Advertisement
ಪ್ರತಿದಿನ ನಾಲ್ಕೈದು ಹಳ್ಳಿಗಳಿಗೆ ಸಂಚರಿಸಿ ಜನರಿಗೆ ಧೈರ್ಯ ತುಂಬುವುದರೊಂದಿಗೆ ಜನರಿಗೆ ಅಗತ್ಯವಾದ ಬಟ್ಟೆಬರೆ-ಧವಸಧಾನ್ಯ ನೀಡಿದ್ದರು ಎಂಬುದನ್ನು ಜಿಲ್ಲೆಯ ಹಿರಿಯ ಜೀವಿಗಳು ಈಗಲೂ ಸ್ಮರಿಸುತ್ತಾರೆ. ನಗರದ ಮೋಹನ್ ಲಾಡ್ಜ್ ಹಿಂದುಗಡೆ ಇದ್ದ ಪಾದೂರು ರಾಮಕೃಷ್ಣ ತಂತ್ರಿ ಅವರ ಮನೆಯಲ್ಲಿ ತಂಗಿದ್ದ ಶ್ರೀಗಳು ಪ್ರತಿನಿತ್ಯ ಬೆಳಗ್ಗೆ ಪೂಜಾ ಕಾರ್ಯ ಮುಗಿಸಿ ಹಳ್ಳಿ-ಹಳ್ಳಿಗೆ ಹೋಗುತ್ತಿದ್ದರು. ಸಂಜೆ ಕಲಬುರಗಿ ನಗರಕ್ಕೆ ಬಂದು ಸಭೆಗಳನ್ನು ನಡೆಸುತ್ತಿದ್ದರು. ಇವರ ಜತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ, ಪಾದೂರು ರಾಮಕೃಷ್ಣ ತಂತ್ರಿ ಹಾಗೂ ಇತರರು ಜತೆಗೆ ತೆರಳುತ್ತಿದ್ದರು.
Related Articles
Advertisement
ಪೇಜಾವರ ಸೈನ್ಯ ಸ್ಥಾಪನೆ: ಕಲಬುರಗಿ ನಗರದೊಂದಿಗೆ ಪೂಜ್ಯರಿಗಿರುವ ಗುರು-ಶಿಷ್ಯ ಸಂಬಂಧ ಚಿರಸ್ಥಾಯಿಯಾಗಿ ಉಳಿಸುವ ನಿಟ್ಟಿನಲ್ಲಿ ಕಲಬುರಗಿ ನಗರದಲ್ಲಿ ಪೇಜಾವರ ಶ್ರೀಗಳ ಹೆಸರಿನಲ್ಲಿ ಪೇಜಾವರ ಸೈನ್ಯ ಸ್ಥಾಪಿಸಲಾಗಿದೆ.