Advertisement

ಎಚ್‌ಡಿಕೆ ತೋಟದ ಮನೆಯಲ್ಲಿ ಕಲಬುರಗಿ ರಾಜಕೀಯ

04:59 PM Sep 09, 2021 | Team Udayavani |

ರಾಮನಗರ: ಕಲಬುರಗಿ ಮಹಾನಗರ ಪಾಲಿಕೆಗೆ ಚುನಾಯಿತರಾಗಿರುವ ಜೆಡಿಎಸ್‌ನ ನಾಲ್ವರು ಸದಸ್ಯರು ತಾಲೂಕಿನ ಬಿಡದಿ ಬಳಿ ಕೇತನ ಗಾನಹಳ್ಳಿಯ ತೋಟದ ಮನೆಯಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರನ್ನು ಭೇಟಿಯಾಗಿದ್ದರು. ಕಲಬುರಗಿ ಮಹಾನಗರ ಪಾಲಿಕೆ ಯಲ್ಲಿ ಅಧಿಕಾರ ಹಿಡಿಯಲು ಜೆಡಿಎಸ್‌ ನಿರ್ಣಾಯಕ ಪಾತ್ರವಹಿಸಿರುವುದರಿಂದ ಎಚ್‌ಡಿಕೆ ಭೇಟಿ ಮಹತ್ವ ಪಡೆದುಕೊಂಡಿದೆ.

Advertisement

ಕುಮಾರಸ್ವಾಮಿ ಬುಲಾವ್‌: ಜೆಡಿಎಸ್‌ ಧುರೀಣ ಎಚ್‌.ಡಿ.ಕುಮಾರಸ್ವಾಮಿ ಕರೆಯ ಮೇರೆಗೆ ಕಲಬುರಗಿಯಿಂದ ಅಲ್ಲಿನ ಮಹಾನಗರ ಪಾಲಿಕೆಯ ಸದ ಸ್ಯರಾದ ವಿಜಯಲಕ್ಷ್ಮಿ ರೆಡ್ಡಿ, ಸಾಜೀದ್‌ ಕಲ್ಯಾಣಿ, ವಿಶಾಲ ನವರಂಗ ಹಾಗೂ ಅಲಿಮುದ್ದೀನ್‌ ಕೇತಗಾನ ಹಳ್ಳಿಯ ತೋಟದ ಮನೆಗೆ ಆಗಮಿಸಿದ್ದಾರೆ. ಪಾಲಿಕೆಯಲ್ಲಿ ಕಾಂಗ್ರೆಸ್‌ ಅಥವಾ ಬಿಜೆಪಿ ಅಧಿಕಾರ ಹಿಡಿಯಲು ಜೆಡಿಎಸ್‌ ಸದಸ್ಯರು ನಿರ್ಣಾಯಕರಾಗಿದ್ದು ಈ ವಿಚಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿಯ ವರೊಂದಿಗೆ ಚರ್ಚೆ ನಡೆಸಿದರು.

ಆಪರೇಷನ್‌ ಭೀತಿ?: ಕಲಬುರಗಿಯ ಜೆಡಿಎಸ್‌ ಸದಸ್ಯರು ಆಪರೇಷನ್‌ ಹಸ್ತ ಅಥವಾ ಆಪರೇಷನ್‌ ಕಮಲಕ್ಕೆ ಒಳಗಾಗಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಸದಸ್ಯರನ್ನು ತಮ್ಮ ತೋಟದ ಮನೆಗೆ ಬರಮಾಡಿಕೊಂಡಿದ್ದಾರೆಎಂದು ಹೇಳಲಾಗುತ್ತಿದೆ. ಪಾಲಿಕೆಯಲ್ಲಿನ ರಾಜಕೀಯ ವಿಚಾರಗಳ ಬಗ್ಗೆ ಚರ್ಚಿಸಲು ಕುಮಾರಸ್ವಾಮಿ ಸದಸ್ಯರನ್ನು ಬರಮಾಡಿಕೊಂಡಿದ್ದಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ಮೇಯರ್‌ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡಿದರೆ ಪಕ್ಷಕ್ಕೆ ಅನುಕೂಲ, ಯಾವ ಪಕ್ಷಕ್ಕೆ ಅಧಿಕಾರ ಸಿಕ್ಕರೆ ಅಲ್ಲಿನ ರಾಜಕೀಯದ ಮೇಲಾಗುವಪರಿಣಾಮ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆಗಳು ನಡೆದಿವೆ ಎಂದು ಗೊತ್ತಾಗಿದೆ.

ಕಲಬುರಗಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿರುವ ಕುಮಾರಸ್ವಾಮಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌. ಡಿ.ದೇವೇಗೌಡರ ಗಮನಕ್ಕೆ ತಂದು ಚರ್ಚೆಗಳನ್ನು ನಡೆಸುವರು. ಬಳಿಕ ಪಾಲಿಕೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬುದನ್ನು ಪ್ರಕಟಿಸುವುದಾಗಿ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

Advertisement

ಇದನ್ನೂ ಓದಿ:ವಿರೋಧ ಪಕ್ಷಗಳು ಒಂದಾದರೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬಹುದು: ಖರ್ಗೆ

