Advertisement
ಮೂರು ದಶಕಗಳ ಬಳಿಕ ನಡೆದ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶುಕ್ರವಾರ ಯಶಸ್ವಿಯಾಗಿ ಕೊನೆಗೊಂಡಿತು. ನಿರೀಕ್ಷೆಗೂ ಮೀರಿ ಜನರು ಅಕ್ಷರ ಜಾತ್ರೆಗೆ ಸಾಕ್ಷಿಯಾಗಿ ಕನ್ನಡ ಪ್ರೇಮ ಮೆರೆದರು. ನುಡಿ ಜಾತ್ರೆಯನ್ನು ಮನೆಯ ಹಬ್ಬ ಎನ್ನುವ ರೀತಿಯಲ್ಲಿ ರಾಜ್ಯದ ಮೂಲೆ-ಮೂಲೆಗಳಿಂದ ಆಗಮಿಸಿ ಕನ್ನಡದ ಹಿರಿಮೆ-ಗರಿಮೆ ಸಾರಿದರು. ಊಹೆಗೂ ನಿಲುಕದ ಸಂಭ್ರಮ ಕಂಡು ಸಾಗರಕ್ಕೆ ನದಿಗಳು ಸೇರುವಂತೆ ಜನಸಾಗರವೇ ಸಮ್ಮೇಳನಕ್ಕೆ ಹರಿದು ಬಂದಿತ್ತು.
Related Articles
ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಸಾಗರೋಪಾದಿಯಲ್ಲಿ ಹರಿದು ಬಂದ ಕನ್ನಡಾಭಿಮಾನಿಗಳು ಎಷ್ಟು ಕಾರಣವೋ, ಅವರ ಹೊಟ್ಟೆಯನ್ನು ತಣಿಸಿದ ಪಾಕಶಾಲೆಯವರೂ ಅಷ್ಟೇ ಕಾರಣ. ಸಮ್ಮೇಳನದ ಸಿದ್ಧತಾ ಕಾರ್ಯದ ದಿನಗಳಿಂದ ಹಿಡಿದು ಶನಿವಾರದವರೆಗೂ ಸತತ 11 ದಿನಗಳ ಕಾಲ ಒಲೆಗಳ ಮುಂದೆ ಬೆಂದು ಅಡುಗೆ ಮಾಡಿದ ಹುಬ್ಬಳ್ಳಿಯ ಬೈರು ಕೆಟರ್ಸ್‌ನವರಲ್ಲಿ ಸಮ್ಮೇಳನಕ್ಕೆ ದುಡಿದ ಸಂತೃಪ್ತಿ ಕಾಣುತ್ತಿತ್ತು. ಮೊದಲ ದಿನ ಸೇರಿದ ಜನ ಸಂದಣಿ ಕಂಡು ಅಂದೇ ರಾತ್ರಿಯೇ ಹೆಚ್ಚಿನ ಬಾಣಸಿಗರು, ಕೆಲಸಗಾರರನ್ನು ಕರೆಸಿ ಅಡುಗೆ ಮಾಡಿಸಿದವರು ಕೆಟರ್ಸ್ ಮಾಲೀಕ ಬಾಬುಲಾಲ್ ಪ್ರಜಾಪತಿ. ಮೊದಲ ದಿನ 1500 ಜನರು ಅಡುಗೆಯವರು ಇದ್ದರು. ಎರಡು ಮತ್ತು ಮೂರನೇ
ದಿನ ಒಟ್ಟಾರೆ 600 ಬಾಣಸಿಗರು, ಕಲಬುರಗಿಯ 400 ಹಾಗೂ ಹುಬ್ಬಳ್ಳಿಯ 200 ಜನ ಮಹಿಳೆಯರು ಸೇರಿದಂತೆ ಒಟ್ಟಾರೆ 2000 ಜನರು ಅಡುಗೆ ಮಾಡಿದರು. ಅಕ್ಷರ ಜಾತ್ರೆಯಲ್ಲಿ ದುಡಿಯಲು ಸಹಕಾರ ನೀಡಿದ ಕಲಬುರಗಿ ಜನತೆಗೆ ಅಭಿನಂದನೆ ಸಲ್ಲಿಸುವುದಾಗಿ ಬಾಬುಲಾಲ್ ಪ್ರಜಾಪತಿ ತಿಳಿಸಿದ್ದಾರೆ.
Advertisement
ನುಡಿ ಜಾತ್ರೆಗಾಗಿ 11 ದಿನಗಳ ಕಾಲ ಶ್ರಮಿಸಲಾಗಿದೆ. ಆರು ದಿನಗಳ ಶೇಂಗಾ ಹೋಳಿಗೆ, ಸಮ್ಮೇಳನದ ಮೂರು ದಿನ ಹಗಲು-ರಾತ್ರಿ ಚಪಾತಿ ಲಟ್ಟಿಸಿದ್ದೇವೆ. ಉಳಿದ ದಿನಗಳಲ್ಲಿ ತರಕಾರಿ ಹೆಚ್ಚಿದ್ದೇವೆ. ಯಾರೊಬ್ಬರಿಗೂ ಊಟ ಕಡಿಮೆ ಆಗಬಾರದು ಎಂಬುವುದೇ ನಮ್ಮ ಉದ್ದೇಶವಾಗಿತ್ತು. ನಮ್ಮೂರಿಗೆ ಬಂದು ಜನರು ಚಪ್ಪರಿಸಿ ತಿಂದಿದ್ದು, ಖುಷಿ ಕೊಟ್ಟಿದೆ.ಅಂಬುಬಾಯಿ, ಕಲ್ಲಹಂಗರಗಾ ನಿವಾಸಿ ಕಲಬುರಗಿಯಲ್ಲಿ 32 ವರ್ಷಗಳ ಹಿಂದೆ ಸಾಹಿತ್ಯ ಸಮ್ಮೇಳನ ನಡೆದಿತ್ತಂತೆ. ನನಗೀಗ 25 ವರ್ಷ. ಅಂದರೆ ಆಗ ನಾನು ಆಗ ಹುಟ್ಟೇ ಇರಲಿಲ್ಲ. ಇಷ್ಟು ಸುದೀರ್ಘ ಕಾಲದ ನಂತರ ಸಮ್ಮೇಳನ ನಡೆದಿದೆ ಎಂಬುದನ್ನು ಕೇಳಿಯೇ ರೋಮಾಂಚನಗೊಂಡಿದ್ದೆ. ಮೂರು ದಿನ ತಪ್ಪದೇ ಸಮ್ಮೇಳನದಲ್ಲಿ ಭಾಗಿಯಾದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ.
ಅಂಬಿಕಾ ಬಿ., ಹಳ್ಳಿ, ವಿದ್ಯಾರ್ಥಿ ರಂಗಪ್ಪ ಗಧಾರ