Advertisement

ಶೈಕ್ಷಣಿಕ ಸಾಧನೆಗೆ ಆಹಾರ ಪದ್ಧತಿಯೂ ಮುಖ್ಯ

03:02 PM Aug 02, 2019 | Naveen |

ಕಲಬುರಗಿ: ಹಾನಿಕಾರಕ ಆಹಾರ ಸೇವನೆ ಮಾಡದೇ ವಿದ್ಯಾರ್ಥಿಗಳು ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಂಡರೆ ಶಿಕ್ಷಣ ಕ್ಷೇತ್ರದಲ್ಲಿನ ಯಶಸ್ಸು, ಗುರಿ ಸಾಧನೆಗೆ ಪೂರಕವಾಗುತ್ತದೆ ಎಂದು ಮನೋತಜ್ಞ ಡಾ| ನಾ. ಸೋಮೇಶ್ವರ ಹೇಳಿದರು.

Advertisement

ಸಂಸ್ಥೆಯ ಸೆಂಟೆನರಿ ಸಭಾಂಗಣದಲ್ಲಿ ಶರಣಬಸವ ವಿಶ್ವವಿದ್ಯಾಲಯದ ವಿವಿಧ ಕೋರ್ಸ್‌ಗಳಲ್ಲಿ ಪ್ರವೇಶ ಪಡೆದ ಪದವಿ ವಿದ್ಯಾರ್ಥಿಗಳಿಗೆ 21 ದಿನ ನಡೆಯುವ ದೀಕ್ಷಾರಂಭ (ಇಂಡೆಕ್ಷನ್‌) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಅನ್ವೇಷಣೆಯಲ್ಲಿ ಯಶಸ್ವಿಯಾಗಲು, ಉನ್ನತ ಶಿಕ್ಷಣದಲ್ಲಿ ಸಾಧಿಸಲು ಧೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಲ್ಲ. ಜೊತೆಗೆ ಭಾವನಾತ್ಮಕ, ಮಾನಸಿಕ, ಸಾಮಾಜಿಕ, ಆಧ್ಯಾತ್ಮಿಕ, ಆರೋಗ್ಯಕ್ಕೆ ಮಹತ್ವ ನೀಡುವ ಸಮಗ್ರ ಆರೋಗ್ಯ ವಿಧಾನವನ್ನು ಯುವ ಜನತೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಹಿಮೋಗ್ಲೋಬಿನ್‌ ಮಟ್ಟ 12ಕ್ಕಿಂತ ಕಡಿಮೆಯಾದರೆ ಅಧ್ಯಯನ ಗ್ರಹಿಕೆ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಹಿಮೋಗ್ಲೋಬಿನ್‌ ಮಟ್ಟ ವಿದ್ಯಾರ್ಥಿಗಳ ಗ್ರಹಿಕೆ ಶಕ್ತಿಗಳೊಂದಿಗೆ ನೇರ ಸಂಬಂಧ ಹೊಂದಿರುವುದರಿಂದ ಪೋಷಕರು ತಮ್ಮ ಮಕ್ಕಳ ಹಿಮೋಗ್ಲೋಬಿನ್‌ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಡಾ| ನಾ. ಸೋಮೇಶ್ವರ ಅವರು, ಆರೋಗ್ಯ ಮತ್ತು ಅಭ್ಯಾಸಗಳಿಗೆ ಸಂಬಂಧಿಸಿದ ಅನುಮಾನಗಳನ್ನು ಪರಿಹರಿಸಿದರು.

Advertisement

ಶರಣಬಸವ ವಿದ್ಯಾವರ್ದಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಸಂಸ್ಥೆ ಶತಮಾನಕ್ಕೂ ಹೆಚ್ಚು ಶ್ರೀಮಂತ ಇತಿಹಾಸ ಹೊಂದಿದೆ. 1930ರ ದಶಕದಲ್ಲಿ ಮೊದಲ ಬಾರಿಗೆ ಮಹಿಳೆಯರ ಶೈಕ್ಷಣಿಕ ಸಬಲೀಕರಣಕ್ಕೆ ದಾರಿ ಮಾಡಿಕೊಟ್ಟ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಕುಲಪತಿ ಡಾ| ನಿರಂಜನ್‌ ನಿಷ್ಠಿ, ಸಮ ಕುಲಪತಿ ಡಾ| ವಿ.ಡಿ. ಮೈತ್ರಿ, ಕುಲಸಚಿವ ಡಾ| ಅನೀಲಕುಮಾರ ಬಿಡವೆ, ಸಮಕುಲಪತಿ ಡಾ| ವಿ.ಡಿ. ಮೈತ್ರಿ, ಮೌಲ್ಯಮಾಪನ ಕುಲಸಚಿವ ಡಾ| ಲಿಂಗರಾಜ ಶಾಸ್ತ್ರೀ, ಡೀನ್‌ ಲಕ್ಷ್ಮೀ ಪಾಟೀಲ ಇದ್ದರು. ರೇವತಿ ಪ್ರಾರ್ಥಿಸಿದರು, ಕು. ಶಾಂತಕುಮಾರ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next