Advertisement
ಮಹಾರಾಷ್ಟ್ರದ ಪುಣೆಯ ಭೋಸಾರಿಯಲ್ಲಿ ಕನ್ನಡ ನಾಡಿನ ಅದರಲ್ಲೂ ಕಲಬುರಗಿ-ವಿಜಯಪುರ ಜಿಲ್ಲೆಯ ಕನ್ನಡಿಗರು ಕಳೆದೊಂದು ತಿಂಗಳಿನಿಂದ ಲಾಕ್‌ಡೌನ್‌ದಿಂದ ನಿರಾಶ್ರಿತರಾದ ಕನ್ನಡಿಗರಿಗೆ ದಿನಾಲು ಎರಡೊತ್ತು ಊಟ ಹಾಕುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಭೋಸಾರಿಯಲ್ಲಿ ಕನ್ನಡಗರೇ ಹೆಚ್ಚಾಗಿ ವಾಸಿಸುವ ಪ್ರದೇಶವಾಗಿದೆ. ಹೀಗಾಗಿ ಇಲ್ಲೊಂದು ಕನ್ನಡ ಸಂಘ ರಚಿಸಲಾಗಿದೆ. ಇದರಲ್ಲಿ 50ಕ್ಕೂ ಹೆಚ್ಚು ಯುವಕ ಕನ್ನಡಿಗರಿದ್ದಾರೆ. ಕನ್ನಡ ಸಂಘದ ಪದಾಧಿಕಾರಿಗಳಾದ ದ್ರುವ ಕುಲಕರ್ಣಿ, ಸಿದ್ದರಾಮ ಎಂ. ಧುತ್ತರಗಾಂವ, ಸುಧೀರ ಕುಲಕರ್ಣಿ, ಸಂಜಯಕುಮಾರ ರೊಡಗಿ, ಗಂಗಾಧರ ಬೆಣ್ಣೂರ ಮುಂತಾದವರು ಕನ್ನಡ ಸಂಘವನ್ನು ಮುನ್ನೆಡೆಸಿಕೊಂಡು ಬರುತ್ತಿದ್ದಾರೆ.
ಸಿದ್ಧರಾಮ ಎಂ. ಧುತ್ತರಗಾಂವ,
ಕನ್ನಡ ಸಂಘ, ಪುಣೆ