ಕಕ್ಕೇರಾ: ಸುಮಾರು ವರ್ಷಗಳಿಂದ ಅಭಿವೃದ್ಧಿಯಾಗದೆ ಹಾಗೇ ಉಳಿದಿದ್ದ ಸೋಮನಾಥ ಕೆರೆ ಈಗ ಹುಳು ಮುಕ್ತವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮೇನಲ್ಲಿ 12 ಲಕ್ಷ ರೂ. ಅನುದಾನದಲ್ಲಿ ಸೋಮನಾಥ ಕೆರೆ ಹೂಳು ಎತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ಒಂದೂವರೆ ತಿಂಗಳಲ್ಲಿಯೇ ಸಂಪೂರ್ಣ ಹೂಳೆತ್ತಿ ಈಗ ಸಂಪೂರ್ಣ ಅಭಿವೃದ್ಧಿ ಮಾಡಲಾಗಿದೆ. ಇದರಿಂದಾಗಿ ಈ ಭಾಗದ ಜೀವ ಸಂಕುಲಕ್ಕೆ ಆಸರೆಯಾಗಿದೆ.
Advertisement
ಹೊಳೆತ್ತದೆ ಇದ್ದಿದ್ದರಿಂದ ಪ್ರತಿ ವರ್ಷ ಬೇಸಿಗೆ ವೇಳೆ ಸೋಮನಾಥ ಕೆರೆ ನೀರಿಲ್ಲದೆ ಬಣಗುಡುತಿತ್ತು. ಹೀಗಾಗಿ ಜಾನುವಾರುಗಳು ನೀರಿಗಾಗಿ ಪರಿತಪಿಸಬೇಕಾಗಿತ್ತು. ಅನೇಕ ವರ್ಷಗಳಿಂದಲೂ ನೀರಿನ ಸಮಸ್ಯೆ ಎದುರಾಗಿತ್ತು. ಆದರೆ ಈಗ ಕೆರೆ ಪುನಶ್ಚೇತನಗೊಂಡು ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗಿದೆ.
Related Articles
Advertisement
ಕೆರೆ ಐತಿಹಾಸ: ಸೋಮನಾಥ ಕೆರೆಗೆ ಐತಿಹಾಸಿಕ ಹಿನ್ನೆಲೆ ಇದೆ. ಈ ಹಿಂದೆ ಕುಡಿಯವ ನೀರಿನ ಸಮಸ್ಯೆ ಉಂಟಾಗದಂತೆ ಅಂದಿನ ಸುರಪುರ ಸಂಸ್ಥಾನದ ಗಡ್ಡಿಪಿಡ್ಡನಾಯಕನ ಆಡಳಿತಾವಧಿಯಲ್ಲಿ ಕೆರೆ ನಿರ್ಮಿಸಲಾಗಿದೆ. ಹೀಗಾಗಿ ಸೋಮನಾಥ ಕೆರೆ ಎಂದು ಪ್ರಸಿದ್ಧಿ ಪಡೆದಿದೆ ಎಂದು ಹಿರಿಯರು ಸ್ಮರಿಸುತ್ತಾರೆ.