Advertisement
ಕಾಮಗಾರಿ ಟೆಂಡರ್ ವಾಗಿ ಜತೆಗೆ ಒಪ್ಪಂದ ನಡೆದು ಆರೇಳು ತಿಂಗಳಾದರೂ ಕಾಮಗಾರಿ ಆರಂಭಿಸುತ್ತಿಲ್ಲ. ಪರ್ಸೆಂಟೆಜ್ ( ನೈವೇದ್ಯ) ನೀಡಿದ ನಂತರವೇ ಪೂಜೆ ನೆರವೇರಿಸಲಾಗುತ್ತಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಜಗನ್ನಾಥ ಶೇಗಜಿ ಪತ್ರಿಕಾಗೋಷ್ಠಿಯಲ್ಲಿ ನೇರವಾಗಿ ಆರೋಪಿಸಿದರು.
Related Articles
Advertisement
ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾಲ್ಕು ಸಾವಿರ ಕೋ. ರೂ. ಬಿಲ್ ಬಾಕಿ ಇದೆ. ಈಗ ಹೊಸದಾಗಿ ಕೆಲಸ ಮಾಡಿದವರಿಗೆ ಪರ್ಸೆಂಟೆಜ್ ಪಡೆದು ಬಿಲ್ ಮಾಡಲಾಗುತ್ತಿದೆ. ಆದರೆ ಎಲ್ಲ ನಿಯಮಾವಳಿ ಪ್ರಕಾರ ಕಾಮಗಾರಿ ಮಾಡಿದ ತಮಗೆ ಬಿಲ್ ಮಾಡದೇ ಸತಾಯಿಸಲಾಗುತ್ತಿದೆ ಎಂದು ಶೇಗಜಿ ದೂರಿದರು.
ಮೃತ ಸಂತೋಷ ಪಾಟೀಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ಈ ಕೂಡಲೇ 25 ಲಕ್ಷ ರೂ ಪರಿಹಾರ ನೀಡಬೇಕು. ಸೂಕ್ತ ತನಿಖೆಯಾಗಿ ಈ ತಿಂಗಳ ಒಳಗಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದರೆ ವಿಧಾನಸೌಧದ ಮುತ್ತಿಗೆ ಹಾಕಲಾಗುವುದು. ಎಷ್ಟೇ ಜೀವ ಹೋದರೂ ಗುತ್ತಿಗೆದಾರರ ಸಂಘ ಹಿಂದೆ ಸರಿಯದು ಎಂದು ಜಗನ್ನಾಥ ಶೇಗಜಿ ಗುಡುಗಿದರು.
ದನಗಳ ಸಂತೆಯಲ್ಲಿ ಎಮ್ಮೆ ಕರುಗಳು ಖರೀದಿ ಮಾಡಿರುವಂತೆ ಶಾಸಕರನ್ನು ಖರೀದಿ ಮಾಡಿರುವಾಗ ಭ್ರಷ್ಟಾಚಾರ ನಡೆಯದೆ ಇನ್ನೇನು ಸಾಧ್ಯ. ಇನ್ಮುಂದೆಯಾದರೂ ಪರ್ಸೆಂಟೆಜ್ ದಂಧೆ ನಿಲ್ಲಲಿ ಎಂದರು.