Advertisement
ಈ ರಸ್ತೆ ಈ ಕಳೆದ ಐದಾರು ತಿಂಗಳ ಹಿಂದೆ 1.93 ಕೋ.ರೂ.ವೆಚ್ಚದಲ್ಲಿ ಕಾಂಕ್ರೀಟ್‌ನೊಂದಿಗೆ ಅಭಿವೃದ್ಧಿಗೊಂಡಿತ್ತು.ಈ ಸಂದರ್ಭ ಇಲ್ಲಿನ ಮೋರಿಯೊಂದನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿತ್ತು.ಇದೀಗ ಆ ಮೋರಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಂಪರ್ಕ ಸ್ಥಗಿತಗೊಂಡಿದೆ.
ಈಗ ಮತ್ತೆ ಮೋರಿ ಅಳವಡಿಸಿ ತಾತ್ಕಾಲಿಕ ತೇಪೆ ಹಾಕಲಾಗಿದೆ.ಆದರೆ ನೀರಿನ ಒತ್ತಡ ಹೆಚ್ಚಿದಂತೆ ಸಮಸ್ಯೆ ಮತ್ತೆ ಮರುಕಳಿಸಲಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.ಮೋರಿ ಕುಸಿತದಿಂದ ಸ್ಥಳೀಯರು ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹತ್ತಾರು ಕಿ.ಮೀ. ಸುತ್ತಿಬಳಸಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.