ಕಲಬುರಗಿ: ನಗರದ ಹೊರವಲಯದ ನೂತನ ವಿಮಾನ ನಿಲ್ದಾಣಕ್ಕೆ ಅ. 15 ಮತ್ತು 16ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದು ಸಂಸದ ಡಾ| ಉಮೇಶ ಜಾಧವ ತಿಳಿಸಿದ್ದಾರೆ.
ಬುಧವಾರ ದೆಹಲಿಯಲ್ಲಿ ನಾಗರಿಕ ವಿಮಾನಯಾನ ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಸಂಸದರು ಭೇಟಿ ಮಾಡಿದರು. ವಿಮಾನಯಾನ ಸಚಿವ ಹರಿದೀಪ್ ಸಿಂಗ್ ಪುರಿ ಅವರ ಆಪ್ತ ಕಾರ್ಯದರ್ಶಿ ಅಜಯ ಯಾದವ, ಸಚಿವಾಲಯದ ಡೈರೆಕ್ಟರ್ ಜನರಲ್ ಅರುಣಕುಮಾರ, ಭದ್ರತಾ ಘಟಕದ ಡೈರೆಕ್ಟರ್ ಜನರಲ್ ರಾಕೇಶ ಆಸ್ಥಾನ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ವಿಮಾನ ನಿಲ್ದಾಣದಿಂದ ಶೀಘ್ರವೇ ವಿಮಾನ ಹಾರಾಟ ಆರಂಭಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ವಿಮಾನ ನಿಲ್ದಾಣದ ಭದ್ರತೆ ವಿಷಯವು ಮುಖ್ಯವಾಗಿದೆ. ಆದ್ದರಿಂದ ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಭದ್ರತೆ ಹಾಗೂ ತಾಂತ್ರಿಕ ವ್ಯವಸ್ಥೆ ಬಗ್ಗೆ ಅ.15 ಹಾಗೂ 16ರಂದು ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಲಿದ್ದಾರೆ ಎಂದು ಡಾ| ಜಾಧವ ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕರಾಗಿ ಸುಶೀಲ ಶ್ರೀವಾಸ್ತವ ಅವರನ್ನು ಈಗಾಗಲೇ ನೇಮಿಸಲಾಗಿದೆ. ವಿಮಾನ ನಿಲ್ದಾಣದ ಭದ್ರತೆಗೆ ಅವಶ್ಯಕವಿರುವ ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಹದಿನೈದು ದಿನಗಳ ಮೊದಲು ಒದಗಿಸಿದರೆ, ನ.1ರ ರಾಜ್ಯೋತ್ಸವದ ದಿನದಂದೇ ವಿಮಾನ ನಿಲ್ದಾಣ ಉದ್ಘಾಟಿಸಲು ವಿಮಾನಯಾನ ಇಲಾಖೆ ಸಿದ್ಧವಾಗಿದೆ ಎಂದು ಸುಶೀಲ್ ಶ್ರೀವಾಸ್ತವ ಇತ್ತೀಚೆಗೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಅಲ್ಲದೇ, ಅಲೈನ್ಸ್ ಏರ್‌ಲೈನ್ಸ್ ಮತ್ತು ಸ್ಟಾರ್ ಏರ್‌ವೇಸ್‌ಗಳು ಕಲಬುರಗಿ ವಿಮಾನ ನಿಲ್ದಾಣದಿಂದ ತಿರುಪತಿ, ಬೆಂಗಳೂರು ಮತ್ತು ದೆಹಲಿಗೆ ವಿಮಾನಯಾನ ಸೇವೆ ಒದಗಿಸಲು ಮುಂದೆ ಬಂದಿವ.