Advertisement

ಅಂತರಂಗದ ಸೌಂದರ್ಯಕ್ಕೆ ಪುರಾಣ ಆಲಿಸಿ

04:59 PM Jan 24, 2020 | Naveen |

ಕಲಬುರಗಿ: ದೇಹ, ತಲೆ ಮಾಸಿದರೆ ಸೋಪು, ಶ್ಯಾಂಪೋ ಹಚ್ಚಿ ಬಾಹ್ಯ ಸೌಂದರ್ಯ ಹೆಚ್ಚಿಸಲು ಹೇಗೆ ಯತ್ನಿಸುತ್ತೇವೆಯೋ ಅಂತರಂಗದ ಶುದ್ಧಿಗಾಗಿ ಪುರಾಣ-ಪ್ರವಚನ ಆಲಿಸಬೇಕೆಂದು ಚಿನ್ಮಯಗಿರಿಯ ವೀರ ಮಹಾಂತ ಶಿವಾಚಾರ್ಯರು ಹೇಳಿದರು.

Advertisement

ತಾಲೂಕಿನ ಕಡಣಿಯಲ್ಲಿ ಗದಿಗೇಶ್ವರ ಹಿರೇಮಠದ ನೂತನ ಕಟ್ಟಡ ಲೋಕಾರ್ಪಣೆ,
ಶ್ರೀ ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡ 11ದಿನಗಳ ಶ್ರೀ ರೇಣುಕಾಚಾರ್ಯರ ಪುರಾಣಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಜೀವನ ಎನ್ನುವುದು ಸದಾ ಜಂಜಾಟದಿಂದಲೇ ಕೂಡಿದೆ. ಜೀವನ ಪಾವನಗೊಳ್ಳಬೇಕಾದರೆ,
ಪವಿತ್ರವಾದ ಜಾಗಗಳಲ್ಲಿ ಸತ್ಸಂಗ ಮಾಡಬೇಕು. ಟಿವಿ ಎದುರು ಕೂತರೆ ಬದುಕು ಪಾವನವಾಗಲಾರದು. ಟಿವಿಯಿಂದ ಮನಸ್ಸಿನ ನೆಮ್ಮದಿ ಕದಡುತ್ತದೆ. ಆದ್ದರಿಂದ ಮಠ, ಮಂದಿರಗಳಿಗೆ ಹೋಗಿ ಸಂತರ ಹಿತನುಡಿ ಆಲಿಸುವುದರಿಂದ ಬದುಕು ಪಾವನಗೊಳಿಸಿಕೊಳ್ಳುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ರಟಕಲ್‌ ಹಿರೇಮಠದ ರೇವಣಸಿದ್ಧ ಶಿವಾಚಾರ್ಯರು ಆಶೀರ್ವಚನ
ನೀಡಿ, ಮನಸ್ಸಿನ ನೆಮ್ಮದಿಗಾಗಿ ಮಠ-ಮಂದಿರಗಳತ್ತ ಜನ ಬರಬೇಕು ಎಂದು ಕರೆ ಕೊಟ್ಟರು.
ಬಿಜೆಪಿ ಮುಖಂಡ ಭೀಮಾಶಂಕರ ಪೊಲೀಸ್‌ ಪಾಟೀಲ ಬಿದನೂರ ಅಧ್ಯಕ್ಷತೆ ವಹಿಸಿದ್ದರು. ಹಣಮಂತರಾಯ ಎ. ಶಿವರಾಯಗೋಳ, ಗಣ್ಯರಾದ ಸಿದ್ಧಣಗೌಡ ಪಾಟೀಲ, ನಸರಣಗೌಡ
ಪಾಟೀಲ, ಗ್ರಾ.ಪಂ ಅಧ್ಯಕ್ಷೆ ಪಾರ್ವತಿ ಮಡಿವಾಳ, ಮಿಣಜಗಿಯ ಗಣ್ಯರಾದ ಲಿಂಗಣಗೌಡ ಎ.
ಪಾಟೀಲ, ದೊಡ್ಡಪ್ಪಗೌಡ ಎಸ್‌. ಪೊಲೀಸ್‌ ಪಾಟೀಲ, ಈರಣ್ಣಗೌಡ ದಳಪತಿ, ವಿಜಯಕುಮಾರ ಬಿ. ಬಸವಪಟ್ಟಣ, ಬಸವರಾಜ ಸಾಲುಕ್ಯ, ಭೈಲಪ್ಪ ಪೂಜಾರಿ ಮುಂತಾದವರಿದ್ದರು.

ಮಹಾಂತೇಶ ಚೇಂಗಟಿ, ಮಲ್ಲಿಕಾರ್ಜುನ ಗಿರೆಪ್ಪಗೋಳ ನಿರೂಪಿಸಿದರು. ವಡಗೇರಾದ
ಪಂ ನಾಗಯ್ಯ ಶಾಸ್ತ್ರೀಗಳ ಸಿರಿಕಂಠದಲ್ಲಿ ಪುರಾಣ ಪ್ರಾರಂಭಿಸಲಾಯಿತು. ಗವಾಯಿಗಳಾದ
ರಾಮಲಿಂಗಯ್ಯ ಗೌಡಗಾಂವ ಸಂಗೀತಕ್ಕೆ ಸಿದ್ಧಣ್ಣ ದೇಸಾಯಿ ಕಲ್ಲೂರ ತಬಲಾ ಸಾಥ್‌ ನೀಡಿದರು.

Advertisement

ನಂದಿಯಾಗಿ ಶಂಕಣ್ಣ ಗಿರೆಪ್ಪಗೋಳ ಪುರಾಣಕ್ಕೆ ಸಾಕ್ಷಿಯಾದರು. ಚಿನ್ಮಯಗಿರಿಯ ಹಿರಿಯ
ಪೂಜ್ಯರಾದ ಸಿದ್ಧರಾಮ ಶಿವಾಚಾರ್ಯರು ಶ್ರೀ ಪಂಚಾಚಾರ್ಯರ ಬಾವುಟ ಆರೋಹಣ ಮಾಡುವ ಮೂಲಕ ಧರ್ಮ ಸಮಾರಂಭಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು ಎಂದು ಸ್ವಾಗತ ಸಮಿತಿ ಸದಸ್ಯ ಶರಣಗೌಡ ಕೆ. ಮಾಲಿ ಪಾಟೀಲ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next