Advertisement

Kalabauragi; ಶ್ರಮದಾನ: ಕಾರಿಡಾರ್ ಸುತ್ತಾಡಿ ಕಸಗುಡಿಸಿದ ಡಿ.ಸಿ ಬಿ.ಫೌಜಿಯಾ ತರನ್ನುಮ್

11:44 AM Oct 01, 2023 | Team Udayavani |

ಕಲಬುರಗಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಹಿನ್ನೆಲೆಯಲ್ಲಿ ರವಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರಮದಾನ ನಡೆಯಿತು. ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಕೈಯಲ್ಲಿ ಪೊರಕೆ ಹಿಡಿದು ಕಾರಿಡಾರ್ ಸುತ್ತಾಡಿ ಕಸಗುಡಿಸಿದರು.

Advertisement

ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ನಡೆದ‌ ಸ್ವಚ್ಚತಾ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಅನೇಕ‌ ಜಿಲ್ಲಾ ಮಟ್ಟದ ಅಧಿಕಾರಿಗಳು ಡಿ.ಸಿ.ಗೆ ಸಾತ್ ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ಶ್ರಮದಾನ ನಡೆಯಿತು.

ಕಚೇರಿ ಹೊರಾಂಗಣ, ಒಳಾಂಗಣ, ನೆಲ ಮಹಡಿ, ಮೊದಲನೇ ಮಹಡಿ, ತಮ್ಮ‌ ಕೊಠಡಿ ಸಭಾಂಗಣ ಹೀಗೆ ಎಲ್ಲಡೆ ಡಿ.ಸಿ.ಅವರು ಅಧಿಕಾರಿ, ಸಿಬ್ಬಂದಿ ಜೊತೆಗೂಡಿ  ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಆಯಾ ಇಲಾಖೆಯವರು ತಮ್ಮ‌ ಕಚೇರಿ ಆವರಣ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಇದೇ ಸಂದರ್ಭದಲ್ಲಿ ಅವರು ಕರೆ ನೀಡಿದರು. ಮೇಲಿನ ಮಹಡಿಯವರು ಕೆಳಗಡೆ ಕಸ ಬಿಸಾಕಿದಲ್ಲಿ ಅಂತವರಿಗೆ ದಂಡ ವಿಧಿಸಿ, ಸಾಧ್ಯವಾದರೆ ಸಿ.ಸಿ.ಟಿ.ವಿ ಅಳವಡಿಸಿ ಎಂದರು.

ಮಿನಿ ವಿಧಾನಸೌಧ ಆವರಣದಲ್ಲಿನ ಆಹಾರ ಇಲಾಖೆ, ವಾರ್ತಾ ಇಲಾಖೆ, ಖಜಾನೆ, ಡಿ.ಯು.ಡಿ.ಸಿ ವಯಸ್ಕರ ಶಿಕ್ಷಣ ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳು ತಮ್ಮ‌ ಕಚೇರಿ ಸ್ವಚ್ಚಗೊಳಿಸಿಕೊಂಡರು.

ನೆಲ ಹಾಸು ತೊಳೆದರು: ಮಿನಿ ವಿಧಾನಸೌಧ ಆವರಣದಲ್ಲಿರುವ ಆಹಾರ ಇಲಾಖೆಯ ಅಧಿಕಾರಿ-ಸಿಬ್ಬಂದಿ ವರ್ಗದವರು ಸಹ ತಮ್ಮ ಕಚೇರಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಕಚೇರಿಯ ಮ್ಯಾನೇಜರ್ ಅಲ್ಲಾಭಕ್ಷ, ಗೋಪಾಲ ಅವರು ನೀರು ಹಾಕಿ‌ ನೆಲ ಹಾಸು ತೊಳೆದರು. ಗುಟಕಾ, ಪಾನ್ ತಿಂದು ಉಗುಳಿದ ಕಲೆಗಳನ್ನು ನೀರು ಹಾಕಿ ಸ್ವಚ್ಛಗೊಳಿಸಲಾಯಿತು.

Advertisement

ವಿಶೇಷ‌ ಭೂಸ್ವಾಧೀನಾಧಿಕಾರಿ ಡಿ.ಎಂ‌.ಪಾಣಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ಹಕ್ಕುಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ವಿ. ಗುಣಕಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹೆಚ್.ಎಂ.ಹರನಾಳ, ಡಿ.ಸಿ. ಕಚೇರಿಯ ಸಾಮಾಜಿಕ‌ ಭದ್ರತಾ ವಿಭಾಗದ ಸಹಾಯಕ ನಿರ್ದೇಶಕ ಶಿವಶರಣಪ್ಪ ಧನ್ನಿ, ಚುನಾವಣಾ ತಹಶೀಲ್ದಾರ ಪಂಪಯ್ಯ, ಡಿ.ಯು.ಡಿ.ಸಿ ಎ.ಇ.ಇ. ಸೋಮು ರಾಠೋಡ, ಸೇರಿದಂತೆ ಜಿಲ್ಲಾಡಳಿತ‌ ಭವನದಲ್ಲಿರುವ ವಿವಿಧ ಇಲಾಖೆಯ ಸಿಬ್ಬಂದಿಗಳು, ಡಿ.ಸಿ.ಕಚೇರಿ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದ್ದರು.

ಕಲಬುರಗಿ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ಬಸವರಾಜ ಕಲಾಲ್, ಅರುಣ ಕುಮಾರ, ರಾಜಕುಮಾರ, ಮೇಲ್ವಿಚಾರಕ ಪ್ರಶಾಂತ ಮತ್ತು ಪಾಲಿಕೆ ಪೌರಕಾರ್ಮಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next