Advertisement

ಆಧುನಿಕ ಜೀವನಶೈಲಿಯಿಂದ ರೋಗ ಉಲಣ: ಮಂಜುನಾಥ

12:07 PM Jan 19, 2020 | Team Udayavani |

ಕಲಬುರಗಿ: ಮನುಷ್ಯನ ಬದಲಾದ ಜೀವನ ಶೈಲಿ ಹಾಗೂ ಆಹಾರದಿಂದ ಹೊಸ ರೋಗಗಳು ಉಲ್ಬಣಗೊಂಡು ಆರೋಗ್ಯದ ಜೊತೆಗೆ ಸಮಾಜದ ಸ್ವಾಸ್ಥ್ಯವೂ ಹದಗೆಡುತ್ತಿರುವುದುನ್ನು ತಡೆಗಟ್ಟುವುದು ಅಗತ್ಯವಾಗಿದೆ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ| ಸಿ.ಎನ್‌. ಮಂಜುನಾಥ ಸಲಹೆ ನೀಡಿದರು.

Advertisement

ಸಮೀಪದ ಶ್ರೀನಿವಾಸ ಸರಡಗಿಯ ಶ್ರೀಗುರು ಚಿಕ್ಕವೀರೇಶ್ವರ ಸಂಸ್ಥಾನ ಹಿರೇಮಠದ ಲಿಂ| ಪೂಜ್ಯ ಚಿಕ್ಕವೀರೇಶ್ವರ ಮಹಾ ಸ್ವಾಮಿಗಳ 73ನೇ ಪುಣ್ಯಾರಾಧನೆ ಅಂಗವಾಗಿ ಸಾಧಕರಿಗೆ ನೀಡುವ ಪ್ರತಿಷ್ಠಿತ ಚಿನ್ನದ ಕಂತಿ ಪ್ರಶಸ್ತಿ ಸ್ವೀಕರಿಸಿ, ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.

ಮನುಷ್ಯನ ಜೀವನಕ್ಕೆ ಸೌಕರ್ಯಗಳೆಂದು ಕರೆಯುವ ಆಧುನಿಕ ಬದುಕಿನ ಫ್ರಿಜ್‌, ಟಿವಿ, ಮೊಬೈಲ್‌ ಸೇರಿದಂತೆ ವಸ್ತುಗಳಿಂದ ಮನಃಶಾಂತಿ ಹಾಳಾಗುವುದರ ಜೊತೆಗೆ, ಹೃದಯಾಘಾತ, ಸಕ್ಕರೆ ಕಾಯಿಲೆ, ಅಧಿ ಕ ರಕ್ತದೊತ್ತಡ ಸರ್ವೇ ಸಾಮಾನ್ಯವಾಗುತ್ತಿದೆ. 20ರಿಂದ 25 ವಯಸ್ಸಿನ ಯುವಕರು ಹೃದಯಾಘಾತಕ್ಕೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.

ಕಲ್ಯಾಣ ಕರ್ನಾಕ ಭಾಗದಲ್ಲಿ ಗುಣಮಟ್ಟದ, ಸೂಕ್ತ ಸಮಯದಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಚಿಕಿತ್ಸೆ ನೀಡಲು ಬರುವ ಮಾರ್ಚ್ನಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ 300 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ಶ್ರೀನಿವಾಸ ಸರಡಗಿ ಡಾ| ರೇವಣಸಿದ್ದ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಸವರಾಜ ಮತ್ತಿಮಡು ಉದ್ಘಾಟನೆ ನೆರವೇರಿಸಿ, ಮಠದ ಸೇವೆ ನಿಜಕ್ಕೂ ಅನ್ಯೋನ್ಯವಾಗಿದೆ ಎಂದರು. ಮುಖಂಡ ಸುಭಾಷ ರಾಠೊಡ ಮಾತನಾಡಿದರು. ಮುತ್ಯಾನ ಬಬಲಾದ ವಿರಕ್ತ ಮಠದ ಗುರುಪಾದಲಿಂಗ ಮಹಾಶಿವಯೋಗಿಗಳು, ಮಮದಾಪುರ ಮಠದ, ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು, ಆಲಮೇಲ್‌ದ ಚಂದ್ರಶೇಖರ ಶಿವಾಚಾರ್ಯರು, ಮುಳವಾಡದ, ಸಿದ್ಧಲಿಂಗ ಶಿವಾಚಾರ್ಯರು ಹಾಜರಿದ್ದರು.

Advertisement

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಉದ್ದಿಮೆದಾರ ಬಸವರಾಜ ಭೀಮಳ್ಳಿ, ವೈದ್ಯರಾದ ಡಾ| ಶರಣಬಸಪ್ಪ ಹರವಾಳ, ಡಾ| ವೀರೇಶ ಪಾಟೀಲ ಹೆಬ್ಟಾಳ, ಸ್ವಾಗತ ಸಮಿತಿ ಅಧ್ಯಕ್ಷ ಶಿವಾನಂದ ಸಾಹುಕಾರ ಉಪ್ಪಿನ, ಪಾಲಿಕೆ ಮಾಜಿ
ಸದಸ್ಯ ಶಿವು ಸ್ವಾಮಿ ಇದ್ದರು. ಶ್ರವಣಕುಮಾರ ಮಠ ಪ್ರಾರ್ಥಿಸಿದರು, ಹಣಮಂತರಾಯ ಅಟ್ಟೂರ ಸ್ವಾಗತಿಸಿದರು. ನಾಗಲಿಂಗಯ್ಯ ಮಠಪತಿ ನಿರೂಪಿಸಿದರು, ರವಿ ಶಹಾಪುರಕರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next