Advertisement

ನಿರಾಶ್ರಿತರ ಕೇಂದ್ರಕ್ಕೆ ಅಧಿಕಾರಿ ಭೇಟಿ

03:32 PM Apr 22, 2020 | Naveen |

ಕಲಬುರಗಿ: ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ವಲಸೆ ಕಾರ್ಮಿಕರು ತಂಗಿರುವ ಅಫಜಲಪುರ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ನಂತರ ಬಾಲಕರ ವಸತಿ ನಿಲಯದ ಕಾರ್ಮಿಕರ ನಿರಾಶ್ರಿತರ ಕೇಂದ್ರಕ್ಕೆ ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕರ ನೋಡಲ್‌ ಅಧಿಕಾರಿ ಶ್ರೀಹರಿ ದೇಶಪಾಂಡೆ ಅವರು ಭೇಡಿ ನೀಡಿ ಕಾರ್ಮಿಕರ ಸಮಸ್ಯೆ ಆಲಿಸಿದರು.

Advertisement

ನಂತರ ಧಾರ್ಮಿಕ ಸ್ಥಾನವಾದ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೂ ಭೇಟಿ ನೀಡಿ ಅಲ್ಲಿ ಸಾಮಾಜಿಕ ಅಂತರ ಕಾಪಾಡುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ದತ್ತಾತ್ರೇಯನ ದರ್ಶನಕ್ಕೆ ಬಂದು ಲಾಕ್‌ಡೌನ್‌ ಪರಿಣಾಮ ಇಲ್ಲಿಯೆ ಉಳಿದಿರುವ ಮಹಾರಾಷ್ಟ್ರದ ಯಾವತಮಾಳ ಗ್ರಾಮದ 6 ಸದಸ್ಯರ ಕುಟುಂಬವನ್ನು ಭೇಟಿ ಮಾಡಿದ ಶ್ರೀಹರಿ ದೇಶಪಾಂಡೆ ಅವರು ಎಲ್ಲರಿಗೂ ಮಾಸ್ಕ್, ಸ್ಯಾನಿಟೈಸರ್‌ ನೀಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ತಿಳಿಸಿದರು.

ಭಕ್ತಾದಿಗಳು ತಮ್ಮ ಊರಿಗೆ ಹೋಗಲು ವ್ಯವಸ್ಥೆ ಮಾಡುವಂತೆ ಕೇಳಿಕೊಂಡರು. ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಪ್ರಯಾಣ ಸಾಧ್ಯವಿಲ್ಲ. ತಮಗೆ ಬೇಕಾದ ಎಲ್ಲಾ ಅವಶ್ಯಕ ವಸ್ತುಗಳನ್ನು ಪೂರೈಸಲಾಗುವುದು ಎಂದು ಅಧಿ ಕಾರಿಗಳು ಅವರಿಗೆ ಮನವರಿಕೆ ಮಾಡಿದರು.

ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ, ದತ್ತಾತ್ರೇಯ ದೇವಸ್ಥಾನದ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಬಿರಾದಾರ, ಸಂತೋಷ ಕುಲಕರ್ಣಿ, ಬಸವರಾಜ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next