ಕಲಬುರಗಿ: ದಾಖಲೆಯಿಲ್ಲದೇ ಸಾಗಿಸುತ್ತಿದ್ದ 30 ಲಕ್ಷ ಹಣ ಹಾಗೂ 2.50 ಲಕ್ಷ ರೂ ಮೌಲ್ಯದ ಬಟ್ಟೆ ಜಪ್ತಿ ಮಾಡಲಾಗಿದೆ.
ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮೆದಕ್ ಚೆಕ್ಪೋಸ್ಟ್ ನಲ್ಲಿ ಹಣ ಹಾಗೂ ಬಟ್ಟೆ ಜಪ್ತಿ ಮಾಡಲಾಗಿದೆ.
ಕಾರಿನ ಡಿಕ್ಕಿಯಲ್ಲಿ ದೊಡ್ಡದಾದ ಬಾಕ್ಸ್ನಲ್ಲಿ ಹಣ ಸಾಗಾಟ ಮಾಡಲಾಗುತ್ತಿತ್ತು. ಈ ವೇಳೆ ಮೆದಕ್ ಚೆಕ್ಪೋಸ್ಟ್ ಬಳಿ ಚುನಾವಣಾ ಸಿಬ್ಬಂದಿಗಳಿಂದ ಕಾರು ತಪಾಸಣೆ ಮಾಡಿದಾಗ ಪತ್ತೆಯಾಗಿದೆ.
ಸೂಕ್ತ ದಾಖಲೆಯಿಲ್ಲದೆ ಇರುವುದರಿಂದ 30 ಲಕ್ಷ ರೂ ಹಣದ ಜೊತೆ 2.50 ಲಕ್ಷ ರೂ ಮೌಲ್ಯದ ಬಟ್ಟೆ ಜಪ್ತಿಯಾಗಿದ್ದು, ಈ ವೇಳೆ ಹಣ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನವಾಗಿದೆ.
ನಾರಾಯಣಪೇಟೆಯಿಂದ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಕೊಡಂಗಲ್ಗೆ ಹಣ ಸಾಗಾಟ ಮಾಡುತ್ತಿದ್ದರು. ಕರ್ನಾಟಕ- ತೆಲಂಗಾಣ ಗಡಿಗೆ ಮೆದಕ್ ಚೆಕ್ಪೋಸ್ಟ್ ಹೊಂದಿಕೊಂಡಿದೆ.