Advertisement

ಕಲಬುರಗಿ ಪಾಲಿಕೆ ಅತಂತ್ರ: ಬಿಜೆಪಿ ನಿರೀಕ್ಷೆಮೀರಿ ಸಾಧನೆ,ಕಿಂಗ್ ಮೇಕರ್ ಸ್ಥಾನದಲ್ಲಿ ಜೆಡಿಎಸ್

04:07 PM Sep 06, 2021 | Team Udayavani |

ಕಲಬುರಗಿ: ತೀವ್ರ ಬಿರುಸಿನಿಂದ ಕೂಡಿದ್ದ ಇಲ್ಲಿನ‌ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಬಾರದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಅತಿ ಹೆಚ್ಚಿನ ಸ್ಥಾನ ಪಡೆದು ಹೊರ ಹೊಮ್ಮಿದರೂ ಬಿಜೆಪಿ ನಿರೀಕ್ಷೆ ಮೀರಿ ಸಾಧನೆ ಮಾಡಿದೆ.

Advertisement

55 ಸ್ಥಾನಗಳಲ್ಲಿ ಅಂತಿಮವಾಗಿ ಕಾಂಗ್ರೆಸ್ 27 ಹಾಗೂ ಬಿಜೆಪಿ 23 ಹಾಗೂ ಜೆಡಿಎಸ್ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿದೆ. ಒಂದು ಸ್ಥಾನದಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಸರಳ ಬಹುಮತಕ್ಕೆ 28 ಸ್ಥಾನಗಳು ಬೇಕಾಗಿದ್ದು, ಯಾರಿಗೂ ಈ ಸ್ಥಾನಗಳು ಬಂದಿಲ್ಲ.

ಬಿಜೆಪಿ ನಿರೀಕ್ಷೆ ಮೀರಿ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿದೆ.‌ ಕಳೆದ ಸಲ ಬಿಜೆಪಿ ಕೇವಲ ಏಳು ಸ್ಥಾನ ಗಳಿಸಿತ್ತು. ಅದರಕ್ಕಿಂತ ಹಿಂದಿನ ಸಲ ಬಿಜೆಪಿ 17 ಸ್ಥಾನ ಹೊಂದಿತ್ತು.‌ ಈಗ 23 ಸ್ಥಾನ ಪಡೆದಿದ್ದು, ಉತ್ತಮ ಸಾಧನೆ ಎನ್ನಬಹುದಾಗಿದೆ.

ಇದನ್ನೂ ಓದಿ:ಬೊಮ್ಮಾಯಿ ನಾಯಕತ್ವ ವಹಿಸಿದ ಒಂದೇ ತಿಂಗಳಲ್ಲಿ ಸಿಕ್ಸರ್ ಹೊಡೆದಿದ್ದಾರೆ: ಮುರುಗೇಶ್ ನಿರಾಣಿ

ಬಿಜೆಪಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸೇರಿ ಸದಸ್ಯರ ಬೆಂಬಲ ಪಾಲಿಕೆಯಲ್ಲಿ ಹೊಂದಿದೆ. ಹೀಗಾಗಿ ಈ ಸದಸ್ಯರ ಸಂಖ್ಯೆ ಸೇರಿದರೆ ಬಿಜೆಪಿ ಸಂಖ್ಯೆ 29 ಆಗುತ್ತದೆ. ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಸರಳವಾಗಿ ಅಧಿಕಾರಕ್ಕೆ ಬರಬಹುದಾಗಿದೆ.‌

Advertisement

ಪಾಲಿಕೆಯಲ್ಲಿ 55 ಸ್ಥಾನಗಳೊಂದಿಗೆ ಸಂಸದರು ಹಾಗೂ ಶಾಸಕರು ಸೇರಿ 63 ಸ್ಥಾನಗಳಾಗಲಿವೆ ಹೀಗಾಗಿ ಬಹುಮತಕ್ಕೆ 32 ಸದಸ್ಯರ ಬಹುಮತ ಅಗತ್ಯವಿದೆ.

ಕಿಂಗ್ ಮೇಕರ್ ಜೆಡಿಎಸ್: ಪಾಲಿಕೆ ಆಡಳಿತ ಚುಕ್ಕಾಣಿಯಲ್ಲಿ ಜೆಡಿಎಸ್ ಕಿಂಗ್ ಮೇಕರ ಸ್ಥಾನ ವಹಿಸಿದೆ. ಅವರು ಯಾರಿಗೆ ಬೆಂಬಲಿಸುತ್ತಾರೆಯೋ ಅವರು ಆಡಳಿತ ಚುಕ್ಕಾಣಿ ಹಿಡಿಯಲಿದೆ.

ಬಿಜೆಪಿ ತಂತ್ರಗಾರಿಕೆ: ಪಾಲಿಕೆಯಲ್ಲಿ ಈ ಸಲ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ನಿಟ್ಟಿನಲ್ಲಿ ಚುನಾವಣೆಯಲ್ಲಿ ತಂತ್ರಗಾರಿಕೆ ರೂಪಿಸಿದ್ದಲ್ಲದೇ ಈಗ ಆಡಳಿತದ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ರೂಪಿಸುತ್ತಿದ್ದು, ಬಿಜೆಪಿ  ವರಿಷ್ಠರು ಹಾಗೂ ಚುನಾವಣಾ ಉಸ್ತುವಾರಿಗಳು ಖಾಸಗಿ ಹೊಟೇಲ್ ದಲ್ಲಿ ಸಭೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸಹ ತಂತ್ರಗಾರಿಕೆಯಲ್ಲಿ ತೊಡಗಿದೆ.

Advertisement

Udayavani is now on Telegram. Click here to join our channel and stay updated with the latest news.

Next