Advertisement

ಜಕಣಾಚಾರಿ ಜಯಂತಿಗೆ ಸರ್ಕಾರದಲ್ಲೇ ಅಡ್ಡಿ

01:41 PM Jan 19, 2020 | Naveen |

ಕಲಬುರಗಿ: ಸರ್ಕಾರದಿಂದ ಅಮರಶಿಲ್ಪಿ ಜಕಣಾಚಾರಿಜಯಂತಿ  ಆಚರಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆದೇಶಿಸಿದ್ದರೂ, ಜಯಂತಿ ಆಚರಣೆಗೆ ಸರ್ಕಾರದಲ್ಲೇ ಅಡ್ಡಿ ಎದುರಾಗಿದೆ ಎಂದು ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಮತ್ತು ವಿಧಾನ ಪರಿಷತ್‌ ಸದಸ್ಯ ಕೆ.ಪಿ. ನಂಜುಂಡಿ ಅಸಮಾಧಾನ ಹೊರಹಾಕಿದರು.

Advertisement

ನಗರದ ಕೋಸಗಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಮಹಾಶಿಲ್ಪಿ ಜಕಣಾಚಾರಿ ಸಂಸ್ಮಣೋತ್ಸವ ಹಾಗೂ ಕಲ್ಯಾಣ ಕರ್ನಾಟಕ ವಿಶ್ವಕರ್ಮ ಮಹಾಸಭಾ ವಿಭಾಗ ಮಟ್ಟದ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಯಂತಿ ಆಚರಣೆಗೆ ಮುಖ್ಯಮಂತ್ರಿಗಳೇ ಆದೇಶ ಮಾಡಿದರೂ ಸಂಬಂಧಪಟ್ಟ ಸಚಿವರು ಜಯಂತಿಗಳನ್ನೇ ಕಡಿತ ಮತ್ತು ರದ್ದು ಮಾಡುವ ಯೋಜನೆಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಜಯಂತಿ ಆಚರಣೆ ಮಾಡಿ ಎಂದು ಮನವಿ ಮಾಡುತ್ತೀರಿ. ಈ ಬಗ್ಗೆ ಸಂಪುಟದಲ್ಲಿ ಪ್ರಸ್ತಾಪಿಸಿದರೆ, ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾ ಮುಖ್ಯಮಂತ್ರಿ ಆದೇಶಕ್ಕೂ ಬೆಲೆ ಇಲ್ಲದಂತೆ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದೇವರನ್ನು ರೂಪಿಸುವ, ಪೂಜಿಸುವ ರೂಪಿಸಿದ ವಿಶ್ವಕರ್ಮರು ರಾಜಕೀಯ ಶಕ್ತಿಯಿಲ್ಲದ ಕಾರಣಕ್ಕೆ ಯಾರದ್ದೂ ಕಾಲು ಬೀಳುವಂತ ಸ್ಥಿತಿ ನಿರ್ಮಾಣವಾಗಿದೆ. ವಿಧಾನ ಪರಿಷತ್‌ ಸದಸ್ಯ ಸ್ಥಾನ ಗೌರವದ ಹುದ್ದೆ. ಇದರಿಂದ ಸಮಾಜದವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ, ಇಷ್ಟಕ್ಕೆ ಸಮಾಧಾನಗೊಳ್ಳದೇ, ನಾನೇದಾರೂ ಉನ್ನತ ಅಧಿಕಾರಕ್ಕೆ ಹೋಗಿ ನಿಮ್ಮನ್ನು ಕಡೆಗಣಿಸಿದರೆ, ನನ್ನ ವಿರುದ್ಧವೂ ಹೋರಾಟ ಮಾಡುವಂತ ಮನೋಭಾವ ಬೆಳೆಸಿಕೊಳ್ಳಬೇಕು. ಯಾರ ಕೃಪಾಶೀರ್ವಾದವೂ ನಿಮಗೆ ಬೇಕಿಲ್ಲ ಎಂದರು.

ನಮ್ಮ ಹಕ್ಕುಗಳನ್ನು ಎಲ್ಲಿಯವರೆಗೂ ಕೇಳುವುದಿಲ್ಲವೋ, ಅಲ್ಲಿಯವರೆಗೂ ಉದ್ಧಾರ ಸಾಧ್ಯವಿಲ್ಲ. ಕೇವಲ ದೇವಸ್ಥಾನ ಕಟ್ಟುವುದರಲ್ಲಿ ಶ್ರಮಿಸದೇ, ನಮಗೂ ಅಧಿಕಾರ ಬೇಕೆಂಬ ಕೆಚ್ಚು ಬೇಕು. ರಾಜ್ಯದಲ್ಲಿ 45 ಲಕ್ಷ ಜನ ಸೇರಿ ದೇಶಾದ್ಯಂತ 10 ಕೋಟಿ ವಿಶ್ವಕರ್ಮ ಸಮುದಾಯದವರಿದ್ದಾರೆ. ಹೀಗಾಗಿ ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ಹೆಜ್ಜೆ ಇಡಬೇಕೆಂದು ಸಲಹೆ ನೀಡಿದರು.

Advertisement

ಏಕದಂಡಗಿ ಮಠದ ಕುಮಾರ ಸ್ವಾಮೀಜಿ ಮಾತನಾಡಿ, ಕೆ.ಪಿ. ನಂಜುಂಡಿ ರಾಜ್ಯ ಮಟ್ಟದಲ್ಲಿ ವಿಶ್ವಕರ್ಮ ಸಮಾಜದ ಏಕೈಕ ನಾಯಕರಾಗಿದ್ದಾರೆ. ಈಗಾಗಲೇ ಅವರು ವಿಧಾನ ಪರಿಷತ್‌ ಸದಸ್ಯರಾಗಿದ್ದರಿಂದ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಶಾಸಕ ದತ್ತಾತ್ರೇಯ ಪಾಟೀಲ, ಕಾಂಗ್ರೆಸ್‌ ಶಾಸಕ ಎಂ.ವೈ.ಪಾಟೀಲ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಮರನಾಥ ಪಾಟೀಲ, ಬಿಜೆಪಿ ಮಹಿಳಾ ಘಟಕ ಅಧ್ಯಕ್ಷ ದಿವ್ಯಾ ಹಾಗರಗಿ ಮಾತನಾಡಿ ಕೆ.ಪಿ. ನಂಜುಂಡಿ ಅವರನ್ನು ಸಚಿವರನ್ನಾಗಿ ಮಾಡುವ ಬೇಡಿಕೆಗೆ ಧ್ವನಿಗೂಡಿಸಿದರು. ಅವರಿಗೆ ಸಚಿವ ಸ್ಥಾನ ನೀಡಿ ವಿಶ್ವಕರ್ಮ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದು ಹೇಳಿದರು.

ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಗುರುನಾಥೇಂದ್ರ ಸ್ವಾಮಿಜಿ, ಶಹಾಪುರ ವಿಶ್ವಕರ್ಮ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮಿ, ಅಜೇಂದ್ರಸ್ವಾಮಿ, ಯಾದಗಿರಿಯ ಶ್ರೀನಿವಾಸ ಸ್ವಾಮೀಜಿ, ವಿಶ್ವಕರ್ಮ ಏಕದಂಡಗಿ ಮಠದ ಸುರೇಂದ್ರ ಸ್ವಾಮೀಜಿ, ಶ್ಯಾಡಲಗೇರಿಯ ಸೂರ್ಯನಾರಾಯಣ ಸ್ವಾಮೀಜಿ, ಅಫ‌ಲಜಪುರ ಮೌನೇಶ್ವರ ಸ್ವಾಮೀಜಿ, ಸುಲೇಪೇಟನ ದೊಡ್ಡೇಂದ್ರ ಸ್ವಾಮೀಜಿ, ಮೌನೇಶ್ವರ ಸ್ವಾಮೀಜಿ, ನಾಗಮೂತೇಂದ್ರ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ನಾಗಪ್ಪಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕರಾದ ವಾಲ್ಮೀಕಿ ನಾಯಕ, ಶಶೀಲ ನಮೋಶಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಮೋಹನ ಸೀತನೂರ, ಡಾ| ಬಿ.ಎಚ್‌. ಕೋಸಗಿ, ಅಶೋಕ ಪೋದ್ದಾರ, ಸುಭಾಷ ಪಂಚಾಳ, ಬಸವರಾಜ ಪಂಚಾಳ, ಚಿತ್ರಲೇಖಾ ಟೆಂಗಳಿಕರ್‌, ಕೇಶವ ಸಿತನೂರ, ರಾಘವೇಂದ್ರ ಮೈಲಾಪುರ, ಬಾಬುರಾವ್‌ ವಿಶ್ವಕರ್ಮ,
ದೇವಿಂದ್ರ ಸ್ವಾಮಿಗಳು, ಕುಪ್ಪಣ್ಣ ಪೋದ್ದಾರ, ಮನೋಹರ್‌ ಪೋದ್ದಾರ, ಅಮೃತ ವಿಶ್ವಕರ್ಮ, ಐ.ಸಿ.ಪಂಚಾಳ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next