Advertisement

Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ

09:32 PM May 07, 2024 | Team Udayavani |

ಕಲಬುರಗಿ: ಬೀದರ್ ಲೋಕಸಭಾ ವ್ಯಾಪ್ತಿಯ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಮತದಾರನೊಬ್ಬ ಕೊರಳಲ್ಲಿ ರಾಮನ ಶಾಲು ಧರಿಸಿ ಮತಗಟ್ಟೆಗೆ ಬಂದು ಬಿಜೆಪಿ ಅಭ್ಯರ್ಥಿಗೆ ಮತದಾನ ಮಾಡಿರುವುದಲ್ಲದೇ, ಕಮಲದ ಚಿಹ್ನೆಗೆ ಮೂರು ಬಾರಿ ನಮಸ್ಕಾರ ಮಾಡಿ, ಅದನ್ನೆಲ್ಲಾ ವಿಡಿಯೋ ರೇಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ.

Advertisement

ಮತಗಟ್ಟೆಯೊಳಗೆ ಮೊಬೈಲ್ ಪ್ರವೇಶ ನಿಷೇಧಿಸಲಾಗಿದ್ದರೂ, ಈ ಮತದಾರ ಸಿಬ್ಬಂದಿ ಕಣ್ಣು ತಪ್ಪಿಸಿ, ಒಳಗಡೆ ಮೊಬೈಲ್ ತೆಗೆದುಕೊಂಡು ಹೋಗಿ ತಾನು ಮತ ಹಾಕುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಶೇರ್ ಮಾಡಿದ್ದಾನೆ.

ಸಿಬ್ಬಂದಿ ಪರಿಶೀಲಿಸಿ ಮತಗಟ್ಟೆ ಹೊರಗಡೆ ಮೊಬೈಲ್ ಇರಿಸಿ ಒಳಗೆ ಬಿಡುತ್ತಾರೆ. ಆದರೆ, ಈ ಮತಗಟ್ಟೆಯಲ್ಲಿ ಯುವಕ ಮೊಬೈಲ್ ಒಳಗಡೆ ತೆಗೆದುಕೊಂಡು ಹೋಗಿದ್ದಾನೆ. ಇಡೀ ಘಟನೆ ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next