Advertisement

ಕಲಬುರಗಿಯಲ್ಲಿ ಸಾರಿಗೆ ಸಿಬ್ಬಂದಿ ಮುಷ್ಕರ : ಬಸ್ ಗಳಿಗೆ ಕಲ್ಲು, ಪ್ರಯಾಣಿಕರ ಪರದಾಟ

04:46 PM Dec 11, 2020 | sudhir |

ಕಲಬುರಗಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ನಗರದಲ್ಲೂ ಮುಷ್ಕರ ತೀವ್ರಗೊಂಡಿದ್ದು, ಬಸ್‌ ವೊಂದಕ್ಕೆ ಕಲ್ಲು ತೂರಾಟ ನಡೆಸಲಾಗಿದೆ. ನಗರದ ಕೇಂದ್ರ ‌ಬಸ್ ನಿಲ್ದಾಣದಿಂದ ‌ವಿವಿಧೆಡೆ ತೆರಳುವ ಸಾರಿಗೆ ಸಂಸ್ಥೆ ಬಸ್ ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಚಾಲಕ ಹಾಗೂ ನಿರ್ವಾಹಕರು ಬಸ್ ಗಳನ್ನು ಪ್ಲಾಟ್ ಫಾರಂನಿಂದ ಬೇರೆಡೆ ನಿಲ್ಲಿಸಿ ಮುಷ್ಕರಕ್ಕೆ ಸಾಥ್ ನೀಡಿದ್ದಾರೆ.

Advertisement

ಜಿಲ್ಲೆಯ ಅಫಜಲಪುರ, ಚಿಂಚೋಳಿ, ಜೇವರ್ಗಿ ಇನ್ನಿತರ ಕಡೆಗಳಲ್ಲಿ ಸಹ ಬಸ್ ಬಂದ್ ಆಗಿವೆ.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಗಳಲ್ಲಿ ಪ್ರಯಾಣಿಕರು ಕುಳಿತುಕೊಂಡಿದ್ದು, ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಅಧಿಕಾರಿಗಳು ಮೈಕ್ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದರೂ‌ ಮುಷ್ಕರ ನಿರತ ಸಿಬ್ಬಂದಿ ಮುಷ್ಕರ ಮುಂದುವರಿಸಿದ್ದಾರೆ. ಇದರಿಂದಾಗಿ ಗೊಂದಲದ ವಾತಾವರಣ ಉಂಟಾಗಿದೆ.

ಇದನ್ನೂ ಓದಿ:ಚೀನಕ್ಕೆ ಸೆಡ್ಡು- ಹಿಂದೂಮಹಾಸಾಗರದಲ್ಲಿ 120ಕ್ಕೂ ಅಧಿಕ ಯುದ್ಧನೌಕೆ ನಿಯೋಜನೆ

ಹಲವು ವರ್ಷಗಳಿಂದಲೂ ತಮ್ಮನ್ನು ‌ಪೂರ್ಣ‌ ಪ್ರಮಾಣದ ‌ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಬೇಡಿಕೆ ಇಟ್ಟರೂ ಸರ್ಕಾರ ಸ್ಪಂದಿಸಿಲ್ಲ. ಗುರುವಾರ ರಾತ್ರಿ ಬೆಂಗಳೂರಿನಲ್ಲಿ ‌ಮುಷ್ಕರ ನಿರತ ಸಿಬ್ಬಂದಿಯನ್ನು ‌ಬಂಧಿಸಲಾಗಿದೆ.‌ ಸರ್ಕಾರದ ಈ ಧೋರಣೆಯನ್ನು ‌ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಮುಷ್ಕರ ನಿರತ ಸಾರಿಗೆ ನೌಕರರು ತಿಳಿಸಿದರು.

Advertisement

ನಗರದ ವರ್ತುಲ್ ರಸ್ತೆಯ ಹೈಕೋರ್ಟ್ ರಸ್ತೆಯ ಬಳಿ ಬಸ್ ವೊಂದಕ್ಕೆ ಕಲ್ಲು ತೂರಾಟ ನಡೆಸಿದ್ದರಿಂದ ಕೆಲ ಕಾಲ ಕಾವೇರಿದ ವಾತಾವರಣ ನಿರ್ಮಾಣಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next