Advertisement
ನಗರದ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪುಸ್ತಕ ಪ್ರದರ್ಶನ, ವಾಣಿಜ್ಯ ಮಳಿಗೆಗಳ ರೂಪರೇಷೆ ಮತ್ತು ಸಿದ್ಧತೆಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಟ್ಟಾರೆ 800 ಮಳಿಗೆ ಸ್ಥಾಪಿಸಲು ಅಂದಾಜಿಸಲಾಗಿದೆ. ಈ ಬಾರಿ ಸಮ್ಮೇಳನದಲ್ಲಿ ನೆಲಕ್ಕೆ ಮ್ಯಾಟ್ ಅಳವಡಿಸಿ ಆ ಮೂಲಕ ಧೂಳನ್ನು ತಡೆಗಟ್ಟುವುದು ಹಾಗೂ ಹಿರಿಯ ನಾಗರಿಕರಿಗೆ ಐದರಿಂದ ಹತ್ತು ವ್ಹೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಚರ್ಚಿಸುವ ಸಾಮಾನ್ಯರಿಗೆ ಪುಸ್ತಕ ಮಳಿಗೆಯಲ್ಲಿ “ಲೇಖಕರ ಲಾಂಜ್’ ವ್ಯವಸ್ಥೆ ಕಲ್ಪಿಸಲಾಗುವುದು. ಈ ಮಳಿಗೆಗಳ ಸನಿಹದಲ್ಲಿ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಮೂಲಭೂತ ಸೌಕರ್ಯ ಒದಗಿಸಲು ಹಿರಿಯ ಸಾಹಿತಿಗಳು, ಸಮಿತಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ಸಲಹೆ-ಸೂಚನೆ ನೀಡಿದ್ದಾರೆ. ಇವುಗಳನ್ನು ಪಾಲಿಸಲಾಗುವುದು ಎಂದರು. ಶೇ. 50 ರಿಯಾಯ್ತಿ ದರದಲ್ಲಿ ಪುಸ್ತಕ ಮಾರಾಟ ಮಾಡುವುದಾಗಿ ಉಪ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮಕ್ಕಳು, ವಿದ್ಯಾರ್ಥಿಗಳು, ಸಾರ್ವಜನಿಕರು, ಆಸಕ್ತರು ಪುಸ್ತಕ ಖರೀದಿಸಬೇಕು ಎಂದು ಕರೆ ನೀಡಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಸಂಜೀವನ್ ರಮೇಶ ಯಾಕಾಪುರ, ಶಿವಶರಣಪ್ಪ ರಾಜೇಂದ್ರಪ್ಪ ಶಂಕರ, ದೇವಕಿ ಚೆನ್ನಮಲ್ಲಯ್ಯ ಹಿರೇಮಠ, ವಿಜಯಲಕ್ಷ್ಮೀ ಹಿರೇಮಠ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಸವರಾಜ ವಾಲಿ, ಸಮಿತಿ ಕಾರ್ಯಾಧ್ಯಕ್ಷ ಹಾಗೂ ಕೆಐಎಡಿಬಿ ವಿಶೇಷ ಭೂಸ್ವಾಧೀನಾ ಧಿಕಾರಿ ಬಿ. ಶರಣಪ್ಪ, ಕರ್ನಾಟಕ ನೀರಾವರಿ ನಿಗಮ ಬೆಣ್ಣೆತೋರಾ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಪಾರ್ವತಿ ರೆಡ್ಡಿ, ಜಿಲ್ಲಾ ಕೇಂದ್ರ ಗ್ರಂಥಾಲಯ
ಉಪನಿರ್ದೇಶಕ ಅಜಯ ಕುಮಾರ, ಸಿ.ಯು.ಕೆ ಗ್ರಂಥಾಲಯ ಅಧಿಕಾರಿ ಪರಶುರಾಮ ಕಟ್ಟಿಮನಿ, ಕೆವಿಕೆ ಮುಖ್ಯಸ್ಥ ಡಾ| ರಾಜು ತೆಗ್ಗಳ್ಳಿ, ಗುಲಬರ್ಗಾ ವಿಶ್ವವಿದ್ಯಾಲಯ ಗ್ರಂಥಾಲಯಾಧಿಕಾರಿ ಗಣಪತಿ ಶಿಂಧೆ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಮಂಜುನಾಥ, ತಯಾರಿಕಾ ಸಂಘಗಳ ಅಧ್ಯಕ್ಷ ರವಿಂದ್ರ ಮುಕ್ಕಾ, ಆಯಿಲ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಅರುಣಕುಮಾರ, ಶಿವಣಗೌಡ ಪಾಟೀಲ ಹಂಗರಗಿ
ಇನ್ನಿತರರು ಇದ್ದರು.