ಕಲಬುರಗಿ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಐತಿಹಾಸಿಕ ಖಾಜಾ ಬಂದೇನವಾಜ್ ದರ್ಗಾ ಆವರಣದಲ್ಲಿ 600 ವರ್ಷಗಳ ಪುರಾತನ ಬೃಹತ್ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಹತ್ತು ದಿನಗಳ ಹಿಂದೆ ಸುರಿದ ಮಳೆಗೆ ದರ್ಗಾದ ಮುಖ್ಯ ಗುಂಬಜ್ ಗೆ ಹಾನಿಯಾಗಿತ್ತು. ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ದರ್ಗಾದ ಮುಖ್ಯಸ್ಥ ಸೈಯದ್ ಶಹಾ ಖುಸ್ರೋ ಹುಸೇನಿ ಅವರ ವಾಸವಿರುವ ಮನೆಯ ಬೃಹತ್ ಗೋಡೆ ಕುಸಿದು ಬಿದ್ದಿದೆ.
ಮುಖ್ಯ ದ್ವಾರದ ಬಲ ಭಾಗ ನೆಲಕ್ಕೆ ಉರುಳಿದಿದೆ. ಯಾರಿಗೂ ಯಾವುದೇ ಅಪಾಯವಾಗಿಲ್ಲ. ದರ್ಗಾ ಮತ್ತು ಈ ಕಟ್ಟಡವನ್ನು 600 ವರ್ಷಗಳ ಹಿಂದೆ ಒಟ್ಟಿಗೆ ನಿರ್ಮಿಸಲಾಗಿತ್ತು. ಬಹುಮನಿ ಸಂಸ್ಥಾನದ ರಾಜ ಅಲ್ಲಾವುದ್ದೀನ್ ಬಹುಮನಿ ಕಾಲದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ದರ್ಗಾದ ಯದ್ದುಲ್ಲಾ ಹುಸೇನಿ (ನಿಜಾಮ್ ಬಾಬಾ) ತಿಳಿಸಿದ್ದಾರೆ.
ಪುರಾತನ ಕಟ್ಟಡವಾಗಿದ್ದರಿಂದ ಸಣ್ಣ-ಸಣ್ಣದಾಗಿ ಆಗಾಗ್ಗೆ ಅಲ್ಲಲ್ಲಿ ಕುಸಿಯುತ್ತಿತ್ತು. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ಗೋಡೆ ಕುಸಿತಗೊಂಡಿದೆ ಎಂದು ಅವರು ‘ಉದಯವಾಣಿ’ಗೆ ಮಾಹಿತಿ ನೀಡಿದರು.
ಇದನ್ನೂ ಓದಿ:ಕೇಸು ದಾಖಲಿಸಿ ರಾಜಕಾರಣ ಮಾಡುವ ಅಗತ್ಯ ನಮಗಿಲ್ಲ: ಡಿಕೆಶಿಗೆ ತಿರುಗೇಟು ನೀಡಿದ ಸಚಿವ ಸುಧಾಕರ್