Advertisement
ಈ ವ್ಯಕ್ತಿ ಫೇಮಸ್ಸಾಗಿದ್ದೇ ಪಿಎಸ್‌ಐ ಪರೀಕ್ಷೆಯಲ್ಲಿ ಸಿಕ್ಕಾಪಟ್ಟೆ ನೇಮಕಾತಿಗಳಾಗುವಲ್ಲಿ ಅಕ್ರಮ ನಡೆಸಿದ್ದರಿಂದ ಎಂದು ಬೇರೆ ಹೇಳಬೇಕಿಲ್ಲ. ಆದರೆ, ಏ.27ರಂದು ಸಿಐಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುತ್ತಿದ್ದಂತೆ ಇಡೀ ಕಲಬುರಗಿ ಮತ್ತು ಬೆಂಗಳೂರು ನಡುಗಿತ್ತು. ಅಭ್ಯರ್ಥಿಗಳು, ಅವರ ಪಾಲಕರು ತಮ್ಮ ಹಣ ಹೋಯಿತು ಎಂದು ನಡುಗಿದರೆ, ಕೆಲವು ಅಧಿಕಾರಿಗಳು, ರಾಜಕಾರಣಿಗಳು ನಮ್ಮ ಹೆಸರೆಲ್ಲಿ ಹೊರ ಬರುತ್ತದೆಯೋ ಎಂದು ನಡುಗಿದ್ದರು. ಇದರಲ್ಲಿ ಪತ್ರಕರ್ತರೂ ಇರುವುದು ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ.
Related Articles
Advertisement
ಸರ್ಕಾರಿ ನೌಕರಿ ಕೊಡಿಸೋ “ದೇವರು‘
ಅಫಜಲಪುರದ ಹಲವು ಗ್ರಾಮಗಳಲ್ಲಂತೂ ಸರ್ಕಾರಿ ನೌಕರಿ ಕೊಡಿಸೋ ದೇವರೇ ಆಗಿದ್ದ ರುದ್ರಗೌಡ. ಆತ ನಡೆದು ಹೋಗುತ್ತಿದ್ದರೆ ವಯಸ್ಸಾದ ಹೆಣ್ಣುಮಕ್ಕಳು, ಗಂಡಸರು ಕೈ ಮುಗಿದು “ಗೌಡಾ’ ಎನ್ನುತ್ತಲೆ ಕಾಲು ಬೀಳಲು ಬರುತ್ತಿದ್ದರು. ಆದರೆ, ಇವತ್ತು ಏನೆಲ್ಲಾ ಆಗಿ ಹೋಗಿದೆ. ಗೌಡ ಜೈಲು ಸೇರಿದ್ದಾನೆ. ಅಧಿಕಾರಿಗಳು ಅವನನ್ನು ಬಿಡುತ್ತಿಲ್ಲ. ಇದೆಲ್ಲವೂ ಭಗವಂತನೇ ತಂದ ಆಪತ್ತು. ನೌಕರಿ ಕೊಡಿಸಿದ್ದ ಪಾಲಕರ ಪ್ರಾರ್ಥನೆಯಾದರೂ ಅವನಿಗೆ ತಟ್ಟಿ ಬಿಡುಗಡೆ ಆಗಬಾರದೇ ಎನ್ನುತ್ತಾರೆ ಜನರು. ಈ ಮಧ್ಯೆ ಸಿಐಡಿ ಅಧಿಕಾರಿಗಳ ಹೆದರಿಕೆಗೆ ಆತನ ಬೆಂಬಲಿಗರೂ ಊರು ಬಿಟ್ಟಿದ್ದಾರೆ.
ಇದು ರಾಜಕೀಯ ತಂತ್ರ!
ಪಿಎಸ್‌ಐ ಅಕ್ರಮದಲ್ಲಿ ಉದ್ದೇಶ ಪೂರ್ವಕವಾಗಿ ಅಫಜಲಪುರದ ರಾಜಕಾರಣದ ಹುರಿಯಾಳುಗಳನ್ನು ತಂತ್ರ ಮಾಡಿ ಸಿಕ್ಕಿಸಿ ಹಾಕಿಸಿದ್ದಾರೆ ಎನ್ನುತ್ತಾರೆ ಆರ್‌ಡಿಪಿ ಬೆಂಬಲಿಗರು. ಬಿಜೆಪಿ ಬಂಡವಾಳ ಹೊರಬರುತ್ತದೆ ಎಂದು ಕೆಲವರು ಗೌಡನ ಹೆಸರು ಮುನ್ನೆಲೆಗೆ ತಂದು ತಾವು ಬಚಾವ್ ಆಗಲು ನೋಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ತಪ್ಪು ಮಾಡಿದವ ಉಪ್ಪು ತಿನ್ನುತ್ತಿದ್ದಾನೆ. ಇದರಲ್ಲಿ ತಂತ್ರವೇನಿದೆ? ಎನ್ನುವ ಮಾತುಗಳು ಕೇಳಿ ಬರುತ್ತಿವೆ. ವಾಸ್ತವದಲ್ಲಿ ಈಗಲೂ ಜನ ರುದ್ರಗೌಡ ಖುಲಾಸೆಯಾಗಿ ಹೊರ ಬರ್ತಾನೆ. ನಮ್ಮ ರೊಕ್ಕ ಕೊಡ್ತಾನೆ. ಅಫಜಲಪುರದ ರಾಜಕಾರಣದಲ್ಲಿ ಭರ್ಜರಿ ಎಂಟ್ರಿ ನೀಡಿ ಎದುರಾಳಿಗಳನ್ನು ಬಗ್ಗು ಬಡಿತಾನೆ ಎನ್ನುವ ಉಮೇದು ಮಾತ್ರ ಸತ್ತಿಲ್ಲ.
–ಸೂರ್ಯಕಾಂತ ಎಂ.ಜಮಾದಾರ