Advertisement
ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ ಭಾಗದ ಸಂಘಟನೆಗಳು ಮತ್ತು ಹೋರಾಟಗಾರರ ಸಭೆಯಲ್ಲಿ ಎಲ್ಲರಿಂದಲೂ ಅಭಿಪ್ರಾಯ ಸಂಗ್ರಹಿಸಲಾಯಿತು. ವಿವಿಧ ಸಂಘಟನೆಗಳ ಪ್ರತಿನಿಧಿಗಳು ಬಂದ್, ರೈಲು ತಡೆ ಮೂಲಕ ಹೋರಾಟವನ್ನು ತೀವ್ರಗೊಳಿಸುವ ಬಗ್ಗೆ ಅಭಿಪ್ರಾಯ ಮಂಡಿಸಿದರು.
Related Articles
Advertisement
ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ, ಸಂಸದರ ಕರ್ತವ್ಯ ಏನು?ಘನತೆ, ಗೌರವ ಗೊತ್ತಿಲ್ಲದ ಸಂಸದರನ್ನು ನಾವು ಕಂಡಿದ್ದೇವೆ. ಇದರಿಂದ ಮೊದಲಿನಿಂದ ನಾವು ಅನ್ಯಾಯಕ್ಕೆ ಒಳಗಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು. ವಾಜಪೇಯಿ ಸರ್ಕಾರದಲ್ಲಿ ನಿತೀಶ್ ಕುಮಾರ ರೈಲ್ವೆ ಸಚಿವರಾಗಿದ್ದಾಗಲೇ ನಮ್ಮ ಭಾಗದಲ್ಲಿ ರೈಲ್ವೆ ವಿಭಾಗ ಆಗಬೇಕಿತ್ತು. ಆದರೆ, ರಾಜ್ಯದ ನಾಯಕರ ಕುತಂತ್ರದಿಂದ ಅದು ಫಲಕೊಡಲಿಲ್ಲ. ನಂತರ ಅದರ ನೆನಪೇ ಆಗಲಿಲ್ಲ. ಮಾಜಿ ಸಿಎಂ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ಸಂಸದರಾಗಿ ಖರ್ಗೆ ಮಂತ್ರಿಯಾಗಿ ರೈಲ್ವೆ ವಿಭಾಗ ಘೋಷಣೆ ಮಾಡಿದರು. ಆದರೆ, ಅದನ್ನು ಮಂತ್ರಿ ಮಂಡಲದಲ್ಲಿ ಖರ್ಗೆ ಅವರು ಮಂಡಿಸುವಲ್ಲಿ ಮನಸ್ಸು ಮಾಡಲಿಲ್ಲ. ಇದು ನನೆಗುದಿಗೆ ಬೀಳಲು ಕಾರಣ ಎಂದರು. ಅಭಿವೃದ್ಧಿಯಲ್ಲಿ ರಾಜಕೀಯ ಬಂದರೆ ಯಾವುದೇ ಕೆಲಸಗಳು ಆಗಲ್ಲ. ಯುಪಿಎ ಸರ್ಕಾರ ಹೋಗಿ ಎನ್‌ಡಿಎ ಸರ್ಕಾರ ಬಂದ ಮೇಲೆ ಆಗಿರೋದು ಅದೇ. ಹೋರಾಟದ ಸಂದರ್ಭದಲ್ಲಿ ನಮ್ಮ ಸಂಘಟನೆಗಳ ಬಲ ಪ್ರದರ್ಶನ ಮಾಡಬೇಕಿದೆ. ಪ್ರತಿ ಸಂಘಟನೆಯಿಂದ ಕನಿಷ್ಠ 50 ಜನರನ್ನಾದರೂ ಸೇರಿಸಬೇಕು. ಆಗ ಮಾತ್ರವೇ ನಮ್ಮ ಹೋರಾಟ ಮತ್ತು ಸಂಘಟನೆಯ ಶಕ್ತಿ ಗೊತ್ತಾಗಲಿದೆ ಎಂದು ಹೇಳಿದರು. ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ, ರೈಲ್ವೆ ಹೋರಾಟಗಾರರಾದ ಸುನೀಲ ಕುಲಕರ್ಣಿ, ವೆಂಕಟೇಶ ಮುದ್ಗಲ್, ಅರುಣಕುಮಾರ ಪಾಟೀಲ, ಬೆಂಗಳೂರಿನ ಎಫ್‌ಕೆಸಿಸಿಐ ಮಾಜಿ ಸದಸ್ಯ ಪ್ರಕಾಶ
ಮಂಡೋತ್, ಕನ್ನಡ ಪರ ಹೋರಾಟಗಾರರಾದ ಶರಣು ಗದ್ದಗಿ, ಮಂಜುನಾಥ ನಾಲವಾರಕರ್ ಮಾತನಾಡಿದರು. ಬೆಳಗುಂಪಾದ ಭರತೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಎಚ್‌ಕೆಸಿಸಿಐ ಉಪಾಧ್ಯಕ್ಷ ಶರಣು ಪಪ್ಪಾ, ಗೌರವ ಕಾರ್ಯದರ್ಶಿ ಶಶಿಕಾಂತ ಪಾಟೀಲ, ಇತರ ಕನ್ನಡ ಪರ ಸಂಘಟನೆಗಳ ಮುಖಂಡರಾದ ನಂದಕುಮಾರ, ಸಚಿನ ಫರತಾಬಾದ್, ಗೋಪಾಲ ನಾಟಿಕಾರ, ದತ್ತು ಭಾಸಗಿ, ಸಂದೀಪ ಭರಣಿ, ದತ್ತು ಹಯ್ನಾಳಕರ್ ಇದ್ದರು.