Advertisement

Kalaburagi: ಹನಿಟ್ರ್ಯಾಪ್ ಬ್ಲಾಕ್ ಮೇಲ್ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

02:46 PM Sep 08, 2024 | Team Udayavani |

ಕಲಬುರಗಿ: ಯುವತಿಯರಿಗೆ ಕೆಲಸ, ನ್ಯಾಯ ಕೊಡಿಸುವುದಾಗಿ ಆತ್ಮೀಯತೆ ಬೆಳೆಸಿಕೊಂಡು ಅತ್ಯಾಚಾರ ಎಸಗುವುದರ ಜತೆಗೆ ಯುವತಿಯರನ್ನು ಇಟ್ಟುಕೊಂಡು ಶ್ರೀಮಂತರು ಹಾಗೂ ಅಧಿಕಾರಿಗಳ ಬಳಿ ಹೆಣ್ಣು ಮಕ್ಕಳನ್ನು ಬಳಸಿ ಹನಿಟ್ರ್ಯಾಪ್ ಬ್ಲಾಕ್ ಮೇಲ್ ದಂಧೆ ಪ್ರಕರಣವನ್ನು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

Advertisement

ಅನ್ಯಾಯ, ಶೋಷಣಗೆ ಒಳಗಾದ ಸಂತ್ರಸ್ತೆ ನೀಡಿದ ಹನಿಟ್ಯ್ರಾಪ್ ದಂಧೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶುಕ್ರವಾರ ದಲಿತ ಸೇನೆ ಮುಖಂಡ ರಾಜು ಲೇಂಗಟಿಯನ್ನು ಬಂಧಿಸಿರುವ ಪೊಲೀಸರು, ಶನಿವಾರ ತಡರಾತ್ರಿ ಪ್ರಭುಲಿಂಗ ಹಿರೇಮಠ ಎಂಬಾತನನ್ನು ಸಹ ಬಂಧಿಸಲಾಗಿದೆ.‌ ಇನ್ನುಳಿದ ಆರೋಪಿಗಳ ಬಂಧನ ಶೋಧನಾ ಕಾರ್ಯ ಮುಂದುವರೆದಿದೆ.

ದಲಿತ ಸೇನೆಯ ಕೆಲವು ಕ್ರಿಮಿನಲ್ ಕಾರ್ಯಕರ್ತರು ತಮ್ಮನ್ನು ಬಳಸಿ ಜತೆಗೆ ವ್ಯಾಪಾರಿ ಜತೆ ಹಾಗೂ ಇತರ ಜತೆ ಲೈಂಗಿಕ ಸಂಪರ್ಕಕ್ಕೆ ಬೆದರಿಸಿದ್ದಲ್ಲದೆ ಈ ಸಂಬಂಧ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದಿದ್ದಾರೆ.‌ ತದ ನಂತರ ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ರೂ ವಸೂಲಿ ಮಾಡಿದ್ದಾರೆ ಎಂದು ಸಂತ್ರಸ್ತೆಯರು ದೂರಿದ್ದಾರೆ.

ಒಟ್ಟಾರೆ ಈ ಪ್ರಕರಣ ಆಳ- ಅಗಲವನ್ನು ಪೊಲೀಸರ ತನಿಖೆಯಿಂದ ಇನ್ನಷ್ಟು ಬಯಲಾಗಲಿದೆ.‌ ಪೊಲೀಸ್ ಆಯುಕ್ತ ಶರಣಪ್ಪ ಢಗೆ ಅವರ ನಿರ್ದೇಶನ ಮೇರೆಗೆ ತನಿಖೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.