Advertisement

ಶಿವರಾಜ ರದ್ದೇವಾಡಗಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷ

11:49 AM Jan 13, 2020 | Naveen |

ಕಲಬುರಗಿ: ಒಂಭತ್ತು ವರ್ಷಗಳ ಹಿಂದೆ ಜಿಲ್ಲಾ ಯುವ ಕಾಂಗ್ರೆಸ್‌ ಸ್ಥಾನದಿಂದ ವಂಚಿತರಾದ ನಂತರ ಮುನಿಸಿಕೊಂಡು ಬಿಜೆಪಿ ಸೇರಿದ್ದ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಅಪ್ಪಾಸಾಬ ಪಾಟೀಲ ರದ್ದೇವಾಡಗಿ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Advertisement

ರವಿವಾರ ಬೆಳಗ್ಗೆ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮುಖಂಡರ ಅಭಿಪ್ರಾಯ ಆಲಿಸಿದ ಬಳಿಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ಉತ್ತರಾಧಿಕಾರಿಯಾಗಿ ಶಿವರಾಜ ರದ್ದೇವಾಡಗಿ ಅವರನ್ನು ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷರನ್ನಾಗಿ ವೀಕ್ಷಕರಾಗಿ ಆಗಮಿಸಿದ್ದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಘೋಷಣೆ ಮಾಡಿದರು.

ಕಲಬುರಗಿ ಗ್ರಾಮಾಂತರ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಜಿ.ಪಂ ಸದಸ್ಯರಾಗಿರುವ ಯುವ ನಾಯಕ ಶಿವರಾಜ ಪಾಟೀಲ ರದ್ದೇವಾಡಗಿ ಮತ್ತು ಯಾದಗಿರಿ ಜಿಲ್ಲಾಧ್ಯಕ್ಷರಾಗಿ ಡಾ| ಶರಣ ಭೂಪಾಲರಡ್ಡಿ ಆಯ್ಕೆಯಾಗಿದ್ದಾರೆ. ಈ ಆಯ್ಕೆಯನ್ನು ವಿಭಾಗೀಯ ಪ್ರಭಾರಿ ರಾಜಕುಮಾರ ಪಾಟೀಲ ತೇಲ್ಕೂರ ಹಾಗೂ ಜಿಲ್ಲೆಯ ಶಾಸಕರು, ಮುಖಂಡರ ಸಮ್ಮುಖದಲ್ಲಿ
ಪ್ರಕಟಿಸುತ್ತಿದ್ದಂತೆ ಎಲ್ಲರೂ ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಇದರಿಂದಾಗಿ ಮತ್ತೂಂದು ಸಲ ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನ ಜೇವರ್ಗಿ ತಾಲೂಕಿಗೆ ಮುಂದುವರಿದಂತಾಗಿದೆ. ಅಧ್ಯಕ್ಷ ಸ್ಥಾನವನ್ನು 50 ವರ್ಷದೊಳಗಿನವರಿಗೆ ನೀಡಬೇಕು ಎಂಬ ವರಿಷ್ಠರ ನಿರ್ಧಾರದಂತೆ
ಶಿವರಾಜರನ್ನು ಆಯ್ಕೆ ಮಾಡಲಾಯಿತು.

ದೊಡ್ಡಪ್ಪಗೌಡ ಪಾಟೀಲ, ಬಿಜೆಪಿ ನಗರ ಜಿಲ್ಲಾಧ್ಯಕ್ಷರಾಗಿರುವ ಶಾಸಕ ಬಿ.ಜಿ.ಪಾಟೀಲ,
ಸಂಸದ ಡಾ| ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ, ರಾಜಕುಮಾರ ಪಾಟೀಲ ತೇಲ್ಕೂರ, ಸುಭಾಷ ಗುತ್ತೇದಾರ, ಡಾ| ಅವಿನಾಶ ಜಾಧವ, ವೆಂಕಟರೆಡ್ಡಿ ಮುದ್ನಾಳ, ಮುಖಂಡರಾದ ರವಿ ಬಿರಾದಾರ, ವಿದ್ಯಾಸಾಗರ ಕುಲಕರ್ಣಿ, ಬಿಜೆಪಿ ಯುವ ನಾಯಕ ಚಂದ್ರಕಾಂತ ಪಾಟೀಲ ಮತ್ತಿತರರು ಹಾಜರಿದ್ದರು.

ದೊಡ್ಡಪ್ಪಗೌಡ ಪಾಟೀಲರು ಪಕ್ಷದ ಧ್ವಜವನ್ನು ಶಿವರಾಜ ಪಾಟೀಲರಿಗೆ ಹಸ್ತಾಂತರಿಸುವ ಮೂಲಕ ಅಧಿಕಾರ ವಹಿಸಿ, ಶುಭ ಕೋರಿದರು. ಪಕ್ಷದ ಎಲ್ಲ ಚಟುವಟಿಕೆಗಳಿಗೆ ಪೂರಕವಾಗಿರುವ ಸಲಹೆ ಮತ್ತು ಮಾರ್ಗದರ್ಶನ ನೀಡುವಂತೆ ದೊಡ್ಡಪ್ಪಗೌಡರನ್ನು ಶಿವರಾಜ ಕೋರಿದರು. ನೂತನ ಅಧ್ಯಕ್ಷರಾಗಿ ಶಿವರಾಜ ಪಾಟೀಲ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು, ಹಿತೈಷಿಗಳು, ಪಕ್ಷದ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಆಗಮಿಸಿ, ಆವರಣದಲ್ಲಿ ಪಟಾಕಿ ಸಿಡಿ ಸಂಭ್ರಮಿಸಿದರು. ಜೇವರ್ಗಿ ತಾಲೂಕಿನ ಮಲ್ಲಿನಾಥ ಪಾಟೀಲ ಯಲಗೋಡ, ರೇವಣಸಿದ್ದ ಸಂಕಾಲಿ, ಬಸನಗೌಡ ಪಾಟೀಲ, ಬಾಪುಗೌಡ ಪಾಟೀಲ ಮತ್ತಿತರರು ಇದ್ದರು.

Advertisement

ಮುಖಂಡರಾದ ಹರ್ಷಾನಂದ ಗುತ್ತೇದಾರ, ರವಿ ಬಿರಾದಾರ, ಮಹಿಳಾ
ಅಭಿವೃದ್ಧಿ ನಿಗಮ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಎಪಿಎಂಸಿ ಅಧ್ಯಕ್ಷ ಅಪ್ಪು ಕಣಕಿ, ಉಪಾಧ್ಯಕ್ಷ
ರಾಜಕುಮಾರ ಕೋಟೆ, ಪ್ರಮುಖರಾದ ದಯಾಘನ್‌ ಧಾರವಾಡಕರ್‌, ಉಮೇಶ ಪಾಟೀಲ, ವಿಜಯಕುಮಾರ ಹಳಕಟ್ಟಿ, ಶರಣಬಸಪ್ಪ ಅಂಬೆಸಿಂಗೆ, ಸಂಗಣ್ಣ ಇಜೇರಿ, ರೇಣುಕಾಚಾರ್ಯ, ನಾಮದೇವ ರಾಠೊಡ, ರಾಜುಗೌಡ ನಾಗನಹಳ್ಳಿ, ವಿಠ್ಠಲ ಜಾಧವ ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next