ಕಲಬುರಗಿ: ಪಡಿತರದಲ್ಲಿ ತೊಗರಿ ಬೇಳೆ ವಿತರಣೆ ಮಾಡಬೇಕೆಂಬುದರ ಬಗ್ಗೆ ಯೋಚನೆ ಹೊಂದಲಾಗಿದೆ ಎಂದು ಗ್ರಾಹಕರ ಹಾಗೂ ವ್ಯವಹಾರಗಳ ಮತ್ತು ಸಾರ್ವಜನಿಕ ಪಡಿತರ ವಿತರಣಾ ಸಚಿವ ವಿ.ಮುನಿಯಪ್ಪ ಹೇಳಿದರು.
ಸಚಿವ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪಡಿತರದಲ್ಲಿ ತೊಗರಿ ಬೇಳೆ ಸೇರಿಸಬೇಕೆಂಬುದು ಬಹಳ ದಿನಗಳ ಬೇಡಿಕೆಯಾಗಿದೆ. ಪಡಿತರದಲ್ಲಿ ಸೇರ್ಪಡೆಯಾದರೆ ರೈತರಿಗೆ ಅನುಕೂಲ ಜತೆಗೆ ಗ್ರಾಹಕರಿಗೂ ಅನುಕೂಲವಾಗಲಿದೆ. ಪ್ರಮುಖವಾಗಿ ವಸತಿ ನಿಲಯಗಳಿಗೆ ಬೇಳೆ ಪೂರೈಕೆಗೂ ಅನುಕೂಲವಾಗುತ್ತದೆ ಎಂದರು.
ಯಾವುದೇ ಅರ್ಹ ಬಿಪಿಎಲ್ ಕಾಡ್೯ಗಳನ್ನು ರದ್ದು ಮಾಡುತ್ತಿಲ್ಲ. ನಿಯಮಾವಳಿ ಪ್ರಕಾರ ಹೊಸದಾಗಿ ಬಿಪಿಎಲ್ ಕಾರ್ಡ ಪಡೆಯಲು ಸಹ ಯಾವುದೇ ನಿರ್ಬಂಧವಿಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.