ವರಿಷ್ಠರ ನಿರ್ಧಾರಕ್ಕೆ ಸದಸ್ಯರು ಬದ್ಧ: ತಮ್ಮ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡರು ಮತ್ತು ಎಚ್‌. ಡಿ.ಕುಮಾರಸ್ವಾಮಿ ಅವರು ತೆಗೆದು ಕೊಳ್ಳುವ ನಿರ್ಧಾರಕ್ಕೆ ತಾವೆಲ್ಲ ಬದ್ದರಾಗಿರುವುದಾಗಿ ಕಲಬುರಗಿ ಮಹಾ ನಗರ ಪಾಲಿಕೆಯ ಜೆಡಿಎಸ್‌ ಸದಸ್ಯರು ತಿಳಿಸಿದ್ದಾರೆ.ತಾಲೂಕಿನ ಬಿಡದಿ ಬಳಿಯ ಕೇತಗಾನಹಳ್ಳಿಯ ತೋಟದ ಮನೆಗೆ ಭೇಟಿ ನೀಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪಾಲಿಕೆಯಲ್ಲಿ ರಾಜಕೀಯ ಪರಿಸ್ಥಿತಿಯ ಬಗ್ಗೆ ಕುಮಾರಸ್ವಾಮಿಯವರೊಂದಿಗೆ ಚರ್ಚಿಸುವುದಾಗಿ, ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ತಮ್ಮ ನಿಲುವು ಅವಲಂಭಿಸಿದೆ ಎಂದರು.

ಪಾಲಿಕೆಯಲ್ಲಿ ಬಲಾಬಲ
ಕಲಬುರಗಿ ಮಹಾನಗರ ಪಾಲಿಕೆಯಲ್ಲಿ55 ಸದಸ್ಯ ಸ್ಥಾನಗಳ ಪೈಕಿ27 ಸ್ಥಾನಗಳಲ್ಲಿಕಾಂಗ್ರೆಸ್‌ ಸದಸ್ಯರು ಆಯ್ಕೆಯಾಗಿದ್ದು, ಅತಿದೊಡ್ಡಪಕ್ಷ ವಾಗಿ ಹೊರಹೊಮ್ಮಿದೆ. ಬಿಜೆಪಿ ಸದಸ್ಯರು23 ಸ್ಥಾನಗಳಲ್ಲಿ ವಿಜೇತರಾಗಿದ್ದಾರೆ. ಜೆಡಿಎಸ್‌4 ವಾರ್ಡ್‌ಗಳಲ್ಲಿ ಹಾಗೂ ಪಕ್ಷೇತರ ಅಭ್ಯರ್ಥಿ 1ವಾರ್ಡ್‌ನಲ್ಲಿ ವಿಜೇತರಾಗಿದ್ದಾರೆ. ಪಾಲಿಕೆಯಲ್ಲಿ ಅಧಿಕಾರಕ್ಕೆರಲು28 ಮ್ಯಾಜಿಕ್‌ ಸಂಖ್ಯೆಯಾಗಿದೆ. ಆ ಭಾಗದ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು ಸೇರಿದಂತೆ ಎಲ್ಲರಿಗೂ ಮೇಯರ್‌ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಇರುವುದ ರಿಂದ ಅದನ್ನು ಪರಿಗಣಿಸಬೇಕಾಗಿದೆ.

ಜೆಡಿಎಸ್‌ಕಿಂಗ್‌ ಮೇಕರ್‌!
ಇವರೆಲ್ಲರು ಸೇರಿ ಬಿಜೆಪಿ ಸಂಖ್ಯಾಬಲ 29ಕ್ಕೆ ಏರಿಕೆಯಾದರೆ,ಕಾಂಗ್ರೆಸ್‌ ಬಲ 31 ಆಗಲಿದೆ. ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿರುವ ಸದಸ್ಯ ರು ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಗೆದ್ದಿದ್ದಾರೆ. ಅವರು ತಮ್ಮ ನಿಲುವನ್ನು ಇನ್ನು ಸ್ಪಷ್ಟ ಪಡಿಸಿಲ್ಲ. ಹೀಗಾಗಿ ಜೆಡಿಎಸ್‌ ಟಿಕೆಟ್‌ ನಿಂದ ವಿಜೇತರಾಗಿರುವ ನಾಲ್ವರು ಸದಸ್ಯರು ಅಧಿಕಾರಕ್ಕೆರುವ ಪಕ್ಷದಕಿಂಗ್‌ ಮೇಕರ್‌ ಆಗಿದೆ. ಕಲಬುರಗಿ ಮಹಾನಗರ ಪಾಲಿಕೆ ಇದೀಗ
ರಾಜಕೀಯ ಹಾಟ್‌ಸ್ಪಾಟ್‌ ಆಗಿದ್ದು, ಕೇತನಗಾನ ಹಳ್ಳಿಯ ತೋಟದ ಮನೆಯಲ್ಲಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪಾಲಿಕೆಯ ರಾಜಕೀಯ ನಿಂತಿದೆ.

ಕಲಬುರಗಿ ಮಹಾನಗರ ಪಾಲಿಕೆ ಮೇಯರ್‌ ಸ್ಥಾನವನ್ನು ಜೆಡಿಎಸ್‌ಗೆ ಸಿಗಬೇಕೆಂಬ ಅಭಿಪ್ರಾಯವನ್ನು ಪಕ್ಷದ ನಾಲ್ವರು ಸದಸ್ಯರು ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ಗೆ ಯಾವಪಕ್ಷ ಬೆಂಬಲ ನೀಡುತ್ತದೆಯೋಕಾದು ನೋಡಬೇಕಾಗಿದೆ. ಈ ವಿಚಾರವನ್ನು ವರಿಷ್ಠರ ಗಮನಕ್ಕೆ ತರುತ್ತೇವೆ.
– ಉಸ್ತಾದ್‌ ನಾಸೀರ್‌ ಹುಸೇನ್‌, ಜೆಡಿಎಸ್‌ ಮುಖಂಡರು, ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next