ಕಲಬುರಗಿ: ಸಮಾಜದ ಸಲುವಾಗಿ ಎಷ್ಟೇ ಸಂಘಟನೆ ಮಾಡಿದರೂ ಕಡಿಮೆಯೇ ಎಂದು ಶರಣಬಸವೇಶ್ವರ ಮಹಾದಾಸೋಹಿ ಸಂಸ್ಥಾನದ ಪೀಠಾಧಿಪತಿ ಡಾ| ಶರಣಬಸವಪ್ಪ ಅಪ್ಪ ಹೇಳಿದರು.
ತಮ್ಮ 85ನೇ ಜನ್ಮ ದಿನ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಚೇರ್ಮನ್ ಪೂಜ್ಯ ಮಾತೋಶ್ರೀ ದಾಕ್ಷಾಯಣಿ ಎಸ್. ಅಪ್ಪ 50ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಅಂಗವಾಗಿ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಮೋದಿ ಹಾಗೂ ಇತರ ಪದಾಧಿಕಾರಿಗಳು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜ ಸಂಘಟನೆಗೆ ಹತ್ತಾರು ಸಂಘಗಳಿವೆ. ಸಂಘಟನೆ ಸಲುವಾಗಿ ಸಂಘಗಳು ಹುಟ್ಟಲಿ. ಆದರೆ ಅಖೀಲ ಭಾರತ ವೀರಶೈವ ಮಹಾಸಭಾ ಸಮಾಜ ಸೇವಾ ಕಾರ್ಯ ಮತ್ತಷ್ಟು ವಿಸ್ತರಿಸಲಿ. ತಾವೂ 15 ವರ್ಷಗಳ ಕಾಲ ಸಂಘಟನೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೇವೆ ಎಂದರು.
ಮಹಾಸಭಾ ಅಧ್ಯಕ್ಷರು ಹಾಗೂ ಮಾಜಿ ಮಹಾಪೌರ ಶರಣು ಮೋದಿ ಮಾತನಾಡಿ, ಸಮಾಜದ ಎಲ್ಲ ಪೂಜ್ಯರ, ಹಿರಿಯರ ಹಾಗೂ ಹಿತೈಷಿಗಳ ಸಲಹೆ, ಬೆಂಬಲದಿಂದ ಸಮಾಜದ ಸಂಘಟನೆ ಬಲಪಡಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಮಹಾಸಭಾ ಪದಾಧಿಕಾರಿಗಳಾದ ಶಿವಶರಣಪ್ಪ ಸೀರಿ, ಡಾ| ಎಸ್.ಎಸ್. ಪಾಟೀಲ, ಶರಣು ಟೆಂಗಳಿ, ಮಚೇಂದ್ರನಾಥ ಮೂಲಗೆ, ರಾಜುಗೌಡ
ನಾಗನಹಳ್ಳಿ, ಗೌರಿ ಚಿಚಕೋಟೆ, ಡಾ| ನಾಗವೇಣಿ ಪಾಟೀಲ, ಡಾ| ಶರಣ ಪಾಟೀಲ, ಎಂ.ಎಸ್. ಪಾಟೀಲ, ಚನ್ನಪ್ಪ ಡಿಗ್ಗಾವಿ, ಸಿದ್ದುಗೌಡ ಅಫಜಲಪುರಕರ್ ಹಾಜರಿದ್ದರು.