Advertisement

8ರಿಂದ ಜಿಲ್ಲೆಯಾದ್ಯಂತ ಕಲಾ ಜಾಥಾ ಕಾರ್ಯಕ್ರಮ

03:55 PM Apr 06, 2019 | Team Udayavani |

ಯಾದಗಿರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಎರಡನೇ ಹಂತದಲ್ಲಿ ಏ.8ರಿಂದ 17ರ ವರೆಗೆ ಕಲಾತಂಡಗಳ ಮೂಲಕ 210 ಕಲಾ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಪಂ ಉಪ ಕಾರ್ಯದರ್ಶಿ ವಸಂತ ವಿ.ಕುಲಕರ್ಣಿ ತಿಳಿಸಿದರು. ಜಿಪಂ ಉಪಕಾರ್ಯದರ್ಶಿ ಕಚೇರಿಯಲ್ಲಿ ಶುಕ್ರವಾರ ಲೋಕಸಭೆ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಸ್ವೀಪ್‌ ಸಮಿತಿ ಕಾರ್ಯಚಟುವಟಿಕೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಕಲಾಜಾಥಾ ಕಾರ್ಯಕ್ರಮ ಏರ್ಪಡಿಸಲು 7 ಕಲಾತಂಡ ಆಯ್ಕೆ ಮಾಡಲಾಗಿದೆ. ಅದರಂತೆ 210 ಕಲಾ ಜಾಥಾ ಕಾರ್ಯಕ್ರಮಗಳನ್ನು ಕಲಾತಂಡಗಳಿಗೆ ಹಂಚಿಕೆ ಮಾಡಬೇಕು. ಕಲಾ ಜಾಥಾ ಮುಗಿಯುವವರೆಗೂ ತಂಡಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಮತದಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕೆಂದು ತಿಳಿಸಿದ ಅವರು, ಕಾರ್ಯಕ್ರಮ ನಡೆಸುವ ಸ್ಥಳ ಅಂತಿಮಗೊಳಿಸಿ, ಪ್ರತಿ ತಂಡಕ್ಕೆ ಒಬ್ಬ ನೋಡಲ್‌ ಅಧಿಕಾರಿ ನೇಮಕ ಮಾಡಿದರು.

ದಮನಿತ/ ವಿಶೇಷ ವರ್ಗದ ಮಹಿಳೆಯರಿಗಾಗಿ ಏ.12ರಂದು ಯಾದಗಿರಿ ಬಾಲಭವನದಲ್ಲಿ ಮತದಾನ ಜಾಗೃತಿ ವಿಶೇಷ ಕಾರ್ಯಕ್ರಮ ಆಯೋಜಿಸಬೇಕು. ಜಿಲ್ಲೆಯಲ್ಲಿ 2.50 ಲಕ್ಷ ಕುಟುಂಬಗಳಿವೆ ಎಂದು ಅಂದಾಜಿಸಲಾಗಿದೆ. ಕುಟುಂಬಕ್ಕೆ ಒಂದರಂತೆ 2.50 ಲಕ್ಷ ಮತದಾರ ಮಾರ್ಗದರ್ಶಿ ಮುದ್ರಿಸಲು ಕ್ರಮ ವಹಿಸಬೇಕು. 7,500 ಇತರೆ 5 ಪೋಸ್ಟರ್‌ ಮುದ್ರಿಸಬೇಕು ಎಂದು ಸಂಬಂಧಪಟ್ಟ ಅ ಧಿಕಾರಿಗಳಿಗೆ ತಿಳಿಸಿದರು.

ಚುನಾವಣೆ ರಾಯಭಾರಿಯಿಂದ ಕಾರ್ಯಕ್ರಮ: ಜಿಲ್ಲೆಯಲ್ಲಿ ಮತದಾನ ಜಾಗೃತಿ ಮೂಡಿಸುವ ಕಾರ್ಯಚಟುವಟಿಕೆಗಳಿಗಾಗಿ ಜಿಲ್ಲಾ ಚುನಾವಣೆ ರಾಯಭಾರಿಗಳಾಗಿ ನೇಮಕರಾದ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಜಿಲ್ಲೆಯಾದ್ಯಂತ ಹೋಬಳಿಗೊಂದರಂತೆ ನೀಡಿದ 16 ಕಾರ್ಯಕ್ರಮ ಯಶಸ್ವಿಯಾಗಿವೆ. ಅದರಂತೆ 2ನೇ ಸುತ್ತಿನಲ್ಲಿ ನೂತನ ತಾಲೂಕು ಸೇರಿದಂತೆ 6 ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಸೂಚಿಸಿದರು.

ಸರಿಯಾಗಿ ಕಣ್ಣು ಕಾಣದ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಅವಶ್ಯಕತೆಗೆ ಅನುಗುಣವಾಗಿ ಮ್ಯಾಗ್ನಿಫೈಯಿಂಗ್‌ ಗ್ಲಾಸ್‌ ಖರೀದಿಸಬೇಕು ಎಂದು ತಾಪಂ ಇಒಗೆ ಉಪ ಕಾರ್ಯದರ್ಶಿಗಳು ಸೂಚಿಸಿದರು. ಇದೇ ಸಂದರ್ಭದಲ್ಲಿ ಮತಗಟ್ಟೆವಾರು ವಿಕಲಚೇತನ ಮತದಾರರ ವಿವರ ಪಡೆದು
ಅಂತಿಮ ವರದಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ವಿಕಲಚೇತನ
ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ
ಶರಣಪ್ಪ ಪಾಟೀಲ್‌ ಸಭೆಗೆ ಮಾಹಿತಿ ನೀಡಿದರು.

Advertisement

ಜಿಲ್ಲೆಯ 88 ಗ್ರಾಮಗಳ 106 ಮತಗಟ್ಟೆಗಳಲ್ಲಿ ಶೌಚಾಲಯ ನಿರ್ಮಾಣ ಮತ್ತು ದುರಸ್ತಿಗಾಗಿ 26.40 ಲಕ್ಷ ರೂ. ನಿಗದಿಪಡಿಸಲಾಗಿದೆ. ಇವುಗಳಲ್ಲಿ 18 ಹೊಸ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದ್ದು, ಉಳಿದ 70 ದುರಸ್ತಿ ಕಾರ್ಯ
ನಡೆಸಲಾಗುತ್ತಿದೆ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್‌) ಎಇಇ ಧನಂಜಯ ವರದಿ ನೀಡಿದರು.

ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ಇಲಾಖೆ ಇಇ ಶ್ರೀಕಾಂತ ಹದ್ನಾಳ ಮಾತನಾಡಿ, ತಮಗೆ ವಹಿಸಿದ 44 ಮತಗಟ್ಟೆಗಳಲ್ಲಿ ರ್‍ಯಾಂಪ್‌ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು. ಮತದಾನ ದಿನದಂದು ಮತಗಟ್ಟೆ ಹೊರಗಿನ ವ್ಯಾಪ್ತಿಯಲ್ಲಿ ಎಆರ್‌ಒ ಇವರು ಜರುಗಿಸುವ ಚಟುವಟಿಕೆಗಾಗಿ
ಸಹಾಯಕರು / ಸ್ವಯಂ ಸೇವಕರ ನಿಗದಿ, ಸಖೀ ಮತ್ತು ಪಿಡಬ್ಲೂಡಿ ಮತಗಟ್ಟೆಗಳ ಸಿದ್ಧತೆ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಜಂಟಿ ಕೃಷಿ ನಿರ್ದೇಶಕ ದೇವಿಕಾ ಆರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶ್ರೀಶೈಲ್‌ ಬಿರಾದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ, ಕೃಷಿ ಇಲಾಖೆ ಉಪನಿರ್ದೇಶಕರಾದ ಅನುಸೂಯಾ ಹೂಗಾರ, ತಾಪಂ ಕಾರ್ಯನಿರ್ವಾಹಕ ಅಧಿ ಕಾರಿಗಳಾದ ಜಗದೇವಪ್ಪ, ಚಂದ್ರಶೇಖರ ಪವಾರ, ನೈಸರ್ಗಿಕ ಸಂಪನ್ಮೂಲಗಳ ದತ್ತಾಂಶ ನಿರ್ವಹಣಾ ಕೇಂದ್ರದ ಅ ಧಿಕಾರಿ ಸಿದ್ಧಾರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ರಾಧಾ ಜಿ.ಮಣ್ಣೂರ, ವಿಷಯ ನಿರ್ವಾಹಕ ಶಿವಾನಂದ ಸ್ವಾಮಿ ಉಪಸ್ಥಿತರಿದ್ದರು.

ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಬೈಕ್‌ ರ್ಯಾಲಿ ಏರ್ಪಡಿಸಲಾಗಿದೆ. ರ್ಯಾಲಿ ಏ.8ರಂದು ಬೆಳಗ್ಗೆ 9ಕ್ಕೆ ಜಿಲ್ಲಾಡಳಿತ ಭವನದಿಂದ ಸುಭಾಷ್‌ ವೃತ್ತ, ಮುದ್ನಾಳ ಪೆಟ್ರೋಲ್‌ ಬಂಕ್‌, ಡಾ|
ಬಿ.ಆರ್‌. ಅಂಬೇಡ್ಕರ್‌ ವೃತ್ತ ಮಾರ್ಗವಾಗಿ ಗಾಂಧಿ
ವೃತ್ತದವರೆಗೆ ನೆಡಯಲಿದೆ. ಬೈಕ್‌ ರ್ಯಾಲಿ ಯಶಸ್ವಿಗಾಗಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆಗಳಿಗೆ ವಹಿಸಿದ ಜವಾಬ್ದಾರಿಯಂತೆ ಕಾರ್ಯನಿರ್ವಹಿಸಬೇಕು. ಮತದಾರರ ಜಾಗೃತಿಗಾಗಿ ಘೋಷಣಾ ಫಲಕ ತಯಾರಿಸಬೇಕು.
ವಸಂತ ವಿ.ಕುಲಕರ್ಣಿ,
ಜಿಪಂ ಉಪ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next