Advertisement

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

06:50 PM Oct 04, 2024 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟ ಹಾಗೂ ಫಲಿತಾಂಶ ಹೆಚ್ಚಳದ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (ಕೆಕೆಆರ್ ಡಿಬಿ) ಮಂಡಳಿ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗಿದೆ.

Advertisement

ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿದ್ದು, ಮಂಡಳಿಯಲ್ಲಿ ತಜ್ಞರ ಪ್ರಥಮ ಸಭೆ ನಡೆದು ಸಮಗ್ರವಾಗಿ ಸಮಾಲೋಚಿಸಲಾಯಿತು ಎಂದು ಸಭೆ ನಂತರ ಮಂಡಳಿ ಅಧ್ಯಕ್ಷ ಡಾ.‌ಅಜಯಸಿಂಗ್ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ಸಭೆಯಲ್ಲಿ ಶಾಲಾ ಶೈಕ್ಷಣಿಕ ಮಟ್ಟ ಸುಧಾರಣೆ ಅದರಲ್ಲೂ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಮಾಡಬೇಕಾದ ಕ್ರಮಗಳ ಕುರಿತಾಗಿ ಅಭಿಪ್ರಾಯ ಸಂಗ್ರಹಿಸಲಾಯಿತು. ಮುಂದಿನ ದಿನಗಳಲ್ಲಿ ಸಮಿತಿಯ ಕಾರ್ಯಕಲಾಪಗಳು ಕುರಿತಾಗಿಯೂ ಸಮಾಲೋಚಿಸಲಾಯಿತು.‌ ಸಮಿತಿಯು ಎಲ್ಲ ಆಯಾಮಗಳಲ್ಲಿ ಕೆಳಮಟ್ಟದಿಂದ ಅಧ್ಯಯನ ಗೈದು ವಾಸ್ತವಾಂಶ ಸಂಗತಿಗಳನ್ನು ಅರಿದು ವರದಿ ರೂಪಿಸಲಿದೆ ಎಂದು ಡಾ. ಅಜಯಸಿಂಗ್ ವಿವರಣೆ ನೀಡಿದರು.

ಶಾಲೆಗಳಿಗೆ ಮೂಲ ಸೌಕರ್ಯ ಜತೆಗೆ ಶಿಕ್ಷಕರಲ್ಲೂ ಗುಣಮಟ್ಟತೆ ಹೆಚ್ಚಿಸುವುದು, ಶಿಕ್ಷಕರ ಅನುಪಾತ ತಾರತಮ್ಯ ತಪ್ಪಿಸುವಲ್ಲಿ ಸರ್ಕಾರದ ತುರ್ತು ಕ್ರಮ ಹಾಗೂ ಮಂಡಳಿಯಿಂದ ಕೈಗೊಳ್ಳಬೇಕಾದ ಕ್ರಮಗಳನ್ನು ತಜ್ಞರ ವರದಿ ಆಧರಿಸಿ ಕೈಗೊಳ್ಳಲಾಗುವುದು‌ ಎಂದು ತಿಳಿಸಿದರು.

