ಕಲಬುರಗಿ: ಸಿನಿಮಾದಲ್ಲಿ ಸಾರ್ವಜನಿಕರು ಒಂದು ದಿನದ ಸಿಎಂ ಹಾಗೂ ಜಿಲ್ಲಾಧಿಕಾರಿ ಆಗಿ ಕಾರ್ಯನಿರ್ವಹಿಸಿದ್ದನ್ನು ನೋಡಿದ್ದೇವೆ. ಅದೇ ತೆರನಾಗಿ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸಬೇಕೆಂಬ ಅಭಿಲಾಷೆ ಹೊಂದಿರುವ ವಿದ್ಯಾರ್ಥಿನಿಯೊಬ್ಬರು ಕಂಡಕ್ಟರ್ ಆಗಿ ಕಾರ್ಯನಿರ್ವಹಿಸಿದ ಅಪರೂಪದ ಘಟನೆ ನಡೆದಿದೆ.
ಅಫಜಲಪುರ ಪಟ್ಟಣದಿಂದ ಘತ್ತರಗಾ ಗ್ರಾಮ ಮಾರ್ಗವಾಗಿ ಸಂಚರಿಸುವ ಬಸ್ ನಲ್ಲಿ ವಿದ್ಯಾರ್ಥಿನಿ ವಿದ್ಯಾ ಟಿಕೆಟ್ ವಿತರಣೆ ಮಾಡಿದ್ದಾರೆ.
ಘತ್ತರಗಾ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ವಿದ್ಯಾ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾರ್ಥಿನಿ ಕಂಡಕ್ಟರ್ ಆಗುವ ಆಸೆ ಹೊಂದಿದ್ದು, ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವ ಕನಸ್ಸು ಕಟ್ಟಿಕೊಂಡಿದ್ದಾರೆ.
ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುವ ಅಭಿಲಾಷೆ ಹೊಂದಿದ್ದ ವಿದ್ಯಾರ್ಥಿನಿ ಸಾರಿಗೆ ಇಲಾಖೆ ಅಧಿಕಾರಿಗಳ ಮೊರೆ ಹೊಗಿದ್ದರು. ಆಕೆಯ ಮನವಿ ಪುರಸ್ಕರಿಸಿದ್ದ ಅಧಿಕಾರಿಗಳು ಟಿಕೆಟ್ ವಿತರಣೆಯ ತರಬೇತಿ ನೀಡಿದ್ದರು. ಅದರಂತೆ ವಿದ್ಯಾರ್ಥಿನಿ ವಿದ್ಯಾ ಬಸ್ಸಿನಲ್ಲಿ ಪ್ರಯಾಣಿಕರಿಗೆ ಶಕ್ತಿ ಯೋಜನೆ ಹಾಗೂ ಸಾಮಾನ್ಯ ಟಿಕೆಟ್ ವಿತರಿಸಿದ್ದಾರೆ.
ವಿದ್ಯಾರ್ಥಿನಿ ವಿದ್ಯಾ ಬಸ್ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.