐಸ್ಕ್ರೀಮ್, ಸೌಮ್ಯ ತಂಡದಿಂದ ಹಾರರ್ ಹೌಸ್, ಅಶ್ವಿನಿ ಮಂಜುಶ್ರೀ ತಂಡದಿಂದ ಹೆಲ್ತ್ ಹೌಸ್ ಹಾಕಲಾಗಿತ್ತು.
ಶರಣಬಸವ ವಿವಿ ಸಮ ಕುಲಪತಿ ಡಾ| ವಿ.ಡಿ. ಮೈತ್ರಿ ಉದ್ಘಾಟಿಸಿದರು. ಕುಲಸಚಿವ ಡಾ| ಅನೀಲಕುಮಾರ ಬಿಡವೆ, ಮೌಲ್ಯಮಾಪನ ಕುಲಸಚಿವ ಡಾ|ಲಿಂಗರಾಜ ಶಾಸ್ತ್ರೀ, ಡೀನ್ ಡಾ| ಲಕ್ಷ್ಮೀ ಮಾಕಾ, ಡಾ| ಬಸವರಾಜ ಮಠಪತಿ, ಡಾ| ಶಿವದತ್ತ ಹೊನ್ನಳ್ಳಿ, ಡಾ| ಬಸವರಾಜ ಹೂಗಾರ, ಡಾ| ವಾಣಿಶ್ರೀ, ಡಾ| ಗೀತಾ ಹರವಾಳ, ಡಾ| ಎನ್.ಎಸ್. ಪಾಟೀಲ, ಡಾ| ಡಿ.ಟಿ. ಅಂಗಡಿ, ಟಿ.ವಿ.
ಶಿವಾನಂದನ್, ಡಾ| ಸುರೇಶ ನಂದಗಾಂವ ಇದ್ದರು.