ಶಿಕ್ಷಣ ತಜ್ಞರ ಸಮಿತಿ ಅಧ್ಯಕ್ಷರಾಗಿರುವ ಡಾ.‌ಗುರುರಾಜ ಕರಜಗಿ ಮಾತನಾಡಿ, ಒಂಭತ್ತನೇ- ಹತ್ತನೇ ತರಗತಿಗೆ‌ ಬಂದ ಮಕ್ಕಳಿಗೆ ಸರಿಯಾಗಿ ಇಂಗ್ಲಿಷ್ ವರ್ಣಮಾಲೆಯ 26 ಅಕ್ಷರಗಳು ಬರೆಯಲಿಕ್ಕೆ ಬಾರದಿರುವುದನ್ನು ಕಾಣುತ್ತೇವೆ.‌ ಶಿಕ್ಷರಿಗೆ ಕೇಳಿದರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಿಯಾಗಿ ಕಲಿಸಿಲ್ಲ ಎನ್ನುತ್ತಾರೆ. ‌ಅವರನ್ನು ಕೇಳಿದರೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ‌ ಸರಿಯಾಗಿ‌ ಕಲಿಸಿಲ್ಲ ಎನ್ನುತ್ತಾರೆ.‌ಇಲ್ಲಿ ಮಕ್ಕಳಗಿಂತ ಶಿಕ್ಷಕರ ಲೋಪವು ಪ್ರಮುಖವಾಗಿ ಕಂಡು ಬರುತ್ತದೆ. ಇದಕ್ಕೆ ಕಾರಣಗಳೇನು ಎಂಬುದನ್ನು ಸಮಿತಿ ಆಳವಾಗಿ ಅಧ್ಯಯನ ಮಾಡಿ ವರದಿ ರೂಪಿಸಲಿದೆ. ಶಿಕ್ಷಕರಿಗೂ ಕೆಲವು ನಿಯಮ‌ ಜಾರಿಗೆ ತರಬೇಕಿದೆ.‌ ಕಡ್ಡಾಯ ಹಾಜರಾತಿ, ಪರಿಣಾಮಕಾರಿ‌ ಬೋಧನೆ ನಿಟ್ಟಿನಲ್ಲಿ ವರದಿ ಸಹ ರೂಪಿಸಲಾಗುವುದು. ಶಿಕ್ಷಕರ ಕೊರತೆ ನೀಗಿಸಲು ಹಾಗೂ ಮೂಲಸೌಕರ್ಯ ‌ಕಲ್ಪಿಸುವುದು ಸೇರಿ ಇತರ ಅಂಶಗಳು ವರದಿಯಲ್ಲಿ ಅಡಕವಾಗಲಿವೆ ಎಂದು ಡಾ.‌ಕರಜಗಿ ವಿವರಣೆ ನೀಡಿದರು.

Advertisement

ಜನೇವರಿ‌ ಮಾಸಾಂತ್ಯ ಇಲ್ಲವೇ ಫೆಬ್ರವರಿ ತಿಂಗಳಲ್ಲಿ ಶಿಕ್ಷಣ ತಜ್ಞರ ವರದಿ ಸಲ್ಲಿಸಲಾಗುವುದು.‌ ಅದೇ ರೀತಿ ಈಗಲೇ ಯಾವ- ಯಾವ ನಿಯಮಗಳ ಜಾರಿ ಮಾಡಬೇಕೆಂಬುದನ್ನು ಕೆಲವು ಸಲಹೆಗಳನ್ನು ನೀಡಲಾಗುವುದು‌ ಎಂದರು.

ಈಶಾನ್ಯ ಶಿಕ್ಷಣ ಇಲಾಖೆಯ ಆಯುಕ್ತ ಆಕಾಶ ಮಾತನಾಡಿ, ಯಾದಗಿರಿ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಕುಸಿತವಾಗಿದ್ದಕ್ಕೆ ಶಿಕ್ಷಕನ್ನೇ ಹೊಣೆಗಾರರನ್ನಾಗಿ‌ ಮಾಡಿ ಇನ್ಕ್ರಿಮಿಂಟ್ ಕಡಿತ ಮಾಡಲಾಗಿತ್ತು.‌ ಕಳಪೆ ಫಲಿತಾಂಶ ಪುನರಾವರ್ತನೆಯಾದರೆ ಈ ವರ್ಷ ಕ್ರಮ ಕಟ್ಟಿಟ್ಟ ಬುತ್ತಿ.‌ಇದನ್ನು ಎಲ್ಲ‌ಕಡೆ ಜಾರಿ ತರಲು ಇಲಾಖೆ ಹಿಂದೇಟು ಹಾಕದು ಎಂದು ಎಚ್ಚರಿಕೆ ನೀಡಿದರು.‌

ಇದನ್ನೂ ಓದಿ: Belagavi DCC Bank ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಕತ್ತಿ‌ ದಿಢೀರ್ ರಾಜೀನಾಮೆ

Advertisement

Udayavani is now on Telegram. Click here to join our channel and stay updated with the latest news.

Next