Advertisement
ವಿಮಾನಯಾನ ಸಂಸ್ಥೆಗಳಾದ ಸ್ವಾರ್ ಏರ್, ಅಲಯನ್ಸ್ ಏರ್ ವಿಮಾನ ಸಂಚಾರಕ್ಕೆ ಆರಂಭಿಸಲು ನಿರ್ಧರಿಸಿವೆ. ಇದಕ್ಕಾಗಿ ಅವಶ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ವಿಮಾನಯಾನ ಸಂಸ್ಥೆ ಅಧಿಕಾರಿಗಳು ಅವಲೋಕನದಲ್ಲಿ ತೊಡಗಿದ್ದಾರೆ. ಅಲ್ಲದೇ, ಜಿಲ್ಲಾಡಳಿತದೊಂದಿಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಭದ್ರತೆ, ಆರೋಗ್ಯ ತಪಾಸಣೆ ಕುರಿತಂತೆ ಚರ್ಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಸ್ವಾರ್ ಏರ್ ವಿಮಾನ ಸಂಸ್ಥೆ ಈಗಾಗಲೇ ಟಿಕೆಟ್ ಬುಕ್ಕಿಂಗ್ ಆರಂಭಿಸಿದ್ದು, ಮೇ 25ರ ಟಿಕೆಟ್ ಬುಕ್ ಮಾಡಬಹುದಾಗಿದೆ. ಹೀಗಾಗಿ ವಿಮಾನ ಹಾರಾಟ ಆರಂಭವಾಗುವುದೂ ಬಹುತೇಕ ಖಚಿತವಾಗಿದೆ.
ಜೂ.1ರಿಂದ ರೈಲು ಸಂಚಾರ ಆರಂಭಿಸುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಂಟು ಪ್ರಮುಖ ರೈಲ್ವೆ ನಿಲ್ದಾಣದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಕೌಂಟರ್ ಆರಂಭಿಸಲಾಗಿದೆ. ಕಲಬುರಗಿ, ಸೇಡಂ, ಯಾದಗಿರಿ, ನಾಲವಾರ, ಸೈದಾಪುರ, ರಾಯಚೂರು, ಹೊಸಪೇಟೆ, ಬಳ್ಳಾರಿ ರೈಲ್ವೆ ನಿಲ್ದಾಣಗಳಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